ಆನೇಕಲ್: ಚೆರಾಸ್ ಚಾಕೊಲೇಟ್ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರು ಆರೋಪಿಗಳನ್ನು ತಾಲ್ಲೂಕಿನ ಜಿಗಣಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಂಧಿತರ ಬಳಿಯಿದ್ದ ಸುಮಾರು ₹10 ಲಕ್ಷ ಮೌಲ್ಯದ 60 ಕೆ.ಜಿಯಷ್ಟು ಚೆರಾಸ್ ಚಾಕೊಲೇಟ್ ಮತ್ತು ಅರ್ಧ ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಗಣಿ ಕೆರೆ ಬಳಿ ಮೂರು ಮಂದಿ ಸರಕು ಸಾಗಣೆ ವಾಹನವೊಂದರಲ್ಲಿ ಗಾಂಜಾ ಮತ್ತು ಚೆರಾಸ್ ಚಾಕೊಲೇಟ್ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಜಿಗಣಿ ಪೊಲೀಸರು ಇನ್ಸ್ಪೆಕ್ಟರ್ ಮಂಜುನಾಥ್ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

ಈ ವೇಳೆ ಮೂರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಸರಕು ಸಾಗಣೆ ವಾಹನ ಮತ್ತು ಅರ್ಧ ಕೆ.ಜಿ ಗಾಂಜಾ, ಚೆರಾಸ್ ಚಾಕೊಲೇಟ್ಗಳನ್ನು ವಶಕ್ಕೆ ಪಡೆದು ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಮೂವರು ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಮತ್ತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳನ್ನು ಉತ್ತರಪ್ರದೇಶ ಮೂಲದ ಜೀತು ಸಿಂಗ್, ಆನಂದ್ ಕುಮಾರ್ ಸಿಂಗ್ ಮತ್ತು ಅಭಯ್ ಗೋಸ್ವಾಮಿ, ಸೋಮುಸಿಂಗ್, ಸೂರಜ್ ಸಿಂಗ್, ಅಂಕುರ್ಸಿಂಗ್ ಎಂದು ಗುರುತಿಸಲಾಗಿದೆ.

ಆರೋಪಿಗಳು ವಾಸವಿದ್ದ ರಾಜಾಜಿನಗರ ಮನೆಗಳಲ್ಲಿ ಪರಿಶೀಲಿಸಿದಾಗ 60 ಕೆ.ಜಿ ತೂಕದ 12 ಸಾವಿರ ಚೆರಾಸ್ ಚಾಕೊಲೇಟ್ಗಳು ಪತ್ತೆಯಾಗಿವೆ. ಈ ಆರೋಪಿಗಳು ಉತ್ತರಪ್ರದೇಶದ ಖಾನ್ಪುರದ ಮಹಾಲಕ್ಷ್ಮಿ ಫಾರ್ಮಾ ಕಂಪನಿಯ ಮೊನು ಎಂಬುವವರಿಂದ ಮಹಾಕಾಳ್ ಹೆಸರಿನ ಚಾಕೊಲೇಟ್ಗಳನ್ನು ರೈಲಿನ ಮೂಲಕ ತರಿಸಿಕೊಳ್ಳುತ್ತಿದ್ದಾರೆ. ಆ ಬಳಿಕ ರೈಲು ನಿಲ್ದಾಣದಲ್ಲಿ ರೈಲ್ವೆ ಕೂಲಿ ಕಾರ್ಮಿಕರ ಮೂಲಕ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಅಂತರ್ರಾಜ್ಯ ವಿದ್ಯಾರ್ಥಿಗಳಿಗೆ ಚೆರಾಸ್ ಚಾಕೊಲೇಟ್ಗಳನ್ನು ಮಾರಾಟ ಮಾಡುತ್ತಿದ್ದದ್ದು ತನಿಖೆಯಿಂದ ತಿಳಿದುಬಂದಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರೋಪಿಗಳಲ್ಲಿ ನಾಲ್ಕು ಮಂದಿ ಕೊರಿಯರ್ನಲ್ಲಿ ಕೆಲಸ ಮಾಡುತ್ತಿದ್ದರು. ಸೂರಜ್ಸಿಂಗ್ ಮತ್ತು ಅಂಕುರ್ ಸಿಂಗ್ ಪಾನ್ಪಾರಗ್ ಡಿಲವರಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.