ದೊಡ್ಡಬಳ್ಳಾಪುರ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ದಿನಾಂಕ ಘೋಷಣೆಯೊಂದಿಗೆ ಚುನಾವಣ ನೀತಿ ಸಂಹಿತೆಯು ಜ.16 ರಿಂದಲೇ ಜಾರಿಗೆಬಂದಿದೆ. ಆದರೆ, ನಗರದಲ್ಲಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಮುಖಂಡರ ಫ್ಲೆಕ್ಸ್ ,ಬ್ಯಾನರ್ ನಗರದಲ್ಲಿ ಇನ್ನೂ ರಾರಾಜಿಸುತ್ತಿವೆ.

ಸಂಕ್ರಾಂತಿ ಹಿನ್ನೆಲೆಯಲ್ಲಿ ಶುಭಾಶಯ ಕೋರಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಫ್ಲೆಕ್ಸ್, ಬ್ಯಾನರ್ ಕಟ್ಟಲಾಗಿದೆ. ಶೇ 90ರಷ್ಟು ಫ್ಲೆಕ್ಸ್ , ಬ್ಯಾನರ್ ಗಳಿಗೆ ನಗರಸಭೆಗೆ ಶುಲ್ಕ ಪಾವತಿಸಿ ಅನುಮತಿಯನ್ನೇ ಪಡೆದಿಲ್ಲ.

ಆದರೆ, ನಗರದಲ್ಲಿ ಈಗ ಕಟ್ಟಲಾಗಿರುವ ಬ್ಯಾನರ್ ತೆರವಿಗೆ ಹತ್ತಾರು ಜನ ಪೌರ ಕಾರ್ಮಿಕರು ಕೆಲಸ ಮಾಡಬೇಕಾಗುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿ ಗೋಡೆಗಳಿಗೆ ಇತ್ತೀಚಿಗೆ ಹೆಚ್ಚಾಗಿ ಅಂಟಿಸಲಾಗುತ್ತಿರುವ ಡಿಜಿಟಲ್ ಪೋಸ್ಟರ್ ತೆರವುಗೊಳಿಸುವುದು ಸವಾಲಿನ ಕೆಲಸ ಎಂದು ಪೌರ ಕಾರ್ಮಿಕರು ಹೇಳುತ್ತಾರೆ.

ಗೋಡೆಗಳಿಗೆ ಅಂಟಿಸಲಾದ ಒಂದು ಪೋಸ್ಟರ್ ತೆರವಿಗೆ ಕನಿಷ್ಠ ಒಂದು ತಾಸು ಹಿಡಿಯುತ್ತದೆ. ಅಷ್ಟೇ ಅಲ್ಲ ಮತ್ತೆ ಗೋಡೆಗೆ ಅಲ್ಲಿ ಇರುವ ಬಣ್ಣವನ್ನೇ ಬಳಿಯಬೇಕಿದೆ. ಇದು ನಗರಸಭೆ ದೊಡ್ಡ ಮೊತ್ತದ ಖರ್ಚಿನ ಬಾಬ್ತಾಗಿ ಪರಿಣಮಿಸಿದೆ.

ಸಾಹಿತ್ಯ ಸಮ್ಮೇಳನ ಮುಂದೂಡಿಕೆ:

ತಾಲ್ಲೂಕಿನ ಬಾಶೆಟ್ಟಿಹಳ್ಳಿಯಲ್ಲಿ ಜನವರಿ 20 ಮತ್ತು 21 ರಂದು ನಡೆಯಬೇಕಿದ್ದ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣಾ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಹಾಗಾಗಿ ಸಮ್ಮೇಳನವನ್ನು ಫೆಬ್ರುವರಿ 25 ಮತ್ತು 26 ರಂದು ನಡೆಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಗೋವಿಂದರಾಜು ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.