ಬೆಂಗಳೂರು: ಹೋಂಡಾ ಮೋಟರ್‌ಸೈಕಲ್ಸ್ ಆ್ಯಂಡ್ ಸ್ಕೂಟರ್ ಇಂಡಿಯಾ ಕಂಪನಿಯು ಮಧ್ಯಮ ಗಾತ್ರದ ಸಿಬಿ350ಆರ್‌ಎಸ್ ಬೈಕ್ ಅನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಎಕ್ಸ್ ಷೋರೂಂ ಬೆಲೆ ₹ 1.90 ಲಕ್ಷ ಇದೆ. ಮಂಗಳವಾರದಿಂದಲೇ ಬುಕಿಂಗ್‌ಗೆ ಅವಕಾಶ ನೀಡಲಾಗಿದೆ. ಸಿಬಿ ಕುಟುಂಬದ ಎರಡನೇ ಹೊಸ ಮೋಟರ್‌ಸೈಕಲ್ ಇದಾಗಿದೆ.

‘ಮೋಟರ್‌ಸೈಕಲ್ ಉತ್ಸಾಹಿಗಳ ಕನಸುಗಳನ್ನು ಸಾಕಾರಗೊಳಿಸುವುದನ್ನು ಬ್ರ್ಯಾಂಡ್ ಸಿಬಿ ಪ್ರತಿನಿಧಿಸುತ್ತದೆ. 1959ರಲ್ಲಿ ಮಾರುಕಟ್ಟೆಗೆ ಸಿಬಿ92 ಪರಿಚಯಿಸಿದ ದಿನದಿಂದ ಇಲ್ಲಿಯವರೆಗೆ ಇದು ತಂತ್ರಜ್ಞಾನದ ಎಲ್ಲೆಗಳನ್ನು ಮೀರಿ ಬೆಳೆದಿದೆ. ಕಾರ್ಯಕ್ಷಮತೆ, ಆರಾಮ, ಶೈಲಿ, ತಂತ್ರಜ್ಞಾನ ಮತ್ತು ವಿಶ್ವಾಸಾರ್ಹತೆಯ ಸುಂದರ ಪ್ರತೀಕ ಇದಾಗಿದ’ ಎಂದು ಕಂಪನಿಯ ಅಧ್ಯಕ್ಷ ಅತ್ಸುಶಿ ಒಗಾಟಾ ಹೇಳಿದರು.

‘ಸವಾರರ ಜೀವನಶೈಲಿಗೆ ಸರಿಹೊಂದುವ ಬಗೆಯಲ್ಲಿ ಅತ್ಯಾಧುನಿಕ ನಗರ ಶೈಲಿ ಮತ್ತು ಶಕ್ತಿಯುತ ಸುಧಾರಿತ 350ಸಿಸಿ ಎಂಜಿನ್ ಜತೆಗೆ ಇದನ್ನು ರೂಪಿಸಲಾಗಿದೆ’ ಎಂದು ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ತಿಳಿಸಿದರು.

4 ಸ್ಟ್ರೋಕ್ 3500 ಸಿಸಿ ಎಂಜಿನ್ 5,500 ಆರ್‌ಪಿಎಂನಲ್ಲಿ ಗರಿಷ್ಠ 15.5ಕಿಲೊವಾಟ್ ಶಕ್ತಿ ಉತ್ಪಾದಿಸಬಲ್ಲದು. ಗಿಯರ್ ಶಿಫ್ಟ್ ಮೃದುವಾಗಿಸಲು ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಒಳಗೊಂಡಿದೆ. ಡಿಜಿಟಲ್ ಅನಲಾಗ್ ಮೀಟರ್‌ನಲ್ಲಿ ಟಾರ್ಕ್ ಕಂಟ್ರೋಲ್, ಎಬಿಎಸ್, ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ವಿತ್ ಎಂಜಿನ್ ಎಕ್ಸಿಬಿಟರ್, ಗಿಯರ್ ಪೊಸಿಷನ್ ಇಂಡಿಕೇಟರ್ ಮತ್ತು ಬ್ಯಾಟರಿ ವೊಲ್ಟೋಜ್ ಮಾಹಿತಿಗಳನ್ನು ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.