ಬೆಂಗಳೂರು: ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಕಂಪನಿಯು ತನ್ನ ಗ್ರಾಹಕರಿಗಾಗಿ ಇತ್ತೀಚೆಗೆ ಬೆಂಗಳೂರಿನ ಅರುನಿ ಗ್ರಿಡ್ನಲ್ಲಿ ವಿಶೇಷ ಟ್ರ್ಯಾಕ್ ಡೇ ಕಾರ್ಯಕ್ರಮ ಆಯೋಜಿಸಿತ್ತು.

‘ದಿ ಕಾಲ್ ಆಫ್ ದಿ ಬ್ಲೂ’ ಬ್ರ್ಯಾಂಡ್ ಅಭಿಯಾನದ ಭಾಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಯಮಹಾ ಮಾಲೀಕರು ಹಾಗೂ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ 300ಕ್ಕೂ ಹೆಚ್ಚು ಯಮಹಾ ಬೈಕ್ ಅಭಿಮಾನಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬೈಕ್ ಮಾಲೀಕರು ಟ್ರ್ಯಾಕ್ನಲ್ಲಿ ಮೋಟಾರ್ ಸೈಕಲ್ಗಳನ್ನು ಓಡಿಸುವ ಮೂಲಕ ರೋಮಾಂಚನ ಅನುಭವಿಸಿದರು. ಜತೆಗೆ, ಬೈಕ್ನಲ್ಲಿ ಲಭ್ಯವಿರುವ ತ್ವರಿತ ಶಿಫ್ಟರ್ಗಳು ಮತ್ತು ಟ್ರಾಕ್ಷನ್ ಕಂಟ್ರೋಲ್ ಫೀಚರ್ಗಳನ್ನು ಬಳಸಿ ರೇಸ್ನ ಅನುಭವ ಪಡೆದರು.

ಯಮಹಾ ಬೈಕ್ಗಳ ಪ್ರದರ್ಶನದ ಜೊತೆಗೆ ಆಕರ್ಷಕ ವೈಝಡ್ಎಫ್-ಆರ್3 ಮತ್ತು ಎಂಟಿ-03 ಪ್ರದರ್ಶನವೂ ನಡೆಯಿತು. ಯಮಹಾ ಇಂಡಿಯಾ ಶ್ರೇಣಿಯ ಈ ಎರಡು ಹೊಸ ಉತ್ಪನ್ನಗಳು ಆಯಾ ವಿಭಾಗಗಳಲ್ಲಿ ಅಪೂರ್ವ ಕಾರ್ಯಕ್ಷಮತೆ ಮತ್ತು ವಿಶೇಷ ಗುಣಮಟ್ಟ ಹೊಂದಿವೆ.

ಯಮಹಾ ಅಪ್ಯಾರಲ್ಸ್ ಆ್ಯಂಡ್ ಆಕ್ಸೆಸರೀಸ್ ಪ್ರದರ್ಶನ, ಫೋಟೊ-ಆಫ್ ಝೋನ್ ಮತ್ತು ಗೇಮಿಂಗ್ ಝೋನ್ ಸೇರಿದಂತೆ ಹಲವಾರು ಚಟುವಟಿಕೆಗಳನ್ನೂ ಆಯೋಜಿಸಲಾಗಿತ್ತು.

ರೇಸಿಂಗ್ ಪರಂಪರೆ ಮತ್ತು ಜಾಗತಿಕ ಮಟ್ಟದಲ್ಲಿ ಕಂಪನಿಯ ಗುರುತನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

‘ದಿ ಕಾಲ್ ಆಫ್ ದಿ ಬ್ಲೂ ಟ್ರ್ಯಾಕ್ ಡೇ ಆಕ್ಟಿವಿಟಿ’ಯಲ್ಲಿ ಯಮಹಾ ಕಂಪನಿಯು ದೇಶದಾದ್ಯಂತ 2024ರ ಅಪ್ಡೇಟ್ ಮಾಡಿರುವ ತನ್ನ ಉತ್ಪನ್ನಗಳು, ಅತ್ಯಾಕರ್ಷಕ ಸ್ಪೋರ್ಟಿ ಸ್ಟೈಲಿಷ್ ಬೈಕ್ಗಳ ಜೊತೆ ಗ್ರಾಹಕರು ಕಾಲ ಕಳೆಯುವ ಅವಕಾಶ ಮಾಡಿಕೊಡಲಾಗಿತ್ತು.

ಕಾರ್ಯಕ್ರಮದಲ್ಲಿ ಬೈಕ್ಗಳಾದ ವೈಝಡ್ಎಫ್ಆರ್3 (321 ಸಿಸಿ), ಎಂಟಿ-03 (321 ಸಿಸಿ), ವೈಝಡ್ಎಫ್-ಆರ್15 ವಿ4 (155 ಸಿಸಿ), ವೈಝಡ್ಎಫ್ ಆರ್15ಎಂ (155 ಸಿಸಿ), ವೈಝಡ್ಎಫ್-ಆರ್15ಎಸ್ (155 ಸಿಸಿ), ಎಂಟಿ -15 ವಿ2 (155 ಸಿಸಿ), ಎಫ್ಝಡ್ಎಸ್-ಎಫ್ಐ ಆವೃತ್ತಿ 4.0 (149 ಸಿಸಿ), ಎಫ್ಝಡ್ ಎಸ್-ಎಫ್ಐ ಆವೃತ್ತಿ 3.0 (149 ಸಿಸಿ), ಎಫ್ಝಡ್-ಎಫ್ಐ ಆವೃತ್ತಿ 3.0 (149 ಸಿಸಿ), ಎಫ್ಝಡ್-ಎಕ್ಸ್ (149cc) ಮತ್ತು ಸ್ಕೂಟರ್ಗಳಾದ ಏರಾಕ್ಸ್ (155 ಸಿಸಿ), ಫ್ಯಾಸಿನೋ 125 ಎಫ್ಐ ಹೈಬ್ರೀಡ್ (125 ಸಿಸಿ), ರೇ ಝಡ್ಆರ್ 125 ಎಫ್ಐಸಿಸಿಡಿ (125 ಎಫ್ಐಸಿಸಿಡಿ), ರೇ ಝಡ್ಆರ್ ಸ್ಟ್ರೀಟ್ ರಾಲಿ 125 ಎಫ್ಐ ಹೈಬ್ರೀಡ್ (125 ಸಿಸಿ) ಮಾದರಿಯ ವಿಶೇಷ ಪ್ರದರ್ಶನವಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.