ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ಶಾಲೆಗಳಿಗೆ ಸಿ.ಸಿ ಕ್ಯಾಮೆರಾ ಕಣ್ಗಾವಲು

ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿ ಕೆಡಿಪಿ ಸಭೆ
Published 26 ಜುಲೈ 2024, 13:47 IST
Last Updated 26 ಜುಲೈ 2024, 13:47 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು.

ಪಂಚಾಯಿತಿ ಅಧ್ಯಕ್ಷ ನಾಗೇಶ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಸುಗಟೂರು, ಜೆ.ವೆಂಕಟಾಪುರ, ಬೈರಸಂದ್ರ, ಬಳುವನಹಳ್ಳಿ, ಮಿತ್ತನಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರು, ನೈರ್ಮಲ್ಯ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ಜಲಜೀವನ್ ಮಿಶನ್ ಯೋಜನೆಯಡಿ ಕೊಳವೆಬಾವಿ ಕೊರೆಯುವ, ಪೈಪ್‌ಲೈನ್ ಕಾರ್ಯ ಪ್ರಗತಿಯಲ್ಲಿದ್ದು ಶೀಘ್ರವೇ ಮನೆಮನೆಗಳಿಗೆ ನೀರು ಒದಗಿಸಲಾಗುವುದು. ತಲಾ ಮನೆಗೆ ಒಂದೇ ಸಂಪರ್ಕ ಪಡೆಯಲು ನಾಗರಿಕರು ಸಹಕರಿಸಬೇಕು. ಹಳೆ ಮಾದರಿ ಕಬ್ಬಿಣದ ಮತ್ತು ಶಿಥಿಲವಾಗಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾತ್ಯಾಯಿನಿ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ನಾಲ್ಕು ಹಿರಿಯ ಪ್ರಾಥಮಿಕ ಮತ್ತು ಒಂದು ಕಿರಿಯ ಪ್ರಾಥಮಿಕ ಶಾಲೆಗಳಿಗೆ ಸಿ.ಸಿ ಟಿವಿ ಕ್ಯಾಮೆರಾ ಮತ್ತು ಸೋಲಾರ್ ಶಕ್ತಿ ಪ್ಯಾನೆಲ್‌ ಅಳವಡಿಸಲಾಗುವುದು ಎಂದು ತಿಳಿಸಿದರು.

ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಭೌತಿಕ ಮತ್ತು ಕಲಿಕಾಪರಿಸರ ಸುಂದರವಾಗಿದ್ದು, ಸ್ಮಾರ್ಟ್ ತರಗತಿ, ಇಂಗ್ಲಿಷ್‌ ಮಾಧ್ಯಮ, ಅಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಿಸ‌ಲಾಗುವುದು ಎಂದು ತಿಳಿಸಿದರು.

ಜೆ.ವೆಂಕಟಾಪುರದ ಶಾಲೆಯಲ್ಲಿಯೂ ಇಂಗ್ಲಿಷ್‌ ಮಾಧ್ಯಮ ಆರಂಭಿಸಿದ್ದು, ಜೆ.ವೆಂಕಟಾಪುರ, ಬೈರಸಂದ್ರ ಶಾಲೆಗಳಲ್ಲಿಯೂ ಸ್ಮಾರ್ಟ್ ಕ್ಲಾಸ್‌ಗೆ ಬೇಕಾದ ಸವಲತ್ತು ಒದಗಿಸಲಾಗುವುದು ಎಂದರು.

ಬೈರಸಂದ್ರ ಸರ್ಕಾರಿ ಶಾಲೆಗೆ ಸಂಪು ನಿರ್ಮಾಣ, ಅಡುಗೆ ಕೋಣೆ, ಶೌಚಾಲಯ ನಿರ್ಮಾಣ, ಬೈರಸಂದ್ರ ಶಾಲೆಗೆ ನಿವೇಶನ ಒದಗಿಸಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಿಆರ್‌ಪಿ ರಮೇಶ್‌ಕುಮಾರ್, ಆರೋಗ್ಯ ಇಲಾಖೆಯ ಆಶಾ, ರೇಷ್ಮೆ ಇಲಾಖೆಯ ನಿರೀಕ್ಷಕ ಮಂಜುನಾಥ್ ಮಾತನಾಡಿದರು.

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವೆಂಕಟರೆಡ್ಡಿ, ಸದಸ್ಯ ಸತೀಶ್‌ಕುಮಾರ್, ಬಳುವನಹಳ್ಳಿ ನಾರಾಯಣಸ್ವಾಮಿ, ತಿರುಪಳಪ್ಪ, ನಯನಾ ಹರೀಶ್, ಸುರೇಶ್, ಶಿವರಾಮಕೃಷ್ಣೇಗೌಡ, ಶಶಿಕಲಾ, ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ಜೆ.ವೆಂಕಟಾಪುರ ಶಾಲೆಯ ಗೀತಾ, ಬೈರಸಂದ್ರ ಶಾಲೆಯ ನಾರಾಯಣಸ್ವಾಮಿ, ಬಳುವನಹಳ್ಳಿಯ ಶಾಲೆಯ ವೇದಾವತಿ, ಸುಗಟೂರು ದೇವರಾಜು ಹಾಜರಿದ್ದರು.

ಸ್ತ್ರೀಶಕ್ತಿ ಭವನ ಅಂಗನವಾಡಿಗೆ ಸ್ವಂತ ಸೂರು

ಜೆ.ವೆಂಕಟಾಪುರದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ ನಿರ್ಮಾಣ ಕಾರ್ಯವನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು. ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 74 ಸ್ತ್ರೀಶಕ್ತಿ ಗುಂಪುಗಳಿದ್ದು ಅವರಿಗೆ ಸುಗಟೂರು ಜೆ.ವೆಂಕಪಟಾಪುರದಲ್ಲಿ ಅಗತ್ಯ ಸ್ತ್ರೀಶಕ್ತಿ ಭವನ ನಿರ್ಮಾಣ ಮಳಿಗೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಪಿಡಿಒ ಕಾತ್ಯಾಯಿನಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT