ನಡೆದುಕೊಂಡು ಬರುವವರೇ ಕಳ್ಳರ ಗುರಿ
ಆಂಧ್ರಪ್ರದೇಶದ ಅನಂತರಪುರ ಹಿಂದೂಪುರ ಭಾಗದಿಂದಲು ರೈಲಿನಲ್ಲಿ ಬಾಶೆಟ್ಟಿಹಳ್ಳಿಯಲ್ಲಿನ ಗಾರ್ಮೆಂಟ್ಸ್‌ಗಳಿಗೆ ಮಹಿಳಾ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಿಂದ ಕಾರ್ಮಿಕರು ಬಸ್‌ಗಳಿಗೆ ಬರಲು ಸುಮಾರು ಎರಡು ಕಿ.ಮೀ ದೂರ ನಡೆದುಕೊಂಡೇ ಮುಖ್ಯರಸ್ತೆಗೆ ಬರಬೇಕಿದೆ. ಹೀಗೆ ನಡೆದುಕೊಂಡು ಬರುವವರೇ ಕಳ್ಳರ ಗುರಿ ಆಗಿರುತ್ತದೆ. ನಡೆದುಕೊಂಡು ಬರುವವರನ್ನು ಅಡ್ಡ ಹಾಕಿ ದೋಚುತ್ತಾರೆ. ಕೈಗಾರಿಕಾ ಪ್ರದೇಶದಲ್ಲಿನ ಮುಖ್ಯ ರಸ್ತೆಗಳ ಮಧ್ಯಭಾಗದಲ್ಲಿ ಹಾಗೂ ರಸ್ತೆ ಬದಿಯಲ್ಲಿ ಬೆಳೆಸಲಾಗಿರುವ ವಿವಿಧ ರೀತಿಯ ಹೂವಿನ ಗಡಿಗಳು ಪೊದೆಯಂತೆ ಬೆಳೆದು ನಿಂತಿದ್ದರು ಕೆಐಡಿಬಿ ವತಿಯಿಂದ ಸ್ವಚ್ಛಗೊಳಿಸಿಲ್ಲ. ರಾತ್ರಿ ವೇಳೆ ರಸ್ತೆ ಬದಿಯಲ್ಲಿ ವಿದ್ಯುತ್ ದೀಪಗಳ ಸೌಲಭ್ಯವು ಸರಿಯಾಗಿ ಇಲ್ಲದಾಗಿದೆ. ಹೀಗಾಗಿಯೇ ಕೈಗಾರಿಕಾ ಪ್ರದೇಶದಲ್ಲಿ ಅಪರಾಧ ಪ್ರಕರಗಳು ಹೆಚ್ಚಾಗಲು ಕಾರಣವಾಗಿವೆ ಎಂದು ವ್ಯಾಪಾರಿ ಮುನಿರಾಜು ತಿಳಿಸಿದರು. ಬಸ್ ಸೌಲಭ್ಯಕ್ಕೆ ದಶಕದ ಮನವಿ ಬೆಳಗಿನ ಹಾಗೂ ಸಂಜೆ ವೇಳೆಯಲ್ಲಿ ಮುಖ್ಯ ರಸ್ತೆಯಿಂದ ಕೈಗಾರಿಕ ಪ್ರದೇಶಕ್ಕೆ ಇಲ್ಲಿನ ಗ್ರಾಮಗಳಿಗೆ ಸಾರ್ವಜನಿಕರು ಹಾಗೂ ಕಾರ್ಮಿಕರು ಹೋಗಿ ಬರಲು ಅನುಕೂಲವಾಗುವಂತೆ ಬಸ್ ಸೌಲಭ್ಯ ಕಲ್ಪಿಸುವಂತೆ ದಶಕಗಳಿಂದಲೂ ಮನವಿ ಮಾಡುತ್ತಲೇ ಇದ್ದರು ಸಹ ಇಲ್ಲಿಯವರೆಗೂ ಬಸ್ ಸೌಲಭ್ಯ ಕಲ್ಪಿಸಿಲ್ಲ. ಆಟೋ ಅಥವಾ ಸ್ವಂತ ವಾಹನಗಳನ್ನೇ ಅವಲಂಭಿಸಬೇಕಿದೆ ಎಂದು ಹಾಲಿನ ವ್ಯಾಪಾರಿ ಮುನಿರಾಜು ಒತ್ತಾಯಿಸಿದರು.