ಚರಣ್ ಎಸ್., ಆಡುಗೋಡಿ, ಬೆಂಗಳೂರು.

ಪ್ರಶ್ನೆ: ನಾನು ಕಳೆದ 10 ವರ್ಷಗಳ ಹಿಂದೆ ಮನೆ ಕಟ್ಟಿಸಿದ್ದೆ. ಇದಕ್ಕಾಗಿ ₹50 ಲಕ್ಷ ಬ್ಯಾಂಕ್ ಸಾಲ ಮಾಡಿದ್ದೆ. ಇನ್ನೂ 10 ವರ್ಷಗಳ ಇಎಂಐ ಕಂತು ಬಾಕಿ ಇದೆ. ಪ್ರತಿ ತಿಂಗಳು ಸುಮಾರು ₹50 ಸಾವಿರದ ಆಸುಪಾಸಿನಲ್ಲಿ ಕಂತು ಪಾವತಿಸುತ್ತಿದ್ದೇನೆ. ಇನ್ನೂ ಬಾಕಿ ಇರುವ ಅಸಲು ಸುಮಾರು ₹33 ಲಕ್ಷ ಇದೆ. ಶೇ 8.50ರಿಂದ ಶೇ 9ರ ಅಂದಾಜಿನಲ್ಲಿ ಬಡ್ಡಿ ಪಾವತಿಯಾಗುತ್ತಾ ಬಂದಿದೆ.

ನಾನು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಸದ್ಯ ಬಡ್ತಿ ಸಿಕ್ಕಿದೆ. ಪ್ರಸ್ತುತ ನನಗೆ ಹೆಚ್ಚುವರಿ ಉಳಿತಾಯ ಮಾಡುವ ಅವಕಾಶವಿದೆ. ಸಾಲದ ಇಎಂಐ ಮೊತ್ತಕ್ಕೆ ಸರಿಸಮಾನವಾಗಿ ಉಳಿಕೆಗೆ ಯೋಚನೆ ಮಾಡುತ್ತಿದ್ದೇನೆ. ಇತರೆ ಎಲ್ಲಾ ವರ್ಗದ ಹೂಡಿಕೆಗೆ ತುಲನೆ ಮಾಡಿದರೆ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂಬುದು ನನ್ನ ಅನಿಸಿಕೆ. ನನ್ನ ಪ್ರಶ್ನೆ ಏನೆಂದರೆ, ನಾನು ಗಳಿಸುತ್ತಿರುವ ಈ ಹೆಚ್ಚುವರಿ ಮೊತ್ತವನ್ನು ಸಾಲ ಮರುಪಾವತಿಗೆ ಬಳಸಿಕೊಂಡು ಬಡ್ಡಿಯಿಂದ ಮುಕ್ತಿ ಹೊಂದಬಹುದೇ ಅಥವಾ ಅದರ ಬದಲು ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದು ಸೂಕ್ತವೇ?

ಉತ್ತರ: ನೀವು ನಿಮ್ಮ ಗೃಹ ಸಾಲದ ಬಗೆಗಿನ ಮಾಹಿತಿ ಹಾಗೂ ಹೆಚ್ಚುವರಿ ಆದಾಯದ ಹೂಡಿಕೆ ಬಗೆಗಿನ ಮಾಹಿತಿ ನೀಡಿದ್ದೀರಿ. ನಿಮ್ಮ ಸಾಲ ಈಗಾಗಲೇ ಅರ್ಧದಷ್ಟು ಪಾವತಿಯಾಗಿದೆ. ಇನ್ನು ಉಳಿದ ಮೊತ್ತದ ಬಹುತೇಕ ಪಾಲು ತಿಂಗಳು ಕಳೆದಂತೆ ಅಸಲಿಗೆ ಹೆಚ್ಚು ಪಾವತಿಯಾಗಿ ಬಡ್ಡಿಯ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಆದರೂ, ಮಾಸಿಕವಾಗಿ ಸುಮಾರು ₹25 ಸಾವಿರದಷ್ಟು ಮೊತ್ತವನ್ನು ನೀವು ಈಗಲೂ ಬಡ್ಡಿಯಾಗಿ ಪಾವತಿಸುತ್ತಿರಬಹುದು. ಇದು ವಾರ್ಷಿಕವಾಗಿ ₹3 ಲಕ್ಷ ಆಗಲಿದೆ. ನಿಮ್ಮ ಸಾಲದ ಕರಾರು ಪತ್ರದಲ್ಲಿ ಮರುಪಾವತಿಗೆ ಸಂಬಂಧಿಸಿದ ಯಾವುದಾದರೂ ಷರತ್ತು, ಮಿತಿ ಇತ್ಯಾದಿ ಇದ್ದರೆ ಪರಿಶೀಲಿಸಿ ಅಥವಾ ಸಂಬಂಧಪಟ್ಟ ಬ್ಯಾಂಕ್ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ.

ಇನ್ನು ಸಾಲ ಮರುಪಾವತಿ ಅಥವಾ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ತುಲನೆ ಮಾಡುವುದಾದರೆ ಇವೆರಡೂ ಖಚಿತ ಬಡ್ಡಿ ಉಳಿತಾಯ ಹಾಗೂ ಹೂಡಿಕೆಯ ಮೇಲಿನ ಅಂದಾಜು ಗಳಿಕೆಯ ಮೇಲೆ ನಿರ್ಣಯಿಸಬೇಕಾಗಿದೆ.

ಸಾಲಕ್ಕೆ ಮರುಪಾವತಿಸುವ ಪ್ರತಿ ಒಂದು ರೂಪಾಯಿಯೂ ನಿಮ್ಮ ಬಡ್ಡಿಯನ್ನು ತಗ್ಗಿಸಲಿದೆ. ಜೊತೆಗೆ, ಬೇಗನೆ ಸಾಲದಿಂದ ಹೊರಬರಲು ನೆರವಾಗುತ್ತದೆ. ಆದರೆ, ಅದೇ ಮೊತ್ತವನ್ನು ಮಾರುಕಟ್ಟೆ ಆಧಾರಿತ ಉತ್ಪನ್ನಗಳಲ್ಲಿ ಹೂಡಿಕೆ ಮಾಡಿದಾಗ ನಿಮ್ಮ ಬಂಡವಾಳ ಮೊತ್ತಕ್ಕೆ ಕೆಲವೊಮ್ಮೆ ಪೆಟ್ಟು ಬೀಳುವ ಸಾಧ್ಯತೆ ಇದೆ.

ಹೀಗಾಗಿ, ನಿಮ್ಮ ವಿಚಾರದಲ್ಲಿ ಮರುಪಾವತಿಗೆ ಅವಕಾಶ ಇರುವ ಎಲ್ಲಾ ಮೊತ್ತವನ್ನು ಆದ್ಯತೆ ಮೇರೆಗೆ ಪಾವತಿಸಿ. ನಿಮ್ಮ ಹೂಡಿಕೆ ವಾರ್ಷಿಕವಾಗಿ ಶೇ 15ರಿಂದ ಶೇ 20ರಷ್ಟು ಲಾಭ ನೀಡುವ ಅವಕಾಶವಿರುವ ಹೂಡಿಕೆ ಎಂಬ ಧೈರ್ಯವಿದ್ದರೆ, ಹೆಚ್ಚುವರಿ ಮೊತ್ತವನ್ನು ಹೂಡಿಕೆ ಮಾಡಬಹುದಾಗಿದೆ.

ಸಂತೋಷ್, ಚಿತ್ರದುರ್ಗ.

ಪ್ರಶ್ನೆ: ನಾನು ಖಾಸಗಿ ಕೆಲಸ ನಿರ್ವಹಿಸುತ್ತಿದ್ದು, ಬಿಪಿಎಲ್ ಕಾರ್ಡ್ ಹೊಂದಿದ್ದೇನೆ. ಮುಂದಿನ ದಿನಗಳಲ್ಲಿ ಮನೆ ಕಟ್ಟಿಸುವ ಯೋಚನೆ ಇದೆ. ಇದಕ್ಕಾಗಿ ಬ್ಯಾಂಕ್ನಿಂದ ಸಾಲ ಪಡೆಯಲು ಏನು ಮಾಡಬೇಕು? ನನಗೆ ಯಾವುದೇ ಸ್ವಂತ ಮನೆ ಇರುವುದಿಲ್ಲ. ಜಮೀನು ಇರುವುದಿಲ್ಲ. ಖಾಸಗಿಯಾಗಿ ದುಡಿಯುವ ನನಗೆ ಅದೊಂದೇ ಆದಾಯದ ಮೂಲವಾಗಿದೆ. ಬ್ಯಾಂಕ್ನಲ್ಲಿ ಐ.ಟಿ ರಿಟರ್ನ್ಸ್ ಇದ್ದರೆ ಮಾತ್ರ ನಿಮಗೆ ಸಾಲ ಸಿಗುತ್ತದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಪರಿಹಾರವೇನು?

ಉತ್ತರ: ನಿಮ್ಮ ಪ್ರಶ್ನೆ ಸಹಜವಾದುದು. ಯಾವುದೇ ವ್ಯಕ್ತಿ ತನಗೆ ತೆರಿಗೆ ಕಟ್ಟಬೇಕಾಗುವ ಆದಾಯ ಇಲ್ಲದಿದ್ದಾಗ ಆದಾಯ ತೆರಿಗೆಯ ರಿಟರ್ನ್ಸ್ ಸಲ್ಲಿಸುವ ಪ್ರಮೇಯ ಬರುವುದಿಲ್ಲ. ಸಾಮಾನ್ಯವಾಗಿ ಬ್ಯಾಂಕ್ಗಳು, ಸಾಲ ಕೊಡುವಾಗ ಕೆಲವು ಸೂಚಿತ ಕಾನೂನಿನ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುತ್ತವೆ.

ಹೀಗಾಗಿ, ಎಲ್ಲಾ ಬ್ಯಾಂಕ್ಗಳು ಸಾಲ ನೀಡುವಾಗ ಕೇಂದ್ರೀಯ ಬ್ಯಾ೦ಕ್ನ ನಿರ್ದೇಶನಗಳನ್ನು ಪಾಲನೆ ಮಾಡಬೇಕಾಗುತ್ತದೆ. ಅದರ ಭಾಗವಾಗಿ ಬ್ಯಾಂಕ್ಗಳು ಆದಾಯ ತೆರಿಗೆ ರಿಟರ್ನ್ಸ್ ಬಗ್ಗೆ ಮಾಹಿತಿ ಕೇಳುತ್ತವೆ. ನಿಶ್ಚಿತ ಆದಾಯ ಇದ್ದಾಗ ಸಾಲದ ಮರುಪಾವತಿ ಸಾಮರ್ಥ್ಯ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಈ ಕ್ರಮವನ್ನು ಅನುಸರಿಸುತ್ತವೆ.

ನೀವು ನೀಡಿದ ಮಾಹಿತಿಯಲ್ಲಿ ನಿಖರ ಆದಾಯ ಅಥವಾ ವೃತ್ತಿ ಏನೆಂಬ ಬಗ್ಗೆ ಮಾಹಿತಿ ಇಲ್ಲ. ಆದರೆ, ನೀವು ಸ್ವಉದ್ಯೋಗ ಮಾಡುವುದಾಗಿ ತಿಳಿಸಿದ್ದೀರಿ. ನೀವು ಬಿಪಿಎಲ್ ಕಾರ್ಡ್ ಹೊಂದಿದ್ದರೂ ಅದು ಹಳೆಯ ಮಾಹಿತಿಯ ಆದಾಯದ ಆಧಾರದಲ್ಲಿ ಪಡೆದುದಾಗಿರಬಹುದು ಹಾಗೂ ಅದಕ್ಕಾಗಿ ಕುಟುಂಬದ ವಾರ್ಷಿಕ ಆದಾಯ ಸುಮಾರು ₹1.20 ಲಕ್ಷದೊಳಗಿದ್ದು, ಸಂಬಂಧಪಟ್ಟ ಇತರೆ ನಿಯಮದೊಳಗೆ ಒಳಪಟ್ಟರೆ ಮಾತ್ರ ಪಡೆಯಲು ಅರ್ಹತೆ ಇರುತ್ತದೆ.

