ದೇವನಹಳ್ಳಿ: ಮಲ ಹೊರುವುದು ಅನಾಗರಿಕ ಪದ್ಧತಿ. ಈ ದಿನದಿಂದಲೇ ಅಂತ್ಯವಾಗಲಿ ಎಂದು ಜಿ.ಪಂ ಸಿಇಒ ಎಂ.ಆರ್.ರವಿಕುಮಾರ್ ತಿಳಿಸಿದರು.

ಇಲ್ಲಿನ ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಜೀತ ವಿಮುಕ್ತರ ಮತ್ತು ಸಫಾಯಿ ಕರ್ಮಚಾರಿಗಳ ಪುನರ್ವಸತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಜೀತ ವಿಮುಕ್ತರ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದಿಂದ ಸಾಕಷ್ಟು ಯೋಜನೆಗಳಿದ್ದು ಅದರ ಸದುಪಯೋಗಪಡಿಸಿಕೊಳ್ಳಬೇಕು. ನೆರೇಗಾ ಮತ್ತು ವಸತಿ ಯೋಜನೆಗಳಲ್ಲಿ ಮೊದಲ ಪ್ರಾಮುಖ್ಯತೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಲ ಹೊರುವ ಪದ್ಧತಿ ನಿಷೇಧಿಸಲಾಗಿದೆ. ಗ್ರಾಮೀಣ ಮಲಗುಂಡಿ ಸ್ವಚ್ಛಗೊಳಿಸಲು ಯಂತ್ರೋಪಕರಣಗಳು ಲಭ್ಯವಿದೆ. ಸಾರ್ವಜನಿಕರು ಸ್ಥಳೀಯ ಸಂಸ್ಥೆಗಳನ್ನು ಸಂಪರ್ಕಿಸಿ ಯಂತ್ರಗಳ ಮೂಲಕ ಮಲ
ಗುಂಡಿ ಸ್ವಚ್ಛಗೊಳಿಸಿಕೊಳ್ಳಬೇಕು ಎಂದರು.

ಎಸ್ಸಿ, ಎಸ್ಟಿ ಇಲಾಖೆಗಳು ಒಳ
ಗೊಂಡಂತೆ ಎಲ್ಲ ವಿವಿಧ ಇಲಾಖೆಗಳು ಜೀತ ವಿಮುಕ್ತರ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಬರುವ ಎಲ್ಲ ಸೌಲಭ್ಯ ಕಡ್ಡಾಯವಾಗಿ ನೀಡಬೇಕು. ಅರ್ಜಿ ಸಲ್ಲಿಸಿದವರಿಗೆ ಮೊದಲ ಪ್ರಾಮುಖ್ಯತೆಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ನೀಡಬೇಕು. ಸರ್ಕಾರ ಸಫಾಯಿ ಕರ್ಮಚಾರಿ ನಿಗಮ ಸ್ಥಾಪಿಸಿದ್ದು, ಇದರಲ್ಲಿರುವ ಸಾಲ ಸೌಲಭ್ಯ ಪಡೆದು ಸ್ವಾವಲಂಬನೆ ಜೀವನ ರೂಪಿಸಿಕೊಳ್ಳಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಗಂಗಕಲ್ಯಾಣ ಯೋಜನೆ, ಸ್ವಯಂ ಉದ್ಯೋಗ, ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆ, ಬೀದಿ ವ್ಯಾಪಾರ ಯೋಜನೆ, ಭೂಒಡೆತನ ಯೋಜನೆ ಸೇರಿದಂತೆ ಅನೇಕ ಯೋಜನೆ
ಗಳು ಇವೆ ಎಂದು ತಿಳಿಸಿದರು. ಮಲಹೊರುವ ಕೆಲಸ ಮಾಡಿಸಿದವರಿಗೆ ₹50 ಸಾವಿರ ದಂಡ, 1ವರ್ಷ ಜೈಲುಶಿಕ್ಷೆ ಹಾಗೂ ಎರಡನೇ ಬಾರಿ ತಪ್ಪು ಪುನರಾರ್ವತೆ ಮಾಡಿದರೆ ₹1ಲಕ್ಷ ದಂಡ, 2ವರ್ಷ ಜೈಲು, ಮೂರನೇ ಬಾರಿ ತಪ್ಪು ಮಾಡಿದರೆ ₹5ಲಕ್ಷ 5 ವರ್ಷ ಶಿಕ್ಷೆಗೆ ಗುರಿಯಾಗಲಿದೆ. ಸಫಾಯಿ ಕರ್ಮಚಾರಿಗಳು ಮನೆ ಕಟ್ಟಿಕೊಳ್ಳಲು ಗ್ರಾಮೀಣ ಭಾಗದಲ್ಲಿ ಮೂರುವರೆ ಲಕ್ಷ ಹಾಗೂ ನಗರ ಪ್ರದೇಶದಲ್ಲಿ ಐದೂವರೆ ಲಕ್ಷ ಅನುದಾನ ನೀಡಲಾಗುತ್ತದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಾಯ ಹಾಗೂ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ವಿವರಿಸಿದರು.

ಜಿಲ್ಲಾ ಲೀಡ್ಬ್ಯಾಂಕ್ ವ್ಯವಸ್ಥಾಪಕ ಮಧುಸೂಧನ್, ಅಧಿಕಾರಿಗಳಾದ ವಸಂತ್ಕುಮಾರ್, ಟಿ.ಮುರಡಯ್ಯ, ಶ್ರೀನಾಥ್ ಗೌಡ, ಲಕ್ಷ್ಮೀನಾರಾಯಣಸ್ವಾಮಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನರಸಿಂಹಮೂರ್ತಿ, ದೇವರಾಜು ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ಸುಜಾತಾ, ಪುರಸಭೆ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ಸಫಾಯಿ ಕರ್ಮಚಾರಿ ಸಮಿತಿ ಜಿಲ್ಲಾ ಸಂಚಾಲಕ ಮ್ಯಾಥ್ಯೂ ಮುನಿಯಪ್ಪ, ಮೀನುಗಾರಿಕೆ ಉಪನಿರ್ದೇಶಕ ನಾಗರಾಜ್, ಬೆಸ್ಕಾಂ ಎಂಜಿನಿಯರ್ ಶ್ರೀನಿವಾಸ್, ವಾಲ್ಮಿಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಮೇಶ್ ಎಲೆದಹಳ್ಳಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.