ಹೊಸಕೋಟೆ: 18 ವರ್ಷಗಳ ಹಿಂದೆ ತಾಲ್ಲೂಕಿನ ನಂದಗುಡಿ ವ್ಯಾಪ್ತಿಯನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಮಾಡಿದ್ದ ಸರ್ಕಾರದ ಧೋರಣೆಯನ್ನು ರೈತರು ವಿರೋಧಿಸಿದ್ದರು. ಈಗ ಮತ್ತೆ ಟೌನ್ಷಿಪ್ ಹೆಸರಿನಲ್ಲಿ ಭೂಸ್ವಾಧೀನಕ್ಕೆ ಮುಂದಾಗಿರುವ ಸರ್ಕಾರದ ಕ್ರಮದಿಂದ ರೈತರು ಬಾಣಲೆಯಿಂದ ಬೆಂಕಿಗೆ ಬೀಳುವಂತಾಗಿದೆ.

ಕಮರಿದ ರೈತರ ಕನಸು: ಕೆಲವು ತಿಂಗಳು ಹಿಂದೆ ಹೊಸಕೋಟೆ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಹಲವು ಕಾಮಗಾರಿಗಳ ಉದ್ಘಾಟಕಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಂದಗುಡಿ ಮತ್ತು ಸೂಲಿಬೆಲೆ ಹೋಬಳಿಗಳಿಗೂ ನೀರು ಹರಿಸಲು ಯೋಜನೆ ಕೈಗೆತ್ತಿಕೊಳ್ಳುವ ಭರವಸೆ ನೀಡಿದ್ದರು.

ಈ ಭರವಸೆಯಿಂದ ಅಂತರ್ಜಲ ಮತ್ತು ಕೆರೆಗಳಲ್ಲಿ ನೀರು ತುಂಬಿ ಕೃಷಿ ಮಾಡಲು ಮತ್ತಷ್ಟು ಅವಕಾಶ ಸಿಗುತ್ತದೆ ಎಂಬ ಆಶಾ ಭಾವನೆಯಲ್ಲಿದ್ದ ರೈತರಿಗೆ ಟೌನ್ಷಿಪ್ ಬರಸಿಡಿಲಿನಂತೆ ಎರಗಿದೆ. ಇದನ್ನು ವಿರೋಧಿಸಿ ಒಕ್ಕೂರಲಿನ ಹೋರಾಟಕ್ಕೆ ಮುಂದಾಗಿದ್ದಾರೆ.

ತಾಲ್ಲೂಕಿನಲ್ಲಿ ದೊಡ್ಡ ಮಟ್ಟದಲ್ಲಿ ತೋಟಗಾರಿಕೆ ಬೆಳೆ ಇದೆ. ಮಾವು, ಗೋಡಂಬಿ, ದ್ರಾಕ್ಷಿ, ದಾಳಿಂಬೆ, ಬೀನ್ಸ್, ಸೀಬೆ ಸೇರಿದಂತೆ ವಿವಿಧ ಬಗೆ ಹೂವು ಬೆಳೆಗೆ ಪ್ರಮುಖವಾಗಿದೆ. ಪ್ರಗತಿಪರ ರೈತರು, ಸಮಗ್ರ ಬೇಸಾಯಗಾರರು, ಸಾವಯವ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗದಲ್ಲಿ ನೆಲೆಸಿದ್ದಾರೆ.

ಟೌನ್ಷಿಪ್ಗಾಗಿ ಭೂಮಿ ವಶಪಡಿಸಿಕೊಳ್ಳಲು ನಂದಗುಡಿ ಮತ್ತು ಸೂಲಿಬೆಲೆ ಹೋಬಳಿಯನ್ನು ಗುರುತಿಸಲಾಗಿದೆ. ದೊಡ್ಡ ಪ್ರಮಾಣದ ಜಮೀನು ನಂದಗುಡಿ ಹೋಬಳಿ ಕೇಂದ್ರಕ್ಕೆ ಸೇರಿದ್ದಾಗಿದೆ. ಒಟ್ಟು 36 ಹಳ್ಳಿಗಳಲ್ಲಿ 4-5 ಹಳ್ಳಿಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲ ಹಳ್ಳಿಗಳು ನಂದಗುಡಿ ಹೋಬಳಿ ವ್ಯಾಪ್ತಿಯಲ್ಲಿ ಬರುತ್ತವೆ. ಇಲ್ಲಿನ ಒಟ್ಟು 18,500 ಎಕರೆ ಜಮೀನು ಬಹುತೇಕ ಕೃಷಿ ಜಮೀನು ಆಗಿದೆ.