ಒಂದು ವೇಳೆ ನಿಮ್ಮ ವೈಯಕ್ತಿಕ ತೆರಿಗೆ ಆದಾಯವು ವಾರ್ಷಿಕವಾಗಿ ₹2.50 ಲಕ್ಷಕ್ಕೂ ಮೀರಿದ್ದರೆ ರಿಟರ್ನ್ಸ್ ಸಲ್ಲಿಸುವುದು ಅನಿವಾರ್ಯವಾಗುತ್ತದೆ. ನಿಮಗೆ ಅನ್ವಯವಾಗುವ ತೆರಿಗೆ ವಿನಾಯಿತಿ ಇತ್ಯಾದಿಯನ್ನು ಪಡೆದುಕೊಳ್ಳಬಹುದು. ರಿಟರ್ನ್ಸ್ ಸಲ್ಲಿಸಿದ ಮಾತ್ರಕ್ಕೆ ತೆರಿಗೆ ಇದೆ ಎಂದೇನಿಲ್ಲ. ಹೊಸ ತೆರಿಗೆ ನಿಯಮದಡಿ ಸುಮಾರು ₹7 ಲಕ್ಷದ ವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ. ಈ ಬಗ್ಗೆ ನೆರವು ಪಡೆಯಲು ಸಮೀಪದ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ.

ಇನ್ನೂ ಒಂದು ಇರುವ ಅವಕಾಶವೆಂದರೆ, ಪ್ರಧಾನ ಮಂತ್ರಿ ಆವಾಸ ಯೋಜನೆ. ಇದು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಮನೆ ಹೊಂದಲು ನೆರವಾಗುವ ಯೋಜನೆಯಾಗಿದೆ. ಅಗತ್ಯ ದಾಖಲೆಗಳೊಂದಿಗೆ ಸ್ನೇಹಿತರ ನೆರವು ಪಡೆದು ಕೇಂದ್ರ ಸರ್ಕಾರದ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು.

ಯಾವುದೇ ಇತರೆ ಸಾಧ್ಯತೆಗಳಿದ್ದರೂ ನಿಮ್ಮ ಆದಾಯದ ಮೂಲ ಹೆಚ್ಚಿಸುವ ಬಗ್ಗೆ ಗಮನಹರಿಸಿ. ನಿಮ್ಮ ಮೂಲ ಉದ್ದೇಶ ಮನೆ ಹೊಂದುವುದಾಗಿದೆ. ಹೀಗಾಗಿ, ಹಂತ ಹಂತವಾಗಿ ಆದಾಯದೊಂದಿಗೆ ಉಳಿತಾಯವನ್ನೂ ಹೆಚ್ಚಿಸಿಕೊಳ್ಳಿ. ಮುಂದಿನ ಎರಡು-ಮೂರು ವರ್ಷ ನಿಮ್ಮ ವಾಸ್ತವ ಆದಾಯ ಮೂಲವನ್ನು ಲೆಕ್ಕ ಹಾಕಿಸಿ ತೆರಿಗೆ ಸಲಹೆಗಾರರ ನೆರವಿನಿಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿ ಸಮರ್ಪಕ ದಾಖಲೆಗಳನ್ನು ಹೊಂದಿಸಿಕೊಳ್ಳಿ. ಮುಂದೆ ಖಂಡಿತವಾಗಿ ಅದನ್ನು ಬ್ಯಾಂಕ್ಗಳು ಮಾನ್ಯ ಮಾಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.