ಉತ್ತರ ಪ್ರದೇಶ ನರೇಂದ್ರ ಮೋದಿ ಅವರ ರಾಜಕೀಯ ಭವಿಷ್ಯ ತೀರ್ಮಾನಿಸಲು ಹೊರಟಿದೆ. ಒಟ್ಟು 80 ಲೋಕಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ದೊಡ್ಡ ರಾಜ್ಯದಲ್ಲಿ 50ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ. 50ರ ಗಡಿ ದಾಟದ ಹೊರತು ಬಿಜೆಪಿ, ಅದರ ಮಿತ್ರ ಪಕ್ಷಗಳು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಕಷ್ಟ. ‘ಈ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಪಕ್ಷ ಅಧಿಕಾರಕ್ಕೆ ಬರಲಿದೆ’ ಎಂಬ ನಂಬಿಕೆ ಒಂದು ಕಾಲಕ್ಕಿತ್ತು. ಹಿಂದಿನ ಕೆಲವು ಚುನಾವಣೆಗಳು ಇದನ್ನು ಹುಸಿಗೊಳಿಸಿವೆ. 2009ರ ಚುನಾವಣೆಯಲ್ಲಿ ಕೇವಲ 21 ಸ್ಥಾನಗಳನ್ನು ಪಡೆದ ಕಾಂಗ್ರೆಸ್ 14 ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ಮಾಡಿದೆ.

ಬಿಜೆಪಿ ವಿಷಯದಲ್ಲಿ ಹೀಗೆ ಹೇಳುವಂತಿಲ್ಲ. ಏಕೆಂದರೆ ಅದಕ್ಕೆ ಎಲ್ಲ ರಾಜ್ಯಗಳಲ್ಲೂ ರಾಜಕೀಯ ನೆಲೆ ಇಲ್ಲ. ಹೀಗಾಗಿ ನೆಲೆ ಇರುವ ಉತ್ತರ ಪ್ರದೇಶ, ದೆಹಲಿ, ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸಗಡ, ಬಿಹಾರ, ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದರೆ ದೆಹಲಿ ಗದ್ದುಗೆ ಹಿಡಿಯಬಹುದು. ಅದಾಗದಿದ್ದರೆ ಬಿಜೆಪಿ ಕನಸು ಛಿದ್ರವಾಗುತ್ತದೆ. ನರೇಂದ್ರ ಮೋದಿ ಇದೇ ಕಾರಣಕ್ಕೆ 6 ತಿಂಗಳ ಮೊದಲೇ ತಮ್ಮ ‘ನಿಷ್ಠಾವಂತ ಬಂಟ’ ಅಮಿತ್ ಷಾ ಅವರನ್ನು ಉತ್ತರಪ್ರದೇಶಕ್ಕೆ ಕಳುಹಿಸಿದ್ದು. ಷಾ ತಮಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

2009ರ ಲೋಕಸಭೆ ಚುನಾವಣೆಯಲ್ಲಿ ಕೇವಲ 10 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಸಲ 50ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದೆಂದು ಮಾಧ್ಯಮ ಸಮೀಕ್ಷೆಗಳು ಹೇಳುವ ಹಂತಕ್ಕೆ ಪಕ್ಷ ಬೆಳೆದು ನಿಂತಿದೆ ಎನ್ನುವುದು ಬಿಜೆಪಿ ನಾಯಕರ ವಾದ. ಮೋದಿ ವಾರಾಣಸಿಗೆ ಬಂದಿರುವುದರ ಹಿಂದೆ ಇದೇ ರೀತಿ ರಾಜಕೀಯ ಲೆಕ್ಕಾಚಾರವಿದೆ. ಒಂದೆಡೆ ಹಿಂದೂ ಮತಗಳನ್ನು ಒಗ್ಗೂಡಿಸುವುದು. ಇನ್ನೊಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಳ್ಳುವುದು ಮೋದಿ ಸ್ಪರ್ಧೆ ಉದ್ದೇಶ.

