ನವದೆಹಲಿ: ಖಾತೆಯಲ್ಲಿ ಬಾಕಿ ಮೊತ್ತ ಇದ್ದರೂ ಕೆವೈಸಿ (Know Your Customer) ಪೂರ್ಣಗೊಳಿಸದ ಫಾಸ್ಟ್ಯಾಗ್ ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸೋಮವಾರ ಎಚ್ಚರಿಕೆ ನೀಡಿದೆ.

ಕೆವೈಸಿ ಪೂರ್ಣಗೊಳಿಸಿರದೇ ಇದ್ದರೆ ಬ್ಯಾಂಕ್ ಕಡೆಯಿಂದ FasTag ಖಾತೆಗಳು ಜನವರಿ 31 ರಿಂದ ನಿಷ್ಕ್ರಿಯ ಆಗಲಿವೆ ಎಂದು NHAI ತಿಳಿಸಿದೆ.

ಟೋಲ್ ಪ್ಲಾಜಾಗಳಲ್ಲಿ ಎಲೆಕ್ಟ್ರಾನಿಕ್ ಟೋಲ್ ವ್ಯವಸ್ಥೆಯನ್ನು ಸುಗಮಗೊಳಿಸಲು ಹಾಗೂ ತಡೆರಹಿತ ಸೇವೆ ಒದಗಿಸಲು NHAI, 'One Vehicle-One FasTag' ಎಂಬ ಪರಿಕಲ್ಪನೆಯನ್ನು ಜಾರಿಗೊಳಿಸಿದೆ. ಇದರಿಂದ ಹಲವು ವಾಹನಗಳಿಗೆ ಒಂದೇ FasTag ಹೊಂದುವುದು ಅಥವಾ ಒಂದೇ ವಾಹನಕ್ಕೆ ಹಲವು FasTag ಗಳನ್ನು ಹೊಂದುವುದನ್ನು ಇದು ತಪ್ಪಿಸುತ್ತದೆ.

ಕೆವೈಸಿ ಪೂರ್ಣಗೊಳಿಸಿಕೊಂಡಿರುವುದನ್ನು ಗ್ರಾಹಕರು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದರೇ ಜನವರಿ 31ರೊಳಗೆ ಪೂರ್ಣಗೊಳಿಸಿಕೊಳ್ಳಬೇಕು ಎಂದು ಅದು ಹೇಳಿದೆ.

One Vehicle-One FasTag ಪ್ರಕಾರವೇ ಬಳಕೆದಾರರು ನಡೆದುಕೊಳ್ಳುವುದು ಅನಿವಾರ್ಯ. ಅವರು ತಮ್ಮ ಹಿಂದಿನ ಹಲವು ಫಾಸ್ಟ್ಯಾಗ್ಗಳನ್ನು ರದ್ದುಗೊಳಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ.

ಬಳಕೆದಾರರು ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ತಮ್ಮ ಸನಿಹದ ಟೋಲ್ ಪ್ಲಾಜಾ ಅಥವಾ ತಮ್ಮ ಬ್ಯಾಂಕ್ ಸಂಪರ್ಕಿಸಬೇಕು ಎಂದು ತಿಳಿಸಿದೆ.

ಕೆವೈಸಿ ಪೂರ್ಣಗೊಳಿಸದೇ ಫಾಸ್ಟ್ಯಾಗ್ ಹೊಂದುವುದು ಆರ್ಬಿಐ ನಿಯಮಾವಳಿ ಪ್ರಕಾರ ತಪ್ಪು ಎಂದು ಅದು ತಿಳಿಸಿದೆ.

ಭಾರತದಲ್ಲಿ 8 ಕೋಟಿಗೂ ಅಧಿಕ ಬಳಕೆದಾರರು ಫಾಸ್ಟ್ಯಾಗ್ ಹೊಂದಿದ್ದಾರೆ.
.ಸಿಎಂ ಸಿದ್ದರಾಮಯ್ಯಗೆ ಸಂಸ್ಕೃತಿ ಶಬ್ದದ ಅರಿವಾಗಿದ್ದು ಸಂತೋಷ: ಅನಂತಕುಮಾರ ಹೆಗಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.