ಹೊಸಪೇಟೆ:ಎಂ.ಎಸ್.ಪಿ.ಎಲ್. ಹಾಗೂ ಜೈಪುರದ ಭಗವಾನ್ ಮಹಾವೀರ್ ಅಂಗವಿಕಲರ ಸಹಕಾರ ಸಮಿತಿ ಸಹಭಾಗಿತ್ವದಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಉಚಿತ ಕೃತಕ ಕಾಲು ಜೋಡಣೆ ಶಿಬಿರಕ್ಕೆ ಗುರುವಾರ ತೆರೆ ಬಿತ್ತು.

ಒಟ್ಟು 210 ಜನರಿಗೆ ಕೃತಕ ಕಾಲು ಅಳವಡಿಸಲಾಯಿತು. 20 ಮಂದಿಗೆ ಊರುಗೋಲು, 8 ಹ್ಯಾಂಡ್ ಸ್ಟಿಕ್ , ಎರಡು ವಾಕರ್, ತಲಾ ಒಂದು ವೀಲ್ ಚೇರ್, ಮೂರು ಚಕ್ರದ ಬೈಸಿಕಲ್ ವಿತರಿಸಲಾಯಿತು. ನಾಲ್ಕು ಜನರಿಗೆ ಫಿಜಿಯೊಥೆರಪಿ, ಇಬ್ಬರಿಗೆ ಶಸ್ತ್ರಚಿಕಿತ್ಸೆಗೆ ವೈದ್ಯರು ಸಲಹೆ ಮಾಡಿದರು.

ಶಿಬಿರದಲ್ಲಿ ಹುಬ್ಬಳ್ಳಿ, ಬೆಳಗಾವಿ, ರಾಯಚೂರು, ಮೈಸೂರು, ಆಂಧ್ರ ಪ್ರದೇಶದ ಕರ್ನೂಲ್ ಸೇರಿದಂತೆ ವಿವಿಧ ಭಾಗಗಳಿಂದ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಪಾಲ್ಗೊಂಡಿದ್ದರು.

ಸ್ಥಳದಲ್ಲೇ ಕಾಲಿನ ಅಳತೆ ಪಡೆದು, ಅಲ್ಲಿಯೇ ತಯಾರಿಸಿ, ಜೋಡಿಸಲಾಯಿತು. ಪೋಲಿಯೊ ಸೇರಿ ಇತರ ಕಾರಣಗಳಿಂದ ಅಂಗವೈಕಲ್ಯಕ್ಕೆ ಗುರಿಯಾದವರಿಗೆ ಕ್ಯಾಲಿಪರ್ಸ್ಗಳನ್ನು ಅಳವಡಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಉಪಾಹಾರ, ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.