ಆನೇಕಲ್ : ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಸೋಮವಾರ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಉದ್ಯಾನದ ನೂತನ ಲೋಗೊ ಬಿಡುಗಡೆ ಮಾಡಲಾಯಿತು. ಲೋಗೊ ಇರುವ ಟಿ–ಶರ್ಟ್, ಗ್ಲಾಸ್ ಬಿಡುಗಡೆ ಮಾಡಲಾಯಿತು.

ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ.ಸೂರ್ಯಸೇನ್ ಕಾರ್ಯಕ್ರಮ ಉದ್ಘಾಟಿಸಿದರು. ವನ್ಯಜೀವಿ ಆರ್ಟ್ ಗ್ಯಾಲರಿಯನ್ನು ಇದೇ ವೇಳೆ ಲೋಕಾರ್ಪಣೆ ಮಾಡಲಾಯಿತು. ವನ್ಯಜೀವಿಗಳ ಮಲದಿಂದ ತಯಾರಿಸಿದ ಗೊಬ್ಬರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ವನ್ಯಜೀವಿ ಸಪ್ತಾಹದ ಅಂಗವಾಗಿ ಸಿಬ್ಬಂದಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಸ್ವಯಂ ಸೇವಕರು, ಪೋಷಕರು ಮಕ್ಕಳ ಜೊತೆ ಪ್ರಕೃತಿಯ ನಡಿಗೆ ಬೆಳಗ್ಗೆ ನಡೆಯಿತು.

ಸಂಗೀತ ಸಂಯೋಜಕ ವಾಸು ದಿಕ್ಷೀತ್ ಅವರಿಂದ ಸಂಗೀತ ಕಾರ್ಯಕ್ರಮ, ಕಲಾವಿದ ಜಾನ್ ದೇವರಾಜು ಅವರೊಂದಿಗೆ ಉದ್ಯಾನದ ಸಿಬ್ಬಂದಿಯ ಮಕ್ಕಳು ವಿವಿಧ ವೇಷಭೂಷಣಗಳೊಂದಿಗೆ ಆಕರ್ಷಕ ನೃತ್ಯ ಪ್ರದರ್ಶಿಸಿದರು.

ಅಕ್ಟೋಬರ್ 15ರಂದು ಝೂ ಕ್ಲಬ್‌ಗೆ ಚಾಲನೆ ನೀಡಲಾಗುವುದು. 12-18ವರ್ಷದೊಳಗಿನವರಿಗಾಗಿ ಪ್ರತಿ ಭಾನುವಾರ ವಿವಿಧ ಕಾರ್ಯಕ್ರಮ ರೂಪಿಸಲಾಗಿದೆ. 15 ವಾರ ಕಾರ್ಯಕ್ರಮ ನಡೆಸಲಾಗುವುದು. ಪರಿಸರ ಜಾಗೃತಿ ಮತ್ತು ವನ್ಯಜೀವಿಗಳ ಬಗ್ಗೆ ಮಾಹಿತಿ ಪಡೆಯಲು ಕಾರ್ಯಕ್ರಮ ವರದಾನವಾಗಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ.ಸೂರ್ಯಸೇನ್ ಹೇಳಿದರು.

ಪರಿಸರ ಜಾಗೃತಿ ಮೂಡಿಸಿ ಪರಿಸರ ಉಳಿಸಲು ಬನ್ನೇರುಘಟ್ಟ ಜೈವಿಕ ಉದ್ಯಾನ ಹಲವಾರು ಜಾಗೃತಿ ಕಾರ್ಯಕ್ರಮ ರೂಪಿಸಿದೆ. ಈ ವರ್ಷದ ಸಪ್ತಾಹದಲ್ಲಿ ‘ವನ್ಯಜೀವಿ ಸಂರಕ್ಷಣೆಗಾಗಿ ಸಹಭಾಗಿತ್ವ’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬನ್ನೇರುಘಟ್ಟದಲ್ಲಿ ಝೂ ಕ್ಲಬ್ ಸ್ಥಾಪಿಸಿ ಕಾರ್ಯಾಗಾರ, ಕ್ಷೇತ್ರ ಭೇಟಿ, ಗುಂಪು ಚಟುವಟಿಕೆ ರೂಪಿಸಿ ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.

ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳಾದ ಕೆ.ವಿನಯ್‌ಕುಮಾರ್, ವನ್ಯಜೀವಿ ಪೋಸ್ಟಲ್ ಸೇವೆ ನೀಡಿದ ರಂಜಿತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.