ಹೊಸಕೋಟೆ: ‘ವರನಟ ಡಾ.ರಾಜ್‌ಕುಮಾರ್ ಜನ್ಮ ದಿನದ ಆಚರಣೆಯು ನಿತ್ಯೋತ್ಸವವಾಗಬೇಕಿದೆ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನಟರಾಜ್ ಎಂ.ಎನ್.ಆರ್. ಆಶಿಸಿದರು.

ನಗರದ ರೂಪಾ ಹೊಲಿಗೆ ತರಬೇತಿ ಕೇಂದ್ರದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಾಜ್‌ಕುಮಾರ್ ಅವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.

ಕನ್ನಡ ಚಲನ ಚಿತ್ರರಂಗಕ್ಕೆ ತಮ್ಮ ಜೀವನ ಮುಡುಪಾಗಿಟ್ಟಿದ್ದ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸ ಬೇಕಿದೆ ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಹೊಸಕೋಟೆ ತಾಲ್ಲೂಕು ಘಟಕದ ಅಧ್ಯಕ್ಷ ಮುನಿರಾಜು ಮಾತನಾಡಿ, ರಾಜ್‌ಕುಮಾರ್ ಅವರು ರಾಜಕೀಯ ಪ್ರವೇಶ ಮಾಡದೆ ಕನ್ನಡ ಚಿತ್ರರಂಗಕ್ಕಾಗಿ ತಮ್ಮ ಜೀವನ ಮೀಸಲಿಟ್ಟಿದ್ದ ಮಹಾನ್ ನಟ. ಅವರ ಸರಳತೆ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಹೇಳಿದರು.

ಕಸಾಪ ಮಾಜಿ ಅಧ್ಯಕ್ಷ ಟಿ. ನಾಗರಾಜ್, ತಾಲ್ಲೂಕು ಗೌರವ ಕಾರ್ಯದರ್ಶಿ ಬಚ್ಚೇಗೌಡ, ರೂಪಾ ಹೊಲಿಗೆ ಕೇಂದ್ರದ ಸಂಸ್ಥಾಪಕಿ ರೂಪಾ, ಮಂಜುನಾಥ್ ಕಲಾ ಬಳಗದ ಅಧ್ಯಕ್ಷ ರಾಜಣ್ಣ, ಮುಖಂಡರಾದ ಜೆ. ಕೃಷ್ಣಪ್ಪ, ವಾಸುದೇವ, ಮುನಿನಾರಾಯಣಪ್ಪ, ಮುರಳಿ, ಟೆಂಪೊ ವಿಜಯ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.