ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ: ₹17.90 ಲಕ್ಷ ಮೌಲ್ಯದ ಶಾಲಾ ಹಾಲಿನ ಪೌ‌ಡರ್ ವಶ

Published : 5 ಅಕ್ಟೋಬರ್ 2024, 12:11 IST
Last Updated : 5 ಅಕ್ಟೋಬರ್ 2024, 12:11 IST
ಫಾಲೋ ಮಾಡಿ
Comments

ಬಾಗಲಕೋಟೆ: ತಾಲ್ಲೂಕಿನ ಸೂಳಿಕೇರಿಯಿಂದ ಮಹಾರಾಷ್ಟ್ರ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ಕೊಡುವ ₹17.90 ಲಕ್ಷ ಮೌಲ್ಯದ 44.7 ಕ್ವಿಂಟಲ್‌ ಹಾಲಿನ ಪುಡಿಯನ್ನು ಶುಕ್ರವಾರ ಮಧ್ಯರಾತ್ರಿ ಬಾಗಲಕೋಟೆ ಸಿಇಎನ್‌ ಪೊಲೀಸ್ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಾಲಿನ ಪೌಡರ್‌ನೊಂದಿಗೆ 3.25 ಕ್ವಿಂಟಲ್‌ ರಾಗಿ ಹಿಟ್ಟು, 50 ಲೀಟರ್ ಅಡುಗೆ ಎಣ್ಣೆ ಸೇರಿ ಒಟ್ಟು ₹18.14 ಲಕ್ಷ ಮೌಲ್ಯದ ವಸ್ತುಗಳು, ಪಭಡರ್ ಸಾಗಾಟಕ್ಕೆ ಬಳಸುತ್ತಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ, ಆರೋಪಿ ಸಿದ್ದಪ್ಪ ಕಿತ್ತಲಿ ಬಂಧಿಸಲಾಗಿದೆ.

ಜಿಲ್ಲೆಯ ಹುನಗುಂದ, ಬಾದಾಮಿ ತಾಲ್ಲೂಕಿನ ಶಾಲೆಗಳಿಗೆ ಹಾಲಿನ ಪೌಡರ್ ನೀಡುವ ಗುತ್ತಿಗೆಯನ್ನು ಮಹಾಲಿಂಗಪುರದ ಶ್ರೀಶೈಲ ಅಂಗಡಿ ಎಂಬುವವರು ಪಡೆದುಕೊಂಡಿದ್ದರು. ಅವರು ಸಿದ್ದಪ್ಪ ಕಿತ್ತಲಿ ಅವರಿಗೆ ಸಬ್‌ ಲೀಸ್‌ ನೀಡಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಮರನಾಥ ರೆಡ್ಡಿ ತಿಳಿಸಿದ್ದಾರೆ.

ಶಾಲಾ ಅಧಿಕಾರಿಗಳೊಂದಿಗೆ ಶಾಮೀಲಾಗಿ ಶಾಲೆಗಳಿಗೆ ಹಾಲಿನ ಪೌಡರ್‌ ಅನ್ನು ಸಂಪೂರ್ಣವಾಗಿ ಸರಬರಾಜು ಮಾಡದೇ ಉಳಿಸಿಕೊಳ್ಳುತ್ತಿದ್ದರು. ಅದನ್ನು ಅಕ್ರಮವಾಗಿ ಮಹಾರಾಷ್ಟ್ರ ರಾಜ್ಯಕ್ಕೆ ಕಳುಹಿಸುತ್ತಿದ್ದರು ಎಂದು ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT