ಪ್ರಜಾವಾಣಿ ವಾರ್ತೆ

ಬಾಗಲಕೋಟೆ: ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸ್ಥಾಪನೆಯಿಂದ ಇಲ್ಲಿಯವರೆಗೆ 3,373 ದೂರುಗಳು ದಾಖಲಾಗಿದ್ದು, ಇವುಗಳ ಪೈಕಿ 3,270 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಆಯೋಗದ ಅಧ್ಯಕ್ಷ ಡಿ.ವೈ.ಬಸಾಪುರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಆಯೋಗವು 2004ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ನೊಂದ ಗ್ರಾಹಕರಿಗೆ ನ್ಯಾಯ ಒದಗಿಸಿದೆ. ಬೆಳೆ, ಜೀವ, ಬ್ಯಾಂಕ್, ಸೊಸೈಟಿ, ಆನ್‌ಲೈನ್‍ನಲ್ಲಿ ಖರೀದಿಸಿದ ವಸ್ತುಗಳು, ದೋಷಪೂರಿತ ವಾಹನ, ರೈತರಿಗೆ ಪೂರೈಸಿದ ಕಳಪೆ ಬೀಜ, ವೈದ್ಯಕೀಯ ಸೇವಾ ನ್ಯೂನತೆ ಮತ್ತು ಸರ್ಕಾರಿ, ಅರೆ ಸರ್ಕಾರಿ ಇಲಾಖೆಗಳ ಪ್ರಕರಣಗಳಲ್ಲಿ ಶೀಘ್ರ ನ್ಯಾಯ ಒಸಗಿಸಲಾಗುತ್ತಿದೆ ಎಂದಿದ್ದಾರೆ.

2023ರಲ್ಲಿ 282 ಪ್ರಕರಣಗಳು ದಾಖಲಾಗಿವೆ. 21 ಮಾತ್ರ ಬಾಕಿ ಉಳಿದಿವೆ. ಅದೇ ರೀತಿ ಅಮಲ್ಜಾರಿ ಅರ್ಜಿಗಳು 1,160 ದಾಖಲಾಗಿದ್ದು, ಇವುಗಳಲ್ಲಿ 1,074 ವಿಲೇವಾರಿ ಮಾಡಲಾಗಿದೆ.

ಆಯೋಗಗಳಲ್ಲಿ ಚಾಲ್ತಿಯಲ್ಲಿರುವ ಪ್ರಕರಣಗಳ ಶೇ15 ರಷ್ಟು, ಇಲ್ಲವೇ ಕನಿಷ್ಠ 40 ಪ್ರಕರಣಗಳನ್ನು ಪ್ರತಿ ತಿಂಗಳು ಇತ್ಯರ್ಥ ಪಡಿಸಲು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೊಗ ಸುತ್ತೋಲೆ ಹೊರಡಿಸಿದೆ. ಪ್ರತಿ ತಿಂಗಳೂ ಸತತವಾಗಿ 40ಕ್ಕಿಂತಲೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಮಾಡಿ ಜಿಲ್ಲಾ ಆಯೋಗ ದಾಖಲೆ ಸೃಷ್ಟಿಸಿದೆ ಎಂದಿದ್ದಾರೆ.

ಪ್ರತಿ ತಿಂಗಳು ಮೊದಲ ಶನಿವಾರ ಗ್ರಾಹಕ ಸಂಜೋತಾ ಇ-ಮಂಚ್ ಹಾಗೂ ಮೂರನೇ ಶನಿವಾರ ಉಪಬೋಕ್ತ ಎಂಬ ಹೆಸರಿನಲ್ಲಿ ಲೋಕ್ ಅದಾಲತ್ ಏರ್ಪಡಿಸಿ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು ಎಲ್ಲ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿದೆ. ಪ್ರತಿ ತಿಂಗಳು ತಪ್ಪದೇ ಲೋಕ ಅದಾಲತ್ ಏರ್ಪಡಿಸಿ, ವರ್ಷದಲ್ಲಿ 86 ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದ್ದು, ₹94,65,951 ಗ್ರಾಹಕರಿಗೆ ಪರಿಹಾರ ನೀಡಲಾಗಿದೆ.

ಆಯೋಗದ ಆದೇಶದ ಪ್ರಕಾರ ಎದುರುದಾರರು ಆಯೋಗದಲ್ಲಿ ಜಮೆ ಮಾಡಿದ ₹1,39 ಕೋಟಿಯನ್ನು ವರ್ಷದ ಅವಧಿಯಲ್ಲಿ ಗ್ರಾಹಕರಿಗೆ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.