ಬೆಂಗಳೂರಿನಲ್ಲಿ ಸಿಕ್ಕ ಉತ್ತಮ ಸ್ಪಂದನೆ ಸ್ಪೂರ್ತಿಯಿಂದ ಏಥರ್ ಎನರ್ಜಿ ಕಂಪನಿ ಏಥರ್ 450 ವಾಹನವನ್ನೂ ಚೆನ್ನೈಗೂ ಪರಿಚಯಿಸಿ ಮಾರುಕಟ್ಟೆಯನ್ನು ವಿಸ್ತರಿಸಿದೆ. ಈಗಾಗಲೇ ವಾಹನದ ಮುಂಗಡ ಕಾಯ್ದಿರುವಿಕೆಗೂ ಚಾಲನ ನೀಡಿದೆ. ಏಥರ್ 450 ಉದ್ಘಾಟನೆಗೂ ಒಂದು ವಾರ ಮುನ್ನ, ಚೆನ್ನೈನಲ್ಲಿ ಟೆಸ್ಟ್ ರೈಡ್ ಕಾರ್ಯಕ್ರಮಗಳನ್ನೂ ಆಯೋಜಿಸಿತ್ತು. ಇದರ ಅಂಗವಾಗಿ ಬೆಂಗಳೂರಿನಲ್ಲಿ ಈ ವಾಹನ ಖರೀದಿಸಿದ್ದ 50ಕ್ಕೂ ಹೆಚ್ಚು ಮಾಲೀಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಹನದೊಂದಿಗಿನ ತಮ್ಮ ಚಾಲನಾ ಅನುಭವಗಳನ್ನು ಹಂಚಿಕೊಂಡಿದ್ದಾರು. ಹೀಗಾಗಿ ಪ್ರಿ–ಬುಕಿಂಗ್ 2018ರ ನವೆಂಬರ್‌ಗೆ ಮುಗಿದಿತ್ತು. ಪ್ರಸ್ತುತ ಸಂಸ್ಥೆಯು ಎರಡನೇ ಹಂತದ ಬುಂಕಿಗ್ ಆರಂಭಿಸಿದೆ.

ಇದೇ 24ರಂದು ಚೆನ್ನೈನ ನುಂಗಬಾಕಂನಲ್ಲಿ ಸಂಸ್ಥೆಯು, ಮಳಿಗೆ ತೆರಯಲಿದ್ದು, ಗ್ರಾಹಕರು ಟೆಸ್ಟ್ ರೈಡ್ ಮಾಡುವುದಕ್ಕೆ ಅವಕಾಶ ಕಲ್ಪಿಸಲಿದೆ. ಇದರ ಮೂಲಕ ವಿದ್ಯುತ್ ಚಾಲಿತ ವಾಹನಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸದಂತಾಗುತ್ತದೆ ಎಂಬುದು ಸಂಸ್ಥೆಯ ಅಭಿಪ್ರಾಯ. ಈಗಾಗಲೇ ಸಂಸ್ಥೆಯು, ಚೆನ್ನೈ ನಗರದಲ್ಲಿ ಹಲವು ಚಾರ್ಜಿಂಗ್ ಕೇಂದ್ರಗಳನ್ನು ತೆರೆದಿದ್ದು, ಮಾಲ್‌ಗಳು, ರೆಸ್ಟೊರೆಂಟ್‌ಗಳಲ್ಲಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೇ, ವಿದ್ಯುತ್ ಚಾಲಿತ, ಪರಿಸರ ಸ್ನೇಹಿ ವಾಹನಗಳಿಗೆ ಉತ್ತೇಜನ ನೀಡಲು 2019ರ ಡಿಸೆಂಬರ್ ವರೆಗೂ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಉಚಿತವಾಗಿ ಚಾರ್ಜ್ ಮಾಡುವುದಾಗಿ ತಿಳಿಸಿದೆ. ಬೆಂಗಳೂರು ಮತ್ತು ಚೆನ್ನೈನಲ್ಲಿ ಉತ್ಪದನಾ ಪ್ರಮಾಣವನ್ನೂ ಹೆಚ್ಚಿಸುತ್ತಿದೆ. ಹೀಗಾಗಿ ಪೂರೈಕೆಯಲ್ಲೂ ಪ್ರಗತಿ ಕಂಡುಬರುತ್ತಿದೆ.

ಎರಡು ಹೆಲ್ಮೆಟ್ ಮತ್ತು ಫೇಮ್–2 ರಿಯಾಯಿತಿ ಕೂಡ ಸಿಗುತ್ತಿದೆ. ಸಂಸ್ಥೆಯೇ ಮನೆಗಳಲ್ಲಿ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಚಾರ್ಜಿಂಗ್ ಮಾಡುವ ವ್ಯವಸ್ಥೆ ಮಾಡಿಕೊಡಲಿದೆ. ಏಥರ್ 450ಗೆ ₹1,31,683, ಬೆಲೆ ನಿಗದಿಪಡಿಸಲಾಗಿದ್ದು, ಏಥರ್ 340 ಆನ್‌ರೊಡ್ ಬೆಲೆ ₹1,19,091. (ವಿಮೆ, ರಸ್ತೆ ತೆರಿಗೆ, ಜಿಎಸ್‌ಟಿ ಮತ್ತು ಇತರೆ ಶುಲ್ಕಗಳು ಸೇರಿದಂತೆ ಚೆನ್ನೈ ಮಾರುಕಟ್ಟೆ ದರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.