ಹಿಂದೂ ಮತಗಳನ್ನು ಒಗ್ಗೂಡಿಸುವುದರಲ್ಲಿ ‘ಮುಜಾಫ್ಫರ್ ನಗರದ ಕೋಮು ಗಲಭೆ ಬಿಜೆಪಿಗೆ ದೊಡ್ಡ ವರ. ಅದೊಂದು ರೀತಿ ಬಯಸದೇ ಬಂದ ಭಾಗ್ಯ. ಗಲಭೆ ಬಳಿಕ ಹಿಂದೂಗಳು ಒಗ್ಗೂಡಿದ್ದಾರೆ. ಅದರಲ್ಲೂ ಮೇಲ್ಜಾತಿಗಳು, ಹಿಂದುಳಿದ ವರ್ಗಗಳು ಬಿಜೆಪಿ ಬೆಂಬಲಿಸಿವೆ’ ಎಂದು ಆ ಪಕ್ಷದ ಮುಖಂಡರು ನಂಬಿದ್ದಾರೆ. ದಲಿತರ ಕೇರಿಗೂ ಬಿಜೆಪಿ ಪ್ರವೇಶಿಸಿದೆ. ಹಿಂದೂ ಧರ್ಮದ ಬಗ್ಗೆ ಪ್ರವಚನ ನೀಡಿದೆ. ದಲಿತರು ಮತ್ತು ಹಿಂದುಳಿದವರ ಬೆಂಬಲಕ್ಕೆ ಮೋದಿ ಬಣ ಮುಂದಾಗಿರುವುದು ಮಾಯಾವತಿ ಮತ್ತು ಮುಲಾಯಂ ಆತಂಕಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶದ ಮತದಾರರನ್ನು ಸೆಳೆಯಲು ಬಿಜೆಪಿ ಎಲ್ಲ ‘ಪ್ರಬಲ ಅಸ್ತ್ರ’ಗಳನ್ನು ಬಳಸುತ್ತಿದೆ. ‘ಗುಜರಾತ್ ಅಭಿವೃದ್ಧಿ ಮಂತ್ರ’ ಪಠಿಸಿದೆ. ಮೋದಿ ಸರ್ಕಾರ ಬಂದರೆ, ಉತ್ತರ ಪ್ರದೇಶವೂ ಗುಜರಾತಿನಂತೆ ಅಭಿವೃದ್ಧಿ ಆಗಲಿದೆ ಎಂಬ ಭ್ರಮೆ ಹುಟ್ಟಿಸಿದೆ. ಜಾತಿ ಆಧಾರದ ಮೇಲೇ ಚುನಾವಣೆ ನಡೆಯುವ ರಾಜ್ಯದಲ್ಲಿ ಇದು ಎಷ್ಟರ ಮಟ್ಟಿಗೆ ಬಿಜೆಪಿಗೆ ಲಾಭವಾಗಲಿದೆ ಎಂದು ಹೇಳುವುದು ಕಷ್ಟ. ಆದರೆ, ಉತ್ತರ ಪ್ರದೇಶದಲ್ಲಿ ಕೆಲವರಾದರೂ ಗುಜರಾತ್ ಪ್ರಗತಿ ಕುರಿತು ಮಾತನಾಡುತ್ತಿದ್ದಾರೆ.

ಗುಜರಾತ್ ಅಭಿವೃದ್ಧಿ ಕುರಿತು ಎರಡೂ ಬಗೆ ಅಭಿಪ್ರಾಯವಿದೆ. ಆ ರಾಜ್ಯ ನಿಜಕ್ಕೂ ಅಭಿವೃದ್ಧಿ ಆಗಿದೆಯೇ? ಜನರ ಜೀವನ ಮಟ್ಟ ಸುಧಾರಣೆ ಆಗಿದೆಯೇ? ಎನ್ನುವುದು ಚರ್ಚೆ ಆಗಬೇಕಾದ ವಿಷಯ. ಒಮ್ಮೆ ಚುನಾವಣಾ ಆಯೋಗವೇ ಅಪೌಷ್ಟಿಕತೆ ಹಾಗೂ ರಕ್ತ ಹೀನತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಉತ್ತರ ಪ್ರದೇಶಕ್ಕಿಂತಲೂ ಗುಜರಾತಿನಲ್ಲೇ ಹೆಚ್ಚು ಎಂದು ಹೇಳಿದೆ.

‘ಮೋದಿ ರಾಜ್ಯ’ದಲ್ಲಿ ಬಡವರು, ದಲಿತರು ಮತ್ತು ಆದಿವಾಸಿಗಳ ಜೀವನ ಸುಧಾರಣೆ ಆಗಿಲ್ಲ ಎನ್ನುವುದು ಎಷ್ಟು ಸತ್ಯವೋ, ಉತ್ತರ ಪ್ರದೇಶ ಹಿಂದುಳಿದಿದೆ ಎನ್ನುವುದು ಅಷ್ಟೇ ಸತ್ಯ. ಅದು ಎಷ್ಟರ ಮಟ್ಟಿಗೆ ಎನ್ನುವುದನ್ನು ಕಣ್ಣಾರೆ ನೋಡಬೇಕು. ಈ ಕಾರಣಕ್ಕೆ ಜನ ಮೋದಿ ಅವರ ಗುಜರಾತ್್ ಕಡೆ ನೋಡುತ್ತಿರುವುದು. ರಾಜಕೀಯವಾಗಿ ಪ್ರಬಲವಾಗಿರುವ ರಾಜ್ಯವೊಂದು ಹೇಗೆ ಇಷ್ಟೊಂದು ಹಿಂದುಳಿಯಿತು. ಮೊದಲ ಪ್ರಧಾನಿ ಜವಾಹರಲಾಲ್ ಅವರಿಂದ ಹಿಡಿದು ವಾಜಪೇಯಿವರೆಗೆ ಎಷ್ಟು ಪ್ರಧಾನ ಮಂತ್ರಿಗಳನ್ನು ಉತ್ತರ ಪ್ರದೇಶ ಕಂಡಿದೆ.

ಇಲ್ಲಿಂದ ಗೆದ್ದು ಹೋದ ರಾಜಕೀಯ ಘಟಾನುಘಟಿಗಳು ರಾಜ್ಯವನ್ನು ಮರೆತಿದ್ದು ಏಕೆ? ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಕಷ್ಟ.
ದೇಶದ ಜನಸಂಖ್ಯೆ ಈಗ 125ಕೋಟಿ. ಉತ್ತರ ಪ್ರದೇಶವೊಂದೇ ಸುಮಾರು 20ಕೋಟಿ ಜನಸಂಖ್ಯೆ ಹೊಂದಿದೆ. ‘ಈ ದೊಡ್ಡ ರಾಜ್ಯವನ್ನು ಹೋಳು ಮಾಡುವುದೊಂದೇ ಸಮಸ್ಯೆಗೆ ಪರಿಹಾರ’ ಎಂದು ವಾದಿಸುವವರಿದ್ದಾರೆ. ‘ಆಂಧ್ರ ವಿಭಜನೆ ಮಾಡಿದ ಯುಪಿಎಗೆ ಉತ್ತರ ಪ್ರದೇಶ ಯಾಕೆ ಕಾಣಲಿಲ್ಲ?’ ಎಂದು ಟೀಕಿಸುವವರಿದ್ದಾರೆ.

‘ರಾಜ್ಯ ವಿಭಜನೆಯಿಂದ ಅಭಿವೃದ್ಧಿ ಸಾಧ್ಯವಾಗುವುದಾದರೆ ಜಾರ್ಖಂಡ್, ಉತ್ತರಾಖಂಡ ಏಕೆ ಇನ್ನು ಅಭಿವೃದ್ಧಿ ಆಗಿಲ್ಲ’ ಎಂದೂ ಕೇಳುವವರಿದ್ದಾರೆ. ಮಾಯಾವತಿ ನೇತೃತ್ವದ ಬಿಎಸ್ಪಿ ಸರ್ಕಾರ ರಾಜ್ಯವನ್ನು 4 ಭಾಗಗಳಾಗಿ ವಿಂಗಡಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿತ್ತು. ಕೇಂದ್ರ ಅದನ್ನು ಒಪ್ಪಲಿಲ್ಲ. ಉದ್ದೇಶಿತ 4 ರಾಜ್ಯಗಳ ರಾಜಧಾನಿ ಮತ್ತು ಗಡಿಗಳಿಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟನೆಗಳನ್ನು ಕೇಳಿ ಪ್ರಸ್ತಾವನೆ ಹಿಂದಕ್ಕೆ ಕಳುಹಿಸಿದೆ. ಬಿಎಸ್ಪಿ ಸರ್ಕಾರ ಪತನದ ಬಳಿಕ ಪ್ರಸ್ತಾವನೆ ಮೂಲೆ ಸೇರಿದೆ. ಮುಂದೆ ಅದಕ್ಕೆ ಚಾಲನೆ ಸಿಕ್ಕರೂ ಸಿಗಬಹುದು.

ಉತ್ತರ ಪ್ರದೇಶದಲ್ಲಿ ಗಂಗಾ ಮತ್ತು ಯಮುನಾ ನದಿಗಳು ಹರಿದರೂ ನೀರಿಗೆ ಹಾಹಾಕಾರ. ರಾಜ್ಯದ ಬಹಳಷ್ಟು ನಗರಗಳು ಮತ್ತು ಪಟ್ಟಣಗಳು ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ‘ತಾಜ್ಮಹಲ್’ ನಗರ ಆಗ್ರಾವನ್ನು ಸಮಸ್ಯೆ ಬಿಟ್ಟಿಲ್ಲ. ಇದರಿಂದಾಗಿ ಪ್ರವಾಸೋದ್ಯಮ ಸೊರಗುತ್ತಿದೆ. 2012ರಲ್ಲಿ ಉತ್ತರ ಪ್ರದೇಶಕ್ಕೆ 1.70ಕೋಟಿ ಸ್ವದೇಶಿ ಮತ್ತು 20 ಲಕ್ಷ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಫಲವತ್ತಾದ ಭೂಮಿ ಇದ್ದರೂ ಕೃಷಿಯಲ್ಲಿ ಹಿಂದುಳಿದಿದೆ. ಕೃಷಿ ಉತ್ಪನ್ನಗಳ ಇಳುವರಿ ಪಂಜಾಬ್, ಹರಿಯಾಣಗಳಿಗಿಂತ ಕಡಿಮೆಯಿದೆ. ಅತಿವೃಷ್ಟಿ– ಅನಾವೃಷ್ಟಿಗಳ ನಡುವೆ ಸಿಕ್ಕಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅತೀ ಹಿಂದುಳಿದಿರುವ ಬುಂದೇಲ್ ಖಂಡದಲ್ಲಿ ಎಂಟು ವರ್ಷದಲ್ಲಿ ಸುಮಾರು ಎರಡು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ರೈತ ಸಂಘಟನೆಗಳು ಹೇಳುತ್ತವೆ.

ಗಂಗಾ ಮತ್ತು ಯಮುನಾ ಮಾಲಿನ್ಯವೂ ಉತ್ತರ ಪ್ರದೇಶ ಸರ್ಕಾರಕ್ಕೆ ದೊಡ್ಡ ತಲೆನೋವು. ಇದು ಸುಲಭವಾಗಿ ಬಗೆಹರಿಯುವ ಸಮಸ್ಯೆಯಲ್ಲ. ಎರಡೂ ನದಿಗಳು ಯಾವ ಪ್ರಮಾಣದಲ್ಲಿ ಮಲೀನವಾಗುತ್ತಿದೆ ಎನ್ನುವುದನ್ನು ಪದಗಳಲ್ಲಿ ಹೇಳುವುದು ಕಷ್ಟ. ಅಲಹಾಬಾದ್ ಮತ್ತು ವಾರಾಣಸಿಯಲ್ಲಿ ಗಂಗೆಯ ಒಡಲು ಮಲಿನ ಆಗಿರುವುದನ್ನು ನೋಡಿಬಿಟ್ಟರೆ ಯಾರೂ ನೀರಿಗೆ ಇಳಿಯುವುದಿಲ್ಲ.

ನಿರಂತರ ವಿದ್ಯುತ್ ಸಮಸ್ಯೆ ಉತ್ತರ ಪ್ರದೇಶವನ್ನು ಕಾಡುತ್ತಿದೆ. ರಾಜ್ಯದ ಯಾವುದೇ ನಗರ, ಯಾವುದೇ ಪಟ್ಟಣಗಳಿಗೆ ಹೋದರೂ ಜನ ಸಾಮಾನ್ಯವಾಗಿ ಹೇಳುವುದು ನೀರು, ಲೈಟು ಹಾಗೂ ರಸ್ತೆಗಳಿಲ್ಲ ಎನ್ನುವ ದೂರುಗಳನ್ನು. ಬಹುತೇಕ ಎಲ್ಲ ರಾಜ್ಯಗಳು ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದರೂ, ಉತ್ತರ ಪ್ರದೇಶದಲ್ಲಿ ಇದು ಹೆಚ್ಚೆಂದೇ ಹೇಳಬೇಕು. ದಿನಕ್ಕೆ 8ರಿಂದ 16 ಗಂಟೆ ವಿದ್ಯುತ್ ಕಡಿತವಾದರೆ ಜನ ಬದುಕುವುದಾದರೂ ಹೇಗೆ. ರಾಜ್ಯದ ವಿದ್ಯುತ್ ಬೇಡಿಕೆ ಸುಮಾರು 9 ಸಾವಿರ ಮೆ. ವ್ಯಾ. ಪೂರೈಕೆ ಆಗುತ್ತಿರುವುದು ಐದು ಸಾವಿರ ಮೆ.ವ್ಯಾ. ಉಳಿದ ವಿದ್ಯುತ್ ಹೊಂದಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲು. ವಿದ್ಯುತ್ ಸಮಸ್ಯೆಯಿಂದಾಗಿ ಮೂರ್ನಾಲ್ಕು ವರ್ಷದಿಂದ ಅರ್ಧದಷ್ಟು ಕಾರ್ಖಾನೆಗಳು ಮುಚ್ಚಿವೆ.

ಏಳು ಸಾವಿರ ಮೆ.ವ್ಯಾ ಮತ್ತು 1,500 ಮೆ. ವ್ಯಾ. ಉಷ್ಣ ವಿದ್ಯುತ್ ಸ್ಥಾವರ ಯೋಜನೆಗಳು ‘ಬಾಲಗ್ರಹ’ಕ್ಕೆ ಗುರಿಯಾಗಿವೆ. ಕಲ್ಲಿದ್ದಲು ಅಲಭ್ಯತೆಯಿಂದ ಕಾರ್ಯಾರಂಭ ಮಾಡಿಲ್ಲ. 2012ರ ಏಪ್ರಿಲ್ ಬಳಿಕ ಉದ್ಯಮ ಕ್ಷೇತ್ರದಲ್ಲಿ ಸುಮಾರು ಹತ್ತು ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ ₨22ಸಾವಿರ ಕೋಟಿ ಪ್ರಸ್ತಾವನೆ ಸರ್ಕಾರಕ್ಕೆ ಬಂದಿವೆ. ಉತ್ತರ ಪ್ರದೇಶ ಸರ್ಕಾರ, ಲಖನೌದಲ್ಲಿ ‘ಮಾಹಿತಿ ತಂತ್ರಜ್ಞಾನ ಪಾರ್ಕ್’ ಸ್ಥಾಪನೆ ಉದ್ದೇಶ ಹೊಂದಿದೆ. ಇವೆಲ್ಲ ಉದ್ಯಮಗಳಿಗೂ ಹೇಗೆ ವಿದ್ಯುತ್ ಪೂರೈಕೆಯಾಗಲಿದೆ ಎನ್ನುವುದು ದೊಡ್ಡ ಪ್ರಶ್ನೆ.

ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆಗಳು, ಮಹಾನಗರ ಹಾಗೂ ಪಟ್ಟಣಗಳ ಒಳರಸ್ತೆಗಳ ಅವ್ಯವಸ್ಥೆ ಕುರಿತು ಹೇಳದಿರುವುದೇ ಒಳ್ಳೆಯದು. ಎಲ್ಲಿಗೆ ಹೋದರೂ ರಸ್ತೆಗಳು ಎಲ್ಲಿವೆ ಎಂದು ಹುಡುಕಬೇಕು. ಉದಾಹರಣೆಗೆ ಹೇಳುವುದಾದರೆ ಫೂಲ್ಪುರ ಜವಾಹರಲಾಲ್ ನೆಹರು ಪ್ರತಿನಿಧಿಸಿದ್ದ ಕ್ಷೇತ್ರ. ಅಲ್ಲಿಂದ ಜಾನ್ ಪುರದ ಮೂಲಕ ಹಾದು ಅವರ ಮರಿ ಮೊಮ್ಮಕ್ಕಳು ಸ್ಪರ್ಧಿಸಿರುವ ಸುಲ್ತಾನ್ಪುರ ಮತ್ತು ಅಮೇಠಿಗೆ ಹೋಗಬೇಕಾದರೆ ಹರಸಾಹಸ ಪಡಬೇಕು. ಸುಮಾರು 60ಕಿ.ಮೀ ರಸ್ತೆ ಹಳ್ಳಕೊಳ್ಳದ ಪ್ರಯಾಣ. ವಾಹನಗಳು ಎತ್ತಿಹಾಕುವ ರಭಸಕ್ಕೆ ಬೆನ್ನು ನೋವು ಬಂದುಬಿಡುತ್ತದೆ. ಅನೇಕ ಕಡೆ ರಸ್ತೆಗಳಿಲ್ಲದಿದ್ದರೂ ‘ಟೋಲ್’ ಸಂಗ್ರಹ ಮಾಡಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಗೆ ಸಂಪನ್ಮೂಲ ಒದಗಿಸುವುದು ಹೇಗೆಂದು ಯಾರಾದರೂ ಗಂಭೀರವಾಗಿ ಚಿಂತಿಸಿದರೆ, ಬಹುಶಃ ಗಾಬರಿ ಆಗಬಿಡಬಹುದೇನೋ?

ಕೇಂದ್ರ ಯೋಜನಾ ಆಯೋಗವೇ ಹೇಳಿರುವಂತೆ ಉತ್ತರ ಪ್ರದೇಶ ವಿದ್ಯುತ್, ರಸ್ತೆ, ಸಂಪರ್ಕ ಹಾಗೂ ಬ್ಯಾಂಕಿಂಗ್ ವಲಯದಲ್ಲಿ ಬೇರೆ ರಾಜ್ಯಗಳಿಗಿಂತ ಹಿಂದುಳಿದಿದೆ. ರಾಜ್ಯದ ಶೇ. 32ರಷ್ಟು ಹಳ್ಳಿಗಳು ಮಾತ್ರ ವಿದ್ಯುತ್ ಸಂಪರ್ಕ ಪಡೆದಿವೆ. ಹಳ್ಳಿಗಳಿಗೆ ವಿದ್ಯುತ್ ಒದಗಿಸಿರುವ ರಾಷ್ಟ್ರದ ಸರಾಸರಿ ಶೇ.84 ಉತ್ತರ ಪ್ರದೇಶ ಹಿಂದುಳಿದಿದೆ ಎಂದು ಹೇಳುವುದಕ್ಕೆ ಮತ್ಯಾವ ಮಾನದಂಡ ಬೇಕು.
ಉತ್ತರ ಪ್ರದೇಶ ಸಾಕ್ಷರತೆ ಪ್ರಮಾಣ ಸಿಕ್ಕಾಪಟ್ಟೆ ಕಡಿಮೆ ಇದೆ. ಶಾಲಾ– ಕಾಲೇಜು, ವೈದ್ಯ ಶಿಕ್ಷಣ, ಎಂಜಿನಿಯರಿಂಗ್ ಕಾಲೇಜುಗಳ ಕೊರತೆ ಇದೆ. ರಾಹುಲ್ ಗಾಂಧಿ ಪ್ರತಿನಿಧಿಸಿರುವ ಅಮೇಠಿಯಲ್ಲೇ ಒಂದು ಒಳ್ಳೆ ಪದವಿ ಕಾಲೇಜಿಲ್ಲ. ತಮ್ಮ ಕ್ಷೇತ್ರದ ಯುವಕರ ಭವಿಷ್ಯದ ಬಗ್ಗೆ ಚಿಂತಿಸದ ರಾಹುಲ್, ಇಡೀ ದೇಶದ ಯುವಕರ ಭವಿಷ್ಯ ರೂಪಿಸುವುದಾಗಿ ಹೇಳುತ್ತಿರುವುದು ದೊಡ್ಡ ವಿಪರ್ಯಾಸ.

ಶಿಕ್ಷಣದ ವಿಷಯಕ್ಕೆ ಬಂದಾಗ ಕರ್ನಾಟಕ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ಹಾಗೂ ಪಂಜಾಬ್ ಸಾಕಷ್ಟು ಮುಂದಿವೆ. ಉತ್ತರ ಪ್ರದೇಶದಲ್ಲಿ ಪ್ರತಿ ಒಂದು ಲಕ್ಷ ಮಕ್ಕಳಿಗೆ 20 ಮಾಧ್ಯಮಿಕ, 60 ಪ್ರಾಥಮಿಕ ಶಾಲೆಗಳಿವೆ ಎಂದು ಯೋಜನಾ ಆಯೋಗ ಅಂಕಿಸಂಖ್ಯೆ ನೀಡಿದೆ.ಬೇರೆ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ಪ್ರದೇಶದ ಜಿಡಿಪಿ, ತಲಾ ಆದಾಯವೂ ಕಡಿಮೆ ಇದೆ. ಮತೀಯ ಗಲಭೆ, ಧಾರ್ಮಿಕ ಸಂಘರ್ಷಗಳು ಉತ್ತರ ಪ್ರದೇಶದ ಆರ್ಥಿಕ ಪ್ರಗತಿಗೆ ದೊಡ್ಡ ಬೆದರಿಕೆ ಆಗಿದೆ ಎನ್ನುವುದು ಯೋಜನಾ ಆಯೋಗದ ವಿಶ್ಲೇಷಣೆ.
ಉತ್ತರ ಪ್ರದೇಶದ ಈ ಪರಿಸ್ಥಿತಿಗೆ ಯಾರನ್ನು ದೂರಬೇಕು.

ಇದರಲ್ಲಿ ಯಾರೊಬ್ಬರ ಪಾತ್ರವಿದೆ ಎಂದು ಬೆರಳು ತೋರಿಸಬೇಕು....ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಾತ್ರ ಉತ್ತರ ಪ್ರದೇಶದ ಪ್ರಚಾರ ಸಭೆಗಳಲ್ಲಿ ‘ಗುಜರಾತ್ ಅಭಿವೃದ್ಧಿ ಯಶೋಗಾಥೆ’ ಹೇಳುತ್ತಿದ್ದಾರೆ. ಅವರ ಮಾತನ್ನು ಮತದಾರರು ತದೇಕಚಿತ್ತವಾಗಿ ಕೇಳುತ್ತಿದ್ದಾರೆ. ‘ನೀವು ಗುಜರಾತ್ಗೆ ಹೋಗಿ ಅಭಿವೃದ್ಧಿ ನೋಡಿದ್ದೀರಾ?’ ಎಂದು ಯಾರನ್ನಾದರೂ ಕೇಳಿದರೆ, ‘ಇಲ್ಲ ಬೇರೆಯವರು ಹೇಳುವುದನ್ನು ಕೇಳಿದ್ದೇವೆ’ ಎಂಬ ಉತ್ತರ ಬರುತ್ತದೆ. ಯಾರೂ ನೋಡದ ಗುಜರಾತ್ ಪ್ರಗತಿಯನ್ನು ನಿಜವಾಗಿ ವಿಮರ್ಶೆಗೆ ಒಳಪಡಿಸಬೇಕಿದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.