ಬಾಗಲಕೋಟೆ: ಸೆಕೆಂಡ್ ಹ್ಯಾಂಡ್ ಮೊಬೈಲ್ ನೀಡಿದ್ದ ಕಂಪನಿಗೆ ಶೇ 9ರ ಬಡ್ಡಿ ದರದಲ್ಲಿ ಮೊಬೈಲ್ ಮೊತ್ತ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚಿಸಿದೆ.

ಹುನಗುಂದ ತಾಲ್ಲೂಕಿನ ಸುಳೆಭಾವಿ ಗ್ರಾಮದ ಅನಿಲ ಗೌಡರ ಎಂಬುವವರು ಫ್ಲಿಪ್ಕಾರ್ಟ್ ಇಂಟರ್ನೆಟ್ ಪ್ರೈವೇಟ್ ಕಂಪನಿಯಿಂದ ‘ಪೊಕೊ ಎಕ್ಸ್ 3 ಪ್ರೊ’ ಎಂಬ ಮೊಬೈಲ್ ಖರೀದಿಸಿದ್ದರು.

ಮೊಬೈಲ್ ಸರಿಯಾಗಿ ಕಾರ್ಯ ನಿರ್ವಹಿಸಲಿಲ್ಲ. ಪರಿಶೀಲಿಸಿದಾಗ ಖರೀದಿಗಿಂತ ಮೊದಲೇ ಬಳಸಿದ ಸೆಕೆಂಡ್ ಹ್ಯಾಂಡ್ ಮೊಬೈಲ್ ಕಳುಹಿಸಿದ್ದು ಗೊತ್ತಾಯಿತು. ಮೊಬೈಲ್ ಬದಲಿಸಿ ಕೊಡುವಂತೆ ಮೊಬೈಲ್ ಕಳುಹಿಸಿದ ನೆವರ್ ಸೆಟಲ್ ಕಂಪನಿಯವರನ್ನು ಕೇಳಿದಾಗ ಬದಲಾಯಿಸುತ್ತೇವೆ ಎಂದವರು ಬದಲಾಯಿಸಿಕೊಡಲಿಲ್ಲ. ಕೊನೆಗೆ ಅನಿಲ ಆಯೋಗಕ್ಕೆ ದೂರು ನೀಡಿದರು.

ಆಯೋಗ ವಿಚಾರಣೆ ಮಾಡಿದಾಗ ಮೊಬೈಲ್ ಅನ್ನು ಆ್ಯಕ್ಟಿವೇಶನ್ ಮಾಡಿದ ಎರಡು ವರ್ಷಗಳ ನಂತರ ಅನಿಲ ಅವರಿಗೆ ಮಾರಾಟ ಮಾಡಿದ್ದು ಸ್ಪಷ್ಟವಾಯಿತು.

ಸೇವಾ ನ್ಯೂನತೆ ಎಸಗಿದ ಕಂಪನಿಯವರು ದೂರುದಾರರಿಗೆ ಮೊಬೈಲ್ ದರ ₹ 23,990 ಅನ್ನು ಶೇ9ರ ಬಡ್ಡಿ ಸಮೇತ ನೀಡಬೇಕು. ಆಯೋಗಕ್ಕೆ ಅಲೆದಾಡಿಸಿದ್ದರಿಂದ ವಿಶೇಷ ಪರಿಹಾರವಾಗಿ ₹15 ಸಾವಿರ, ಪ್ರಕರಣದ ಖರ್ಚು ₹5 ಸಾವಿರ ನೀಡಬೇಕು ಎಂದು ಆಯೋಗದ ಅಧ್ಯಕ್ಷ ಡಿ.ವೈ. ಬಸಾಪುರ, ಸದಸ್ಯ ಕಮಲಕಿಶೋರ ಜೋಶಿ ಅವರನ್ನೊಳಗೊಂಡ ಪೀಠ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.