ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಳಕಲ್ | ಜಿಎಸ್‌ಟಿ ವಂಚನೆ ಆರೋಪ: ಕ್ರಮಕ್ಕೆ ಆಗ್ರಹ

Published 23 ಜುಲೈ 2024, 16:11 IST
Last Updated 23 ಜುಲೈ 2024, 16:11 IST
ಅಕ್ಷರ ಗಾತ್ರ

ಇಳಕಲ್ : ಬೇರೆ ರಾಜ್ಯಗಳ ಉದ್ಯಮಿಗಳು ನಗರದಲ್ಲಿ ಗ್ರಾನೈಟ್‌ ಸ್ಲ್ಯಾಬ್‌ಗಳ ಮಾರಾಟ ಮಳಿಗೆ ತೆರೆದಿದ್ದು, ಅವರು  ಸರ್ಕಾರಕ್ಕೆ ಜಿಎಸ್‌ಟಿಯಲ್ಲಿ ವಂಚನೆ ಮಾಡುತ್ತಿದ್ದು,  ಸರ್ಕಾರ ಪರಿಶೀಲಿಸಬೇಕುʼ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು (ನಾರಾಯಣಗೌಡ ಬಣ) ತಹಶೀಲ್ದಾರ್‌ ಸತೀಶ ಕೂಡಲಗಿ ಅವರಿಗೆ ಮನವಿ ಸಲ್ಲಿಸಿ, ಆಗ್ರಹಿಸಿದರು.

ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಕರವೇ ಇಳಕಲ್‌ ತಾಲ್ಲೂಕು ಅಧ್ಯಕ್ಷ ಮಹಾಂತೇಶ ವಂಕಲಕುಂಟಿ ಮಾತನಾಡಿ, ʼತಮಿಳುನಾಡು, ತೆಲಂಗಾಣ, ಗುಜರಾತ, ರಾಜಸ್ಥಾನ ಹಾಗೂ ಒಡಿಶಾದಿಂದ ಲಾರಿಗಳ ಮೂಲಕ ಬಿಲ್‌ ಇಲ್ಲದೇ ಗ್ರಾನೈಟ್‌ ಸ್ಲ್ಯಾಬ್‌ಗಳು ತರಿಸುತ್ತಾರೆ. ಈ ಭಾಗದಲ್ಲಿ ಚೆಕ್‌ ಪೋಸ್ಟ್‌ ತೆರೆದು, ಸರ್ಕಾರಕ್ಕೆ ಜಿಎಸ್‌ಟಿ ವಂಚಿಸುತ್ತಿರುವುದನ್ನು ತಡೆಗಟ್ಟಬೇಕು.

ಗ್ರಾಹಕರು ಕೂಡಾ ಶೇ 18 ಜಿಎಸ್‌ಟಿ ತಪ್ಪಿಸಿಕೊಳ್ಳಲು ಬಿಲ್‌ ಕೇಳದೇ ಇರುವುದರಿಂದ ಜಿಎಸ್‌ಟಿ ವಂಚನೆ ಅವ್ಯಾಹತವಾಗಿ ನಡೆದಿದೆ. ಗ್ರಾಹಕರಿಗೆ ಗ್ರಾನೈಟ್‌ ಸ್ಲ್ಯಾಬ್‌ಗಳ ಅಳತೆಯಲ್ಲಿ ಮೋಸ ಮಾಡುತ್ತಾರೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಸರ್ಕಾರ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಹುನಗುಂದ ತಾಲ್ಲೂಕು ಕರವೇ ಅಧ್ಯಕ್ಷ ರೋಹಿತ್ ಬಾರಕೇರ ಮಾತನಾಡಿದರು.‌

ನಗರ ಘಟಕದ ಅಧ್ಯಕ್ಷ ಅಶೋಕ ಪುಜಾರಿ, ಯುವ ಘಟಕದ ಅಧ್ಯಕ್ಷ ಸಾಗರ ಪಟ್ಟಣಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಾಹೀರ ಸಂಗಮಕರ, ಸಲಿಂ ಜರದಾರಿ, ಹುಸೇನ ಸಂದಿಮನಿ, ಮಂಜುನಾಥ ವಡ್ಡರ, ರವಿ ಕೊಪ್ಪದ, ಕಿರಣ ವಡ್ಡು, ಮಲ್ಲಪ್ಪ ಗೊರಬಾಳ, ಸಂಗಮೇಶ ಗೌತಗಿ, ದಶರಥ ವಡ್ಡರ, ಅಶೋಕ ಬೆವಿನಮಟ್ಟಿ, ಜ್ಯೋತಿ ಶಿಲವಂತರ, ಮಂಜುಳಾ ಅಂಗಡಿ, ಕಸ್ತೂರಿಬಾಯಿ ಮೆರವಾಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT