2009ರಲ್ಲಿ ‘ಅಲಾದಿನ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರೂಜಾಕ್ವೆಲಿನ್ ಫರ್ನಾಂಡಿಸ್ಗೆ ಹೆಸರು ತಂದುಕೊಟ್ಟಿದ್ದು ‘ಮರ್ಡರ್ –2' ಸಿನಿಮಾ.ಅದಾದ ನಂತರ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ ಅವರು ಹೆಚ್ಚು ಜನಪ್ರಿಯಗೊಂಡಿದ್ದು ಸಲ್ಮಾನ್ ಖಾನ್ ಜೊತೆಗಿನ ‘ಕಿಕ್ –2’ ಚಿತ್ರದ ಮೂಲಕ.2006ರಲ್ಲಿ ‘ಮಿಸ್ ಯೂನಿವರ್ಸ್ ಶ್ರೀಲಂಕಾ’ ಕಿರೀಟ ಗೆದ್ದ ಈ ಶ್ರೀಲಂಕಾದ ನಟಿ ಸದ್ಯ ಬಾಲಿವುಡ್ನ ಮುಂಚೂಣಿ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ.

ಸೌಂದರ್ಯದ ಈ ಖನಿ ಫಿಟ್ನೆಸ್ ವಿಚಾರದಲ್ಲಿ ಎಂದೂ ರಾಜಿಯಾಗುವುದಿಲ್ಲ. ‘ಸರಿಯಾಗಿ ತಿನ್ನಿ, ಸರಿಯಾಗಿ ನಿದ್ದೆ ಮಾಡಿ, ವ್ಯಾಯಾಮ ತಪ್ಪಿಸಬೇಡಿ’– ಅವರ ಫಿಟ್ನೆಸ್ ಮಂತ್ರ.

ಉದ್ದ ಕಾಲು, ಕೆತ್ತಿದಂತಿರುವ ಮೈಕಟ್ಟು, ಆಕರ್ಷಕ ನೋಟ ಹಾಗೂ ಹಾಲುಬಿಳುಪಿನ ಮೈಬಣ್ಣ ಜಾಕ್ವೆಲಿನ್ ಅನ್ನುಮೊದಲ ನೋಟದಲ್ಲೇ ಹಿಡಿದಿಡುವಂತೆ ಮಾಡುತ್ತದೆ. ಫಿಟ್ ಆಗಿರಲು ಕಠಿಣ ವರ್ಕೌಟ್ ಹಾಗೂ ಕಟ್ಟುನಿಟ್ಟಿನ ಪಥ್ಯಾಹಾರದ ಮೊರೆಹೋಗುತ್ತಾರೆ. ಇಂತಿಪ್ಪ ಈ ಸುಂದರಿಗೆ ದೀಪಿಕಾ ಪಡುಕೋಣೆ ಹಾಗೂ ಶಿಲ್ಪಾ ಶೆಟ್ಟಿ ಸ್ಫೂರ್ತಿಯಂತೆ! ಅವರಂತೆ ತಾನೂ ಫಿಟ್ ಆಗಿರಲೇಬೇಕು ಎಂಬುದು ಅವರ ದೃಢನಿರ್ಧಾರ. ಸತತ ಕಠಿಣ ಪರಿಶ್ರಮ ಹಾಗೂ ಶಿಸ್ತಿನ ದಿನಚರಿಯೇ ಈಕೆಯ ಸೌಂದರ್ಯದ ಗುಟ್ಟು ಎಂಬುದು ಅವರ ಆಪ್ತರ ಮಾತು.

ಸಿನಿಮಾ ಕ್ಷೇತ್ರ ಪ್ರವೇಶಿಸುವ ಮೊದಲು ಅವರು ತಮ್ಮ ಮೈಕಟ್ಟು, ಅಂದದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಯಾವಾಗ ಬಾಲಿವುಡ್ನಲ್ಲಿ ಅವಕಾಶಗಳು ಹುಡುಕಿ ಬಂದವೋ ಮೈಮಾಟ,ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಬಗ್ಗೆ ಹೆಚ್ಚು ಗಮನ ನೀಡಲಾರಂಭಿಸಿದರು.

ಒಂದು ವೇಳೆ ತಾನು ದಪ್ಪಗಾಗುತ್ತಿರುವ ಸಂದೇಹ ಮೂಡಿದರೆ ನಿದ್ದೆಯೇ ಬರುವುದಿಲ್ಲವಂತೆ. ‘ಡಯೆಟ್ ಮೂಲಕ ನಾನು ಸಣ್ಣಗಾಗಲು ಪ್ರಯತ್ನಿಸುತ್ತೇನೆ. ಇದಕ್ಕೆ ವರ್ಕೌಟ್ ಹಾಗೂ ಯೋಗಾಭ್ಯಾಸ ಸಾಥ್ ನೀಡುತ್ತದೆ’ ಎಂದು ಹೇಳುತ್ತಾರೆ. ಸೇವಿಸುವ ಆಹಾರವನ್ನು ಮೂರು ಭಾಗಗಳಾಗಿ ವಿಭಾಗಿಸುವುದು ಜಾಕ್ವೆಲಿನ್ ಸ್ಟೈಲ್. ಕಾರ್ಬೋಹೈಡ್ರೇಟ್, ಪ್ರೊಟೀನ್, ಕೊಬ್ಬು, ತರಕಾರಿಗಳನ್ನು ಸಮಪ್ರಮಾಣದಲ್ಲಿ ಸೇವಿಸುತ್ತಾರಂತೆ. ತರಕಾರಿ, ಹಣ್ಣುಗಳು, ಬ್ರೌನ್ ರೈಸ್, ಕ್ವಿನೊವಾ ಹಾಗೂ ಓಟ್ಸ್ ಇವರ ಆಹಾರದ ಪಟ್ಟಿಯಲ್ಲಿ ಸಾಮಾನ್ಯವಾಗಿರುತ್ತದೆ. ಒಣಹಣ್ಣುಗಳು, ಆಯ್ದ ಕೆಲವು ಬೀಜಗಳು ಹಾಗೂ ಹಣ್ಣುಗಳಿಂದ ಮನೆಯಲ್ಲೇ ಮಾಡಿದ ಉಂಡೆಗಳನ್ನು ಹಸಿವಾದಾಗ ಸೇವಿಸುತ್ತಾರೆ. ಜಾಕ್ವೆಲಿನ್ ಮೀನುಪ್ರಿಯೆ. ವಾರದಲ್ಲಿ ಮೂರು ದಿನ ಮೀನಿನ ಖಾದ್ಯ ಕಡ್ಡಾಯವಂತೆ.

ವರ್ಕೌಟ್ಗೆ ಮೊದಲು ಜಾಕ್ವೆಲಿನ್ ಪ್ರೊಟೀನ್ ಜ್ಯೂಸ್ ಕುಡಿಯುತ್ತಾರೆ. ಆದರೆ ಸಕ್ಕರೆಯಿರುವ ಯಾವ ಪದಾರ್ಥವನ್ನೂ ಸೇವಿಸುವುದಿಲ್ಲ. ತೀರಾಆಸೆಯಾದಾಗ ಅಪರೂಪವಾಗಿ ಚಾಕಲೇಟ್ ಹಾಗೂ ಪಿಜ್ಜಾ ತಿನ್ನುತ್ತಾರಂತೆ. ಅವರ ಊಟ ಸರಳವಾಗಿರುತ್ತದೆ. ಹಸಿವಾದಾಗಲಷ್ಟೇ ತಿನ್ನಬೇಕು ಎಂಬ ಶಿಸ್ತನ್ನು ಸದಾ ಪಾಲಿಸುತ್ತಾರೆ. ಹೆಚ್ಚು ನೀರು ಕುಡಿಯುತ್ತಾರೆ.

ಪ್ರತಿದಿನ ಕಾರ್ಡಿಯೊ, ಸ್ಟ್ರೆಂತ್ ಟ್ರೈನಿಂಗ್, ಮಾರ್ಷಲ್ ಆರ್ಟ್ಸ್, ನೃತ್ಯ ಹಾಗೂ ಯೋಗಾಭ್ಯಾಸಗಳನ್ನು ಮಾಡುತ್ತಾರೆ. ಬೆಳಿಗ್ಗೆ ಏಳಕ್ಕೆ ಎದ್ದು, ಕೆಲ ಯೋಗಾಸನ ಹಾಗೂ ವ್ಯಾಯಾಮಗಳನ್ನು ಮಾಡುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಇಷ್ಟದ ಹಾಡು ಕಿವಿಯಾನಿಸಿ ಹೆಜ್ಜೆ ಹಾಕುವುದು ಜಾಕ್ವೆಲಿನ್ ರೂಢಿ. ಇದೂ ಕೂಡ ಅವರಿಗೆ ಫಿಟ್ ಆಗಿರಲು ಸಹಾಯ ಮಾಡಿದೆಯಂತೆ. ನೃತ್ಯದ ವಿಚಾರಕ್ಕೆ ಬಂದರೆ ಮಾಧುರಿ ದೀಕ್ಷಿತ್ ಸ್ಫೂರ್ತಿ!

ಹುಟ್ಟಿದ ದಿನ: 11 ಆಗಸ್ಟ್ 1985

ಎತ್ತರ: 5 ಅಡಿ 7 ಇಂಚು

ತೂಕ– 56 ಕೆ.ಜಿ

ಸುತ್ತಳತೆ: 34–27–35

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.