ಜಮಖಂಡಿ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಶೆಡ್ ಮೇಲೆ ಪೊಲೀಸರು ದಾಳಿ ಮಾಡಿ ಮೂವರ ವಿರುದ್ಧ ಪ್ರಕರಣ ದಾಖಲು ಮಾಡಿ, 191 ಮೂಟೆ ಅಕ್ಕಿ ಚೀಲ ಹಾಗೂ ಒಂದು ವಾಹನ ವಶಪಡಿಸಿಕೊಂಡ ಘಟನೆ ನಗರದಲ್ಲಿ ನಡೆದಿದೆ.

ಶೆಡ್ನ ಮಾಲೀಕ ಹಾಜಿಲಾಲ್ ಪೈಲ್ವಾನ್, ವಾಹನದ ಮಾಲೀಕ ಮಲ್ಲಿಕಾರ್ಜುನ ಬಿರಾದಾರ ಮತ್ತು ವಾಹನ ಚಾಲಕ ಬಸವರಾಜ ವಜ್ರಮಟ್ಟಿ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಖಚಿತ ಮಾಹಿತಿಯನ್ನಾಧರಿಸಿ ಆಹಾರ ನಿರೀಕ್ಷಕ ಸುರೇಶ ದಳವಾಯಿ ಅವರು ನೀಡಿದ ದೂರಿನನ್ವಯ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಮೇತ ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ಥಳಕ್ಕೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಆಹಾರ ನಿರೀಕ್ಷಕ ಸುರೇಶ ದಳವಾಯಿ, ಅಪರಾಧ ವಿಭಾಗದ ಪಿಎಸ್ಐ ಕೆ.ಟಿ.ಮಾನೆ, ಸಾವಳಗಿ ವಲಯ ಆಹಾರ ನಿರೀಕ್ಷಕ ಆನಂದ ರಾಠೊಡ, ಶವಶರಣ ಮಾಲಗಾರ, ಕಂದಾಯ ನಿರೀಕ್ಷಕ ಮಂಜುನಾಥ ದೊಡಮನಿ, ಗ್ರಾಮ ಸಹಾಯಕ ಶಬ್ಬಿರ ಅವಟಿ, ಪೊಲೀಸ್ ಸಿಬ್ಬಂದಿ ಎಸ್.ವೈ.ಆಸಂಗಿ, ಎಸ್.ಎಚ್.ಕೋಠಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.