ಪ್ರಜಾವಾಣಿ ವಾರ್ತೆ

ಸಂಡೂರು ‘ರಾಜ್ಯದಲ್ಲಿ 371 ಜೆ ಸಂವಿಧಾನಿಕ ವಿಶೇಷ ಸ್ಥಾನಮಾನಕ್ಕೆ 1999 ರಲ್ಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೇಂದ್ರದ ಅಂದಿನ ಬಿಜೆಪಿ ಸರ್ಕಾರದ ಹಿತಾಸಕ್ತಿ ಕೊರತೆಯಿಂದ ವಿಳಂಬವಾಯಿತು. ಇದರಿಂದಾಗಿ ಕಲ್ಯಾಣ ಕರ್ನಾಟಕಕ್ಕೆ ಸಾಕಷ್ಟು ಹಿನ್ನಡೆಯಾಯಿತು’ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯ್ ಸಿಂಗ್ ತಿಳಿಸಿದರು.

ಕೃಷ್ಣಾನಗರದ ಕೆ.ಪಿ.ಸಿ.ಸಿ ಕ್ಯಾಂಪ್ನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

‘ಎಸ್.ಎಂ ಕೃಷ್ಣಾ ಅವರು ಮುಖ್ಯಂಮತ್ರಿ ಆಗಿದ್ದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್, ಎಂ.ವೈ ಘೋರ್ಪಡೆ ಸೇರಿ ಎಲ್ಲ ಮುಖಂಡರು 371 ಜೆ ತಿದ್ದುಪಡಿಗೆ ಶಿಫಾರಸು ಮಾಡಿದ್ದರು. ಅಂದಿನ ಉಪ ಪ್ರಧಾನಿ ಎಲ್.ಕೆ ಅಡ್ವಾಣಿ ಈ ರೀತಿ ಕರ್ನಾಟಕಕ್ಕೆ ಸ್ಥಾನಮಾನ ನೀಡಿದರೆ ಬೇರೆ ರಾಜ್ಯಗಳಿಗೂ ನೀಡಬೇಕಾಗುವುದು ಎಂದಿದ್ದರು. ಇದರಿಂದಾಗಿ ಕಲ್ಯಾಣ ಕರ್ನಾಟಕವು ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದೆ ಉಳಿಯಿತು’ ಎಂದರು.

‘ಕಳೆದ ಹತ್ತು ವರ್ಷದಲ್ಲಿ ನಿಗಮಕ್ಕೆ ₹20 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಕಳೆದ ವರ್ಷ ಕೆ.ಕೆ.ಆರ್.ಡಿ.ಬಿಗೆ ಸರ್ಕಾರ ₹3 ಸಾವಿರ ಕೋಟಿ ಅನುದಾನ ನೀಡಿದ್ದು, ಈ ಬಾರಿ ₹5 ಸಾವಿರ ಕೋಟಿ ನೀಡಿದೆ. ಇದು ಇತಿಹಾಸದಲ್ಲೇ ಮೊದಲು. ಕಳೆದ 10 ವರ್ಷಗಳಲ್ಲಿ ಅಂದಾಜು ₹20 ಸಾವಿರ ಕೋಟಿ ನೀಡಲಾಗಿದ್ದು, ಉದ್ಯೋಗ, ಶಿಕ್ಷಣ, ಮೂಲ ಸೌಕರ್ಯಗಳ ವಿಷಯದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ಈ ಕೆಲಸ ಮೊದಲೇ ಆಗಬೇಕಿತ್ತು. ಇದಕ್ಕೆ ಬಿಜೆಪಿ ಅಡ್ಡಗಾಲು ಹಾಕಿದೆ’ ಎಂದು ದೂರಿದರು.

‘ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವಿಗೆ ಸಹಕಾರಿ ಆಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ವಸಂತ್ ಕುಮಾರ್ ಮಾತನಾಡಿ, ‘ಜನಾರ್ದನ ರೆಡ್ಡಿ ಅವರಿಗೆ ಮತ್ತೆ ಅಧಿಕಾರದ ರುಚಿ ತೋರಿಸಬಾರದು, ಹಾಗಾದಲ್ಲಿ ಮತ್ತೆ ರಿಪಬ್ಲಿಕ್ ಆಫ್ ಬಳ್ಳಾರಿ ಆಗಲಿದೆ’ ಎಂದು ಹೇಳಿದರು.

ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ಪಳನಿಯಪ್ಪನ್, ಕೆಪಿಸಿಸಿ ಉಪಾಧ್ಯಕ್ಷ ಎ.ಆರ್.ಎಂ ಹುಸೇನ್, ಬಳ್ಳಾರಿ ಕಾಂಗ್ರೆಸ್ ಸಮಿತಿ ಶಿವಯೋಗಿ, ಕೆ.ಪಿ.ಸಿ.ಸಿ ಸಂಯೋಜಕ ನಜೀರ್ ಅಹ್ಮದ್, ಶಿಬಿರ ಉಸ್ತುವಾರಿ ಲೋಕೇಶ್ ನಾಯ್ಕ್, ತಿಪ್ಪೇಸ್ವಾಮಿ, ರಾಜಶೇಖರ್ ಹುಣಸಿ, ಸುಧಾಕರ್ ಬಡಿಗೇರು, ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.