ರೈತರ ವಾದ: ನಂದಗುಡಿ ಹೋಬಳಿಯಲ್ಲಿ ನಿರ್ಮಾಣ ಮಾಡುತ್ತಿರುವ ಟೌನ್ಷಿಪ್ ಅತ್ಯಂತ ಅವೈಜ್ಞಾನಿಕವಾಗಿದೆ. ಟೌನ್ಷಿಪ್ ನಿರ್ಮಾಣದ ಅನುಕೂಲವೆಂದರೆ ಉದ್ಯೋಗಾವಕಾಶ ಸಿಗಲಿದೆ. ಆದರೆ, ನಂದಗುಡಿ ಸುತ್ತಮುತ್ತಲೂ 15-20 ಕಿಲೋಮೀಟರ್ ಅಂತರದಲ್ಲಿ ಹಲವು ಕೈಗಾರಿಕಾ ವಲಯಗಳಿವೆ. ಕೈವಾರ, ಪಿಲ್ಲಗುಂಪೆ, ವೇಮಗಲ್ ಅತ್ಯಂತ ಸಮೀಪ ಇರುವ ಕೈಗಾರಿಕಾ ವಲಯಗಳಾಗಿವೆ. ಇಂತಹ ಸಂದರ್ಭದಲ್ಲಿ ಈ ಭಾಗದ ರೈತರು ದೊಡ್ಡ ಮಟ್ಟದಲ್ಲಿ ವಿರೋಧಿಸುತ್ತಿದ್ದಾರೆ. ಆದರೂ, ಟೌನ್ಷಿಪ್ ಅನುಷ್ಠಾನ ಹಿಂದಿನ ಉದ್ದೇಶವೇನು ಎಂಬುದು ಯಕ್ಷ ಪ್ರಶ್ನೆ ಎನ್ನುತ್ತಾರೆ ಪ್ರತಿಭಟನಾಕಾರರು.

ಟೌನ್ಷಿಪ್ ಹೊರತಾಗಿಯೂ ಕೆಲವೊಂದು ಬೃಹತ್ ಕಂಪನಿಗಳು ಇಲ್ಲಿಗೆ ಆಗಮಿಸಿವೆ. ಈ ಸಮಸ್ಯೆ ಕುರಿತು ಅಧಿಕಾರಿಗಳು ಗಮನ ಹರಿಸಬೇಕಿದೆ.
ಯು.ಹರೀಶ್ ಯುವ ರೈತ ಹಳೆಊರು

ಇಂದು ಪ್ರತಿಭಟನೆ

ನಂದಗುಡಿ ಟೌನ್ಷಿಪ್ ವಿರೋಧಿಸಿ ಇಂದು ನ.5 (ಮಂಗಳವಾರ)ರಂದು ನಂದಗುಡಿ ಗ್ರಾಮದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಳಂದ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪ್ರಧಾನ ಕಾರ್ಯದರ್ಶಿ ಪೃಥ್ವಿರೆಡ್ಡಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸಂಯುಕ್ತ ಕಿಸಾನ್ ಮೋರ್ಚಾದ ಸಂಯೋಜಕ ಡಾ.ಸುನಿಲಂ ಮಾಜಿ ಸಂಸದ ಎಲ್.ಹನುಮಂತಯ್ಯ ಸಾಹಿತಿಗಳಾದ ಎಸ್.ಜಿ.ಸಿದ್ದರಾಮಯ್ಯ ಸಾಮಾಜಿಕ ಹೋರಾಟಗಾರ ಆಲಿಬಾಬಾ ಸೇರಿದಂತೆ ನಂದಗುಡಿ ಹೋಬಳಿಯ ಎಲ್ಲ ಗ್ರಾಮಗಳು ರೈತರು ಮುಖಂಡರು ಸಾರ್ವಜನಿಕರು ಭಾಗವಹಿಸಲಿದ್ದಾರೆ. ಪರಿಸರದಿಂದ ಕಲಿಯದ ಪಾಠ ಹಚ್ಚ ಹಸಿರಿನ ವಾತಾವರಣದಲ್ಲಿ ಇರುವ ನಂದಗುಡಿ ಪರಿಸರ ಮಾಲಿನ್ಯ ತಡೆಯುವಲ್ಲಿ ದೊಡ್ಡ ಮಟ್ಟದ ಸಹಕಾರ ನೀಡುತ್ತಿದೆ. ಪರಿಸರ ರಕ್ಷಿಸಬೇಕಿರುವ ಸರ್ಕಾರವೇ ಅದಕ್ಕಿರುವ ಅವಕಾಶ ನಿರ್ನಾಮ ಮಾಡಲು ಹೊರಟಿದೆ. ಇತ್ತೀಚೆಗೆ ದೆಹಲಿ ಸ್ಥಿತಿ ಏನಾಗಿದೆ ಎಂಬುದು ತಾಜಾ ಉದಾಹರಣೆ. ಈ ಸ್ಥಿತಿಗೆ ಬೆಂಗಳೂರಿಗೂ ಬಾರದಿರುವಂತೆ ನೋಡಿಕೊಳ್ಳಬೇಕಿದೆ. ಇತ್ತೀಚಿನ ವರದಿಯಂತೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರ ಸೂಸುವ ಮಾಲಿನ್ಯವನ್ನು ಸಮತೋಲನಗೊಳಿಸುತ್ತಿದ್ದ ವಾತಾವರಣ ಈಗ ಆ ಶಕ್ತಿಯನ್ನು ಕಳೆದುಕೊಂಡಿದೆ. ಮುಂದಿನ ಪೀಳಿಗೆ ಭವಿಷ್ಯದ ದೃಷ್ಟಿಯಲ್ಲಿಟ್ಟುಕೊಂಡು ಟೌನ್ಷಿಪ್ ರದ್ದುಗೊಳಿಸಬೇಕು. ಮೋಹನ್ ಬಾಬು ರೈತ ಮುಖಂಡ ಹಿಂಡಿಗನಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.