ಬಾಗಲಕೋಟೆ: ಆರೋಗ್ಯ ಇಲಾಖೆ ಆಯುಕ್ತರ ಆದೇಶದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ (ಡಿಎಚ್ಒ) ಡಾ. ಜಯಶ್ರೀ ಎಮ್ಮಿ ಮುಂದುವರಿದಿದ್ದಾರೆ.

ವರ್ಗಾವಣೆಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿಯಿಂದ (ಕೆಎಟಿ) ತಡೆಯಾಜ್ಞೆ ತಂದಿದ್ದ ಡಾ.ಜಯಶ್ರೀ ಎಮ್ಮಿ ಹಾಗೂ ವರ್ಗಾವಣೆಯಾಗಿ ಬಂದ ಡಾ.ರಾಜಕುಮಾರ ಯರಗಲ್ ಅವರ ನಡುವೆ ಡಿಎಚ್ಒ ಹುದ್ದೆಗಾಗಿ ಕಿತ್ತಾಟ ನಡೆದಿತ್ತು. ಇಬ್ಬರೂ ಒಂದೇ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಮಂಗಳವಾರ ಸಂಜೆ ಆರೋಗ್ಯ ಇಲಾಖೆ ಆಯುಕ್ತ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, 'ಡಾ.ಜಯಶ್ರೀ ಎಮ್ಮಿ ಮುಂದುವರಿಯಲಿ. ಡಾ.ಯರಗಲ್ ಅವರು ಸರ್ಕಾರಕ್ಕೆ ವರದಿ ಮಾಡಿಕೊಳ್ಳಬೇಕು’ ಎಂದು ಸೂಚಿಸಿದ್ದರು.

ಆ ನಂತರವೂ ಬುಧವಾರ ಬೆಳಿಗ್ಗೆ ಡಾ.ಯರಗಲ್ ಕಚೇರಿಗೆ ಬಂದು ಕೂತಿದ್ದರು. ಮಧ್ಯಾಹ್ನದ ಬಳಿಕ ಹೊರಟು ಹೋಗಿದ್ದು, ಡಿಎಚ್ಒ ವಾಹನವನ್ನೂ ಇಲಾಖೆಗೆ ವಾಪಸ್ ಕಳುಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.