ಹೊಸಕೋಟೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಪದವಿ ಪೂರ್ವ ಕಾಲೇಜು ನಡುವೆ ಇರುವ ಕ್ರೀಡಾಂಗಣದಲ್ಲಿ ನೂರಾರು ಚುಚ್ಚುಮದ್ದಿನ ಖಾಲಿ ಬಾಟಲಿ ಮತ್ತು ಸಿರಿಂಜ್ ಬಿದ್ದಿವೆ.

ಅಲರ್ಜಿ ಮತ್ತು ಚರ್ಮ ಕಾಯಿಲೆಗೆ ಬಳಸುವ ಚುಚ್ಚುಮದ್ದು ಇವಾಗಿದ್ದು ಬೇರೆಡೆಯಿಂದ ತಂದು ಇಲ್ಲಿ ಬಿಸಾಡಿರಬಹುದು ಎಂದು ಶಂಕಿಸಲಾಗಿದೆ.

ಎರಡೂ ಕಾಲೇಜುಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದು, ಕ್ರೀಡಾಂಗಣದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿವೆ. ಇಲ್ಲಿ ಪುಟ್ಟ ಮಕ್ಕಳು ಬರುತ್ತಾರೆ. ಈ ಅಂಗನವಾಡಿ ಕೇಂದ್ರಗಳ ಪಕ್ಕದಲ್ಲಿಯೇ ಚುಚ್ಚುಮದ್ದು, ಸಿರಿಂಜ್ ಜೊತೆ ಮದ್ಯದ ಬಾಟಲಿ ಬಿದ್ದಿವೆ.

ಪದವಿ ಪೂರ್ವ ಕಾಲೇಜಿ ಮತ್ತು ಕ್ರೀಡಾಂಗಣಕ್ಕೆ ತಡೆಗೋಡೆ ಇಲ್ಲದಿರುವುದು ಇದಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ರಾತ್ರಿ ಕಾಲೇಜು ಮೈದಾನದಲ್ಲೇ ಮದ್ಯಪಾನ ಮಾಡಿ ಬಾಟಲಿಗಳನ್ನು ಸ್ಥಳದಲ್ಲಿಯೇ ಬೀಸಾಡಿ ಹೋಗುತ್ತಾರೆ.

ಈ ಕಾನೂನು ಬಾಹಿರ ಚಟುವಟಿಕೆಗಳಿಗೆ ಕೂಡಲೇ ಶಿಕ್ಷಣ ಇಲಾಖೆ ಕ್ರಮ ವಹಿಸಬೇಕು. ಕಾಲೇಜಿಗೆ ತಡೆಗೋಡೆ ನಿರ್ಮಾಣ ಮಾಡಬೇಕು ಮತ್ತು ಅಲ್ಲಿಯವರೆಗೆ ಸಂಜೆ ವೇಳೆ ಇಲ್ಲಿ ಪೊಲೀಸರನ್ನು ನಿಯೋಜಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ನನ್ನ ಗಮನಕ್ಕೆ ಬಂದಿಲ್ಲ ಕಾಲೇಜು ತಡೆಗೋಡೆ ಕುಸಿದೆ. ಇದರಿಂದ ಅನೈತಿಕ ಚಟುವಟಿಕೆ ಹೆಚ್ಚಾಗಿರುವ ಕುರಿತು ದೂರು ಬಂದಿದೆ. ತಡೆಗೋಡೆ ನಿರ್ಮಾಣಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ. ಅನುಮತಿ ಬಂದ ತಕ್ಷಣ ತಡೆಗೋಡೆ ನಿರ್ಮಾಣ ಮಾಡಲಾವುದು. ಸಿರಂಜ್ ಮತ್ತು ಚುಚ್ಚುಮದ್ದು ಬಿದ್ದಿರುವುದು ನನ್ನ ಗಮನಕ್ಕೆ ಬಂದಿಲ್ಲ. ರಾಜು ಪ್ರಾಂಶುಪಾಲರು ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜು *** ಕ್ರೀಡಾಂಗಣದಲ್ಲಿ ಬಿದ್ದಿರುವ ಚುಚ್ಚುಮದ್ದು ನೆಗಡಿ ಚರ್ಮ ರೋಗ ಅಲರ್ಜಿಗೆ ಮಾತ್ರ ಬಳಸುವಂತದ್ದು. ಬೇರೆ ಯಾವುದೇ ವಿಚಾರಕ್ಕೆ ಇದನ್ನು ಬಳಸುವುದಿಲ್ಲ. ಮಾದಕ ವಸ್ತುಗಳೊಂದಿಗೆ ಬಳಸುವ ಕುರಿತು ನನಗೆ ತಿಳಿದಿಲ್ಲ. ವೈದ್ಯಕೀಯವಾಗಿ ಇದನ್ನು ಈ ಕಾಯಿಲೆಗಳಿಗಷ್ಟೇ ಬಳಸುತ್ತಾರೆ. ಡಾ.ರಾಘವೇಂದ್ರ ತಜ್ಞ ವೈದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.