ನವದೆಹಲಿ: ಭಾರತದ ಯಮಹಾ ಮೋಟಾರ್ ಕಂಪನಿಯು ಸೂಪರ್‌ಸ್ಫೋರ್ಟ್ ಮೋಟರ್‌ಸೈಕಲ್ ವೈಝಡ್‌ಎಫ್–ಆರ್15ಎಂ (YZF-R15M) ವಾರ್ಷಿಕೋತ್ಸವದ ಆವೃತ್ತಿಯನ್ನು ಸೋಮವಾರ ಬಿಡುಗಡೆ ಮಾಡಿದೆ. 155ಸಿಸಿಯ ಈ ಬೈಕ್‌ಗೆ ₹1.88 ಲಕ್ಷ ಬೆಲೆ (ದೆಹಲಿಯ ಎಕ್ಸ್–ಶೋರೂಂ ಬೆಲೆ) ನಿಗದಿಯಾಗಿದೆ.

ಜನಪ್ರಿಯ 'ಎಂಟಿ–15' ಮಾದರಿಯ ಬೈಕ್‌ನ ಹೊಸ ಆವೃತ್ತಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಕಂಪನಿಯು ಪ್ರಕಟಿಸಿದೆ. ಆ ಬೈಕ್‌ನ ಆರಂಭಿಕ ಬೆಲೆ ₹1.6 ಲಕ್ಷ ಇದೆ.

60ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಇಂಡಿಯಾ ಯಮಹಾ ಮೋಟಾರ್ ಪ್ರೈವೇಟ್ ಲಿಮಿಟೆಡ್ 'ವೈಝಡ್‌ಎಫ್–ಆರ್15ಎಂ' ವಿಶೇಷ ಆವೃತ್ತಿ ಬಿಡುಗಡೆಯಾಗಿದೆ. '1961ರಿಂದ ಯಮಹಾ ಈವರೆಗೂ 500ಕ್ಕೂ ಹೆಚ್ಚು 'ವರ್ಲ್ಡ್ ಗ್ರ್ಯಾಂಡ್ ಪ್ರಿಕ್ಸ್' ರೇಸಿಂಗ್ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿರುವ ಮೈಲಿಗಲ್ಲನ್ನು ಈ ಆವೃತ್ತಿಯ ಬೈಕ್ ಸಾರುತ್ತದೆ' ಎಂದು ಯಮಹಾ ಮೋಟಾರ್ ಇಂಡಿಯಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಈಶಿನ್ ಚಿಹಾನಾ ಹೇಳಿದ್ದಾರೆ.

ಇದನ್ನೂ ಓದಿ–ರಾಯಲ್ ಎನ್ಫೀಲ್ಡ್ 'ಸ್ಕ್ರ್ಯಾಮ್ 411' ಬಿಡುಗಡೆ: ಆರಂಭಿಕ ಬೆಲೆ ₹2.03 ಲಕ್ಷ

'ವೈಝಡ್‌ಎಫ್–ಆರ್15ಎಂ' ಬೈಕ್‌ನಲ್ಲಿ 155ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದ್ದು, 10,000 ಆರ್‌ಪಿಎಂನಲ್ಲಿ ಗರಿಷ್ಠ 18.4 ಪಿಎಸ್ ಶಕ್ತಿ ಹೊಮ್ಮಿಸುವ ಸಾಮರ್ಥ್ಯ ಹೊಂದಿದೆ ಹಾಗೂ 6 ಸ್ಪೀಡ್ ಗೇರ್‌ಬಾಕ್ಸ್ ಇದೆ.

ಎಂಟಿ–15 ಬೈಕ್‌ನ 2.0 ಆವೃತ್ತಿಯಲ್ಲಿ ಬ್ರೇಕಿಂಗ್ ವ್ಯವಸ್ಥೆ ಉನ್ನತೀಕರಿಸಲಾಗಿದೆ ಹಾಗೂ ಹೊಸ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್, ಬ್ಲೂಟೂಥ್ ವೈ ಕನೆಕ್ಟ್ ಆ್ಯಪ್‌ನೊಂದಿಗೆ ಸಂಪರ್ಕ ವ್ಯವಸ್ಥೆ ನೀಡಲಾಗಿದೆ. ಈ ಬೈಕ್‌ನಲ್ಲೂ 155ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಇದ್ದು, 18.4ಪಿಎಸ್ ಶಕ್ತಿ ಹೊಮ್ಮಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.