ಆನೇಕಲ್: ಮಳೆ ಗಾಳಿಯಿಂದ ಹಾನಿಗೊಳಗಾಗಿದ್ದ ವಿದ್ಯುತ್ ಲೈನ್ ಅನ್ನು ತಾಲ್ಲೂಕಿನ ಜಿಗಣಿ ಸಮೀಪದ ಬೊಮ್ಮಂಡಹಳ್ಳಿಯಲ್ಲಿ ದುರಸ್ತಿ ಪಡಿಸುವಾಗ ಆಕಸ್ಮಿಕ ವಿದ್ಯುತ್ ಸ್ಪರ್ಶವಾಗಿ ಲೈನ್ ಮ್ಯಾನ್ ವಿದ್ಯುತ್ ಕಂಬದಲ್ಲಿಯೇ ಸುಟ್ಟು ಕರಕಲಾಗಿ ಮೃತ ಪಟ್ಟಿದ್ದಾರೆ.

ಮೃತರನ್ನು ಕಡೂರಿನ ಮಹಮದ್ ಜುನೇದ್ (35) ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯಾಹ್ನ ಸುರಿದ ಭಾರಿ ಮಳೆಯಿಂದಾಗಿ ಬೊಮ್ಮಂಡಹಳ್ಳಿ ಸಮೀಪ ಸಾಯಿ ಪ್ರಶಾಂತ್ ಲೇಔಟ್ ಬಳಿ ವಿದ್ಯುತ್ ಕಂಬದಲ್ಲಿ ತಂತಿ ತುಂಡಾಗಿ ಕೆಳಗೆ ಬಿದ್ದಿತ್ತು. ಇದನ್ನು ಸರಿಪಡಿಸಲು ಮಹಮದ್ ಜುನೇದ್ ವಿದ್ಯುತ್ ಕಂಬವನ್ನು ಏರಿದ್ದರು. ಅಧಿಕಾರಿಗಳು ಲೈನ್ ಚಾರ್ಜ್ ಮಾಡಿದ್ದರಿಂದ ವಿದ್ಯುತ್ ಪ್ರವಹಿಸಿ ಕಂಬದ ಮೇಲೆ ಬೆಂಕಿ ಹತ್ತಿಕೊಂಡು ಸುಟ್ಟು ಕರಕಲಾಗಿದ್ದಾರೆ ಎಂದು ಹೇಳಲಾಗಿದೆ.

ಜಿಗಣಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.