ದೊಡ್ಡಬಳ್ಳಾಪುರ: ಕಾರ್ತಿಕ ಮಾಸದ ಕೊನೆ ಸೋಮವಾರ ನಗರದ ಕೊಂಗಾಡಿಯಪ್ಪ ಕಾಲೇಜು ರಸ್ತೆ ಬಯಲು ಬಸವಣ್ಣ ದೇವಾಲಯದ ಬಳಿ ಕಡಲೇಕಾಯಿ ಪರಿಷೆ ನಡೆಯಿತು. ಮಂಜುನಾಥಸ್ವಾಮಿ, ಬಸವಣ್ಣ ಹಾಗೂ ಗಣಪತಿ ದೇವತಾ ಮೂರ್ತಿಗಳಿಗೆ ವಿಶೇಷ ಕಡಲೇ ಕಾಯಿ ಅಲಂಕಾರ ಮಾಡಲಾಗಿತ್ತು.

ಬಯಲು ಬಸವಣ್ಣ ದೇವಾಲಯದ ಸೇವಾ ಟ್ರಸ್ಟ್ ಮತ್ತು ಕರ್ನಾಟಕ ಕನ್ನಡ ಅಭಿಮಾನಿಗಳ ಸಂಘದಿಂದ 68ನೇ ಕನ್ನಡ ರಾಜ್ಯೋತ್ಸವ ಮತ್ತು ಸಂಘದ 29ನೇ ವಾರ್ಷಿಕೋತ್ಸವ ಆಚರಿಸಲಾಯಿತು.

ತಾಲ್ಲೂಕಿನ ಶಿರವಾರ, ಅಂತರಹಳ್ಳಿ ಗ್ರಾಮದ ತೋಪಿನ ಬಸವೇಶ್ವರಸ್ವಾಮಿ, ಎಸ್.ಎಂ.ಗೊಲ್ಲಹಳ್ಳಿ ಬಯಲು ಬಸವಣ್ಣ ದೇವಾಲಯ, ದರ್ಗಾಜೋಗಹಳ್ಳಿಯಲ್ಲಿ ಸಿದ್ದೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.

ತಾಲ್ಲೂಕಿನ ತೂಬಗೆರೆ ಹೋಬಳಿ ಕೊಂಡಸಂದ್ರ ಕಾಶಿ ವಿಶ್ವನಾಥ ದೇಗುಲದಲ್ಲಿ ಲಕ್ಷ ದೀಪೋತ್ಸವ, ಸಹಸ್ರ ಬಿಲ್ವಾರ್ಚನೆ ನಡೆಯಿತು.

ನಗರದ ಸ್ವಯಂಬುಕೇಶ್ವರ (ಸೋಮೇಶ್ವರ) ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಸಂಜೆ ಲಕ್ಷ ದೀಪೋತ್ಸವ ನಡೆಯಿತು. ಬಸವೇಶ್ವರನಗರ, ಕುವೆಂಪುನಗರ ಭಕ್ತರಿಂದ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು.

ತಾಲ್ಲೂಕಿನ ಮಧುರೆ ಹೋಬಳಿ ಮಾರಸಂದ್ರ ಈರಮಾಸ್ತಮ್ಮ ದೇವಾಲಯದಲ್ಲಿ 13ನೇ ವರ್ಷದ ಲಕ್ಷ ದೀಪೋತ್ಸವ ಹಾಗೂ ವಿಶೇಷ ಅಲಂಕಾರ ಮಾಡಲಾಗಿತ್ತು.

ನಗರೇಶ್ವರಸ್ವಾಮಿ, ಸಪ್ತಮಾತೃಕ ಮಾರಿಯಮ್ಮ, ಕಾಶಿವಿಶ್ವೇಶ್ವರ, ರಾಮಲಿಂಗಚಂದ್ರ ಚೌಡೇಶ್ವರಿ ದೇವಾಲಯ, ನಗರದ ಮಲೈಮಾದೇಶ್ವರಸ್ವಾಮಿ, ಕಂಠೇಶ್ವರಸ್ವಾಮಿ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಿತು.

ತಾಲ್ಲೂಕಿಗೆ ಸಮೀಪದ ಕಣಿವೆಪುರ ಕಣಿವೆ ಬಸವಣ್ಣನಿಗೆ ಕಾರ್ತಿಕ ಕಡೆ ಸೋಮವಾರ ಅಂಗವಾಗಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಾಶೆಟ್ಟಿಹಳ್ಳಿ ಬಸವಣ್ಣ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.