ಗುರುವಾರ, 26 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಸ್ಸಾಂ ಶಂಕಿತ ಉಗ್ರ ಜಿಗಣಿಯಲ್ಲಿ ಸೆರೆ

ಗುವಾಹಟಿಯಲ್ಲಿ ಬಾಂಬ್‌ ಇಟ್ಟ ಆರೋಪ* ಎನ್‌ಐಎ ಅಧಿಕಾರಿಗಳಿಗೆ ಸ್ಥಳೀಯ ಪೊಲೀಸರ ನೆರವು
Published : 26 ಸೆಪ್ಟೆಂಬರ್ 2024, 20:50 IST
Last Updated : 26 ಸೆಪ್ಟೆಂಬರ್ 2024, 20:50 IST
ಫಾಲೋ ಮಾಡಿ
Comments

ಆನೇಕಲ್: ತಾಲ್ಲೂಕಿನ ಜಿಗಣಿಯಲ್ಲಿ ತಲೆಮರೆಸಿಕೊಂಡಿದ್ದ ಅಸ್ಸಾಂ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.   

ಶಂಕಿತ ಉಗ್ರ ಗಿರೀಶ್‌ ಬೋರಾ ಅಲಿಯಾಸ್‌ ಗೌತಮ್‌ ಬೋರಾ ಒಂದೂವರೆ ತಿಂಗಳಿಂದ ಜಿಗಣಿಯ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿಕೊಂಡಿದ್ದ.

ಇದೇ ಆಗಸ್ಟ್‌ನಲ್ಲಿ ಅಸ್ಸಾಂ ರಾಜಧಾನಿ ಗುವಾಹಟಿಯ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್‌ ಇಟ್ಟ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ.

ಅಸ್ಸಾಂ ಉಗ್ರ ಅಭಿಷೇಕ್‌ ಗುಹಾ ಸಹಚರನಾದ ಈತ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ₹5ಲಕ್ಷ ಪಡೆದು ರೈಲು ಹಳಿ, ಉದ್ಯಾನ ಸೇರಿದಂತೆ ಗುವಾಹಟಿಯ ಐದು ಕಡೆ ಬಾಂಬ್‌ ಇಟ್ಟು ತಲೆಮರೆಸಿಕೊಂಡಿದ್ದ ಎಂದು ಎನ್‌ಐಎ ಮೂಲಗಳು ಹೇಳಿವೆ. 

ಆಗಸ್ಟ್‌ 10ರಂದು ಬೆಂಗಳೂರಿಗೆ ಬಂದ ಈತ ಪತ್ನಿಯ ಸ್ನೇಹಿತೆಯ ನೆರವು ಪಡೆದು ಜಿಗಣಿ ಸಮೀಪದ ವಡ್ಡರಪಾಳ್ಯದಲ್ಲಿ ಬಾಡಿಗೆ ಮನೆ ಪಡೆದಿದ್ದ. ನಂತರ ಇಂದಿರಾನಗರದ ಎಫ್‌ 360 ಫೆಸಿಲಿಟಿ ಸರ್ವೀಸ್‌ ಏಜೆನ್ಸಿ ಮೂಲಕ ಜಿಗಣಿ ಕೈಗಾರಿಕ ಪ್ರದೇಶದ ಎಲಿಮೆಂಟಲ್ಸ್‌ ಫಿಕ್ಸರ್‌ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸಕ್ಕೆ ಸೇರಿದ್ದ ಎಂದು ತಿಳಿದುಬಂದಿದೆ. 

ಗಿರೀಶ್‌ ಬೋರಾ ಬೆಂಗಳೂರಿನಲ್ಲಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಎನ್‌ಐಎ ಅಧಿಕಾರಿಗಳು ಉಗ್ರರ ಬಂಧನಕ್ಕೆ ಬಲೆ ಬೀಸಿದ್ದರು. ಸ್ಥಳೀಯ ಪೊಲೀಸರ ನೆರವಿನೊಂದಿಗೆ ಜಿಗಣಿಯಲ್ಲಿ ಈತನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದರು. ಸ್ಥಳೀಯ ನ್ಯಾಯಾಲಯದಲ್ಲಿ ಟ್ರಾನ್ಸಿಟ್‌ ವಾರೆಂಟ್‌ ಪಡೆದು ಅಸ್ಸಾಂಗೆ ಕರೆದೊಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT