ಹೊರ್ತಿ: ಸಮೀಪದ ದೇಗಿನಾಳ ಗ್ರಾಮದ ಮಹಾಲಕ್ಷ್ಮಿ ದೇವಿಯ ಜಾತ್ರೆಯು ನ.5 ಮತ್ತು 6ರಂದು ನಡೆಯಲಿದೆ.

ದೇವಿಯ ಜಾತ್ರೆಯು 1979ರಲ್ಲಿ ನೂತನ ಕಟ್ಟಡದೊಂದಿಗೆ ಪ್ರಾರಂಭ
ಗೊಂಡಿತು. ಶ್ರೀದೇವಿಯು ಮಹಿಷಾಸುರ
ನನ್ನು ಸಂಹರಿಸಿ, ಮಹಾಲಕ್ಷ್ಮಿಯಾಗಿ ಇಲ್ಲಿ ಬಂದು ನೆಲೆಸಿದಳೆಂಬ ಪ್ರತೀತಿ ಇದೆ. ಹಾಗಾಗಿ ಈ ಗ್ರಾಮಕ್ಕೆ ದೇವಿನಾಳ (ನೆಲ) ಎಂಬ ಹೆಸರು ಬಂತು. ಕಾಲಾನುಕ್ರಮದಲ್ಲಿ ದೇಗಿನಾಳ ಎಂದು ಬದಲಾವಣೆಯಾಗಿದೆ.

ಕಾರ್ಯಕ್ರಮದ ವಿವರ: ನ.5ರಂದು ನಿವೃತ್ತ ಸೈನಿಕರಿಗೆ ಸನ್ಮಾನ, ಪಲ್ಲಕ್ಕಿ ಉತ್ಸವ, ದೇವಿ ಗುಡಿಗೆ ವಿದ್ಯುತ್ ದೀಪದ ಅಲಂಕಾರಕ್ಕೆ ಚಾಲನೆ ನೀಡಲಾಗುವುದು. ಬಳಿಕ ಗುಡಿಯ ಆವರಣದಲ್ಲಿ ದೀಪೋತ್ಸವ, ಭಜನಾ ಕಾರ್ಯಕ್ರಮಗಳು ನಡೆಯುತ್ತವೆ.

ನ.6 ರಂದು ರುದ್ರಾಭಿಷೇಕ, ದೇವಿಯ ನೂತನ ದ್ವಾರಬಾಗಿಲ ನಿರ್ಮಾಣದ ಭೂಮಿಪೂಜೆ, ಮಹಿಳೆ
ಯರ ಕುಂಭ ಮೆರವಣಿಗೆ, ದೇವಿಗೆ ಕುಂಭಾಭಿಷೇಕ, ಮುತ್ತೆದೆಯರಿಗೆ ಉಡಿ
ತುಂಬುವ ಕಾರ್ಯಕ್ರಮ, ಅನ್ನ
ಸಂತರ್ಪಣೆ ಬಳಿಕ ಮದ್ದು ಸುಡುವುದು, ಸೇವಾ ದಾನಿಗಳಿಗೆ ಸನ್ಮಾನ, ತಾಲ್ಲೂಕಿನ ನಿಂಬಾಳ ಬಿ ಕೆ. ಗ್ರಾಮದ ಶಂಕರಲಿಂಗ ನಾಟ್ಯ ಸಂಘದವರಿಂದ ‘ರೈತ ಹಚ್ಚಿದ ದೀಪ’ ಅರ್ಥಾತ್ ‘ಕಲಿಯುಗದ ಭೀಮ’ ಎಂಬ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.