ಆನ್‌ಲೈನ್ ಮಾರುಕಟ್ಟೆಯಿಂದ ನಮಗೆ ಬೇಡಿಕೆ ಕಡಿಮೆ
‘ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಹಿವಾಟು ಕೂಡ ಹೆಚ್ಚಾಗಿದ್ದು ಬಹುತೇಕ ಮಂದಿ ಮೊಬೈಲ್‌ನಲ್ಲೇ ಬಗೆಬಗೆಯ ವಸ್ತುಗಳನ್ನು ಆಯ್ಕೆ ಮಾಡಿ ಖರೀದಿಸುತ್ತಾರೆ. ಇದರಿಂದ ನಾವು ಮಾರುವ ವಸ್ತುಗಳಿಗೆ ಬೇಡಿಕೆ ಕೊಂಚ ಕುಗ್ಗಿದೆ. ಆದರೂ ನಾವು ಕುಲಕಸುಬು ಬಿಡಲು ಆಗುವುದಿಲ್ಲ. ನಮಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ಸಿಗುವುದಿಲ್ಲ. ಜನರು ಆನ್‌ಲೈನ್‌ನಲ್ಲಿ ದುಬಾರಿ ಖರ್ಚು ಮಾಡಿ ವಸ್ತುಗಳನ್ನು ಕೊಳ್ಳುವ ಬದಲು ನಾವು ಸಿದ್ಧಪಡಿಸಿದ ವಸ್ತುಗಳನ್ನು ಕಡಿಮೆ ದರದಲ್ಲಿ ಖರೀದಿಸಬಹುದು. ಮಾರಾಟದಿಂದ ಬರುವ ಆದಾಯದಿಂದ ನಾವು ಖುಷಿಯಿಂದ ದೀಪಾವಳಿ ಆಚರಿಸಲು ಸಾಧ್ಯವಾಗುತ್ತದೆ’ ಇಂದ್ರಹಾಸನ ಹೇಳಿದರು.