ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುನಗುಂದ | ಸೇತುವೆ ಬಳಿ ರಕ್ಷಣಾ ಗೋಡೆ ಕುಸಿತ: ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

Published 26 ಜುಲೈ 2024, 4:47 IST
Last Updated 26 ಜುಲೈ 2024, 4:47 IST
ಅಕ್ಷರ ಗಾತ್ರ

ಹುನಗುಂದ: ತಾಲ್ಲೂಕಿನ ಧನ್ನೂರು ಗ್ರಾಮದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಬಳಿ ಎಡ ಭಾಗದ ಒಂದು ಬದಿಯಲ್ಲಿ ರಕ್ಷಣಾಗೋಡೆ (ಕಲ್ಲಿನ ಪಿಚ್ಚಿಂಗ್) ಕುಸಿದಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.

ಹುನಗುಂದ- ತಾಳಿಕೋಟೆ (ಸುರಪೂರ) ರಾಜ್ಯ ಹೆದ್ದಾರಿ 60 ರಲ್ಲಿ ಬರುವ ಧನ್ನೂರು - ತಂಗಡಗಿ ಗ್ರಾಮಗಳ ನಡುವೆ ನಿರ್ಮಿಸಿರುವ ಸೇತುವೆ ಇದಾಗಿದೆ.

ಧನ್ನೂರು ಗ್ರಾಮದ ಬಳಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಸೇತುವೆ ಆರಂಭದ ಎಡ ಭಾಗದ ಒಂದು ಬದಿಯಲ್ಲಿ ರಕ್ಷಣಾ ಗೋಡೆ ಇದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸುಸಜ್ಜಿತವಾಗಿದ್ದ ರಕ್ಷಣಾಗೋಡೆ ಕೆಲ ತಿಂಗಳುಗಳ ಹಿಂದೆ ಕುಸಿದಿದೆ ಜೊತಗೆ ರಕ್ಷಣಾಗೋಡೆಗೆ ಅಳವಡಿಸಿದ್ದ ಚೌಕಾಕಾರದ ಬೃಹತ್ ಗಾತ್ರದ ಕಲ್ಲುಗಳು ನೀರಿನ ಅಲೆಗಳ ಅರ್ಭಟಕ್ಕೆ ರಕ್ಷಣಾ ಗೋಡೆಯಿಂದ ಸರಿದು ನದಿಯ ಪಾಲುಗುತ್ತಿವೆ.

ಕಳೆದೊಂದು ವಾರದಿಂದ ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಕೃಷ್ಣಾ ನದಿ ಮೂಲಕ ಹೊರ ಬಿಡಲಾಗುತ್ತಿದೆ ಜೊತೆಗೆ ಮಲಪ್ರಭಾ ನದಿಯ ನೀರು ಹರಿಯುತ್ತಿದೆ.

ಈ ಸೇತುವೆ ಮುಖಾಂತರ ಕೃಷ್ಣಾ ಮತ್ತು ಮಲಪ್ರಭಾ ನದಿಗಳ ನೀರು ಹರಿದು ನಾರಾಯಣಪೂರ ಜಲಾಶಯ ಸೇರುತ್ತದೆ. ಈ ಪ್ರದೇಶದಲ್ಲಿ ನಾರಾಯಣಪುರ ಜಲಾಶಯದ ಹಿನ್ನೀರು ಅಪಾರ ಪ್ರಮಾಣದಲ್ಲಿ ಸಂಗ್ರಹ ಆಗಿರುವುದರಿಂದ ಈ ರಕ್ಷಣಾಗೋಡೆಗೆ ನಿರಂತರವಾಗಿ ನೀರಿನ ಅಲೆಗಳು ಅಪ್ಪಳಿಸುತ್ತಿವೆ. ಇದರೊಂದಿಗೆ ಪ್ರವಾಹ ಸಂದರ್ಭದಲ್ಲಿ ನೀರಿನ ಅಲೆಗಳ ಅರ್ಭಟ ಜೋರಾಗಿದೆ.

ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸೇತುವೆಯಲ್ಲಿ ನಿತ್ಯ ನೂರಾರೂ ಬಾರಿ ತೂಕದ ವಾಹನಗಳು ಸಂಚರಿಸುತ್ತಿವೆ. ಹೀಗಾಗಿ ರಕ್ಷಣಾ ಗೋಡೆ ಸುರಕ್ಷತೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶೀಘ್ರ ಕ್ರಮಕ್ಕೆ ಮುಂದಾಗಬೇಕು. ನಿರ್ಲಕ್ಷ್ಯ ವಹಿಸಿದರೆ ಅಪಾಯ ತಪ್ಪಿದ್ದಲ್ಲ. ಜಾಗೂರಕತೆಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿದೆ.

ಈ ರಕ್ಷಣಾ ಗೋಡೆ ಬಳಿ ನದಿಯಲ್ಲಿ ಕೆಲವರು ನಿತ್ಯ ಮೀನು ಹಿಡಿಯಲು ಮುಂದಾಗುತ್ತಿದ್ದು, ಅವರನ್ನು ನಿಯಂತ್ರಿಸುವ ಕೆಲಸ ಆಗಬೇಕಿದೆ.

ಹುನಗುಂದ: ತಾಲ್ಲೂಕಿನ ಧನ್ನೂರು ಗ್ರಾಮದ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಎಡ ಭಾಗದಲ್ಲಿ ರಕ್ಷಣಾ ಗೋಡೆ (ಪಿಚ್ಚಿಂಗ್ ನಿಂದ) ಕಲ್ಲುಗಳು ಜರಿದಿರುವುದು

ಸೇತುವೆ ಹತ್ತಿರದ ರಕ್ಷಣಾ ಗೋಡೆ ಕುಸಿದ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡುವೆ -ವೆಂಕಟೇಶ ಹೂಲಗೇರಿ ಎಇಇ ಲೋಕೋಪಯೋಗಿ ಇಲಾಖೆ ಹುನಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT