ಕನಕಪುರ: ಹಳೆ ದ್ವೇಷದ ಹಿನ್ನೆಲೆ ದ್ವಿಚಕ್ರ ವಾಹನಕ್ಕೆ ಕಲ್ಲು ಬಂಡೆ ಸಿಡಿಸುವ ಸ್ಫೋಟಕ ಅಳವಡಿಸಿದ್ದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಂಡು, ತಮಗೆ ರಕ್ಷಣೆ ಕೊಡಿಸುವಂತೆ ವ್ಯಕ್ತಿಯೊಬ್ಬರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ತಾಲ್ಲೂಕಿನ ದೊಡ್ಡಮುದುವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಂಬದಹಳ್ಳಿ ಗ್ರಾಮದ ವಿಷಕಂಠ ಎಂಬುವರ ದ್ವಿಚಕ್ರ ವಾಹನಕ್ಕೆ ಅದೇ ಗ್ರಾಮದ ದೀಪು ಎಂಬುವರು ಸ್ಫೋಟಕ ಅಳವಡಿಸಿದ್ದರು ಎಂದು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿದು ಬಂದಿದೆ.

ದೀಪು ಮತ್ತು ವಿಷಕಂಠ ಇಬ್ಬರ ನಡುವೆ ಕೆಲ ದಿನಗಳ ಹಿಂದೆ ಜಗಳವಾಗಿತ್ತು. ಆ ಸಂದರ್ಭದಲ್ಲಿ ಗ್ರಾಮಸ್ಥರು ನ್ಯಾಯ ಪಂಚಾಯಿತಿ ಮಾಡಿ ದೀಪುಗೆ ಬುದ್ಧಿ ಹೇಳಿದ್ದರು. ಇದರಿಂದ ಅವಮಾನವಾಯಿತು ಎಂದು ಕುಪಿತಗೊಂಡಿದ್ದ ದೀಪು ಪ್ರತೀಕಾರ ತೀರಿಸಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದ.

ಇಂದು ವಿಷಕಂಠ ಅವರ ಬೈಕ್‌ನಲ್ಲಿ ಕಲ್ಲು ಸಿಡಿಸುವ ಸಿಡಿಮದ್ದು ಸ್ಫೋಟಕ ಪತ್ತೆಯಾಗಿದ್ದು, ವಿಷಕಂಠ ಅವರು ದೀಪು ಹಳೆ ದ್ವೇಷದ ಪ್ರತೀಕಾರವಾಗಿ ಈ ಕೃತ್ಯ ಎಸಗಿದ್ದಾನೆ. ಅವರ ವಿರುದ್ಧ ಕ್ರಮ ಕೈಗೊಂಡು ನನಗೆ ರಕ್ಷಣೆ ನೀಡಿ ಎಂದು ಒತ್ತಾಯಿಸಿ ದೂರು ದಾಖಲಿಸಿದ್ದಾರೆ.

ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.