ಚಿಕ್ಕಬಳ್ಳಾಪುರ:ಜೆಡಿಎಸ್ ಪ್ರಾಬಲ್ಯದ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರವು ಪ್ರಮುಖವಾಗಿವೆ. ತಳ
ಮಟ್ಟದಿಂದಲೂ ಜೆಡಿಎಸ್ಗೆ ಕಾರ್ಯಕರ್ತರ ಪಡೆ ಇದೆ.ಇಂತಿಪ್ಪ ಜಿಲ್ಲೆಗಳಲ್ಲಿ ಚದುರಿರುವ ಕಾರ್ಯಕರ್ತರನ್ನು ಸಂಘಟಿಸುವ ಸವಾಲು ಜೆಡಿಎಸ್ಗೆ ಇದೆ.

ಈ ಹಿನ್ನೆಲೆಯಲ್ಲಿ ನೋಡುವುದಾದರೆ ನ.1ರಿಂದ ಆರಂಭವಾಗಲಿರುವ ‘ಪಂಚರತ್ನ’ ರಥಯಾತ್ರೆಯು ಪಕ್ಷದ ಬೆಳವಣಿಗೆಗೆ ಟಾನಿಕ್ ಆಗಲಿದೆ ಎನ್ನುವ ಆಶಾವಾದ ಜೆಡಿಎಸ್ ನಾಯಕರು ಮತ್ತು ಮುಖಂಡರಲ್ಲಿದೆ.

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ಪಂಚರತ್ನ ರಥ ಯಾತ್ರೆಯು 10 ದಿನಗಳ ಕಾಲ ಸಂಚರಿಸಲಿದೆ.ಈ ಹಿಂದಿನಿಂದಲೂ ಜೆಡಿಎಸ್ಗೆ ಉತ್ತಮವಾದ ನೆಲೆ ಹೊಂದಿರುವ ಜಿಲ್ಲೆಗಳಲ್ಲಿ ಅವಿಭಜಿತ ಕೋಲಾರ ಪ್ರಮುಖವಾದುದು.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ
ಯಾಗಿದ್ದ ಸಮಯದಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿಯೂ ದೇವೇಗೌಡರ ಬೆಂಬಲಿಗರು ಜನತಾದಳದಿಂದ ಗೆಲುವು ಸಾಧಿಸಿದ್ದರು.

ಈ ಹಿಂದಿನ ನಗರ ಸ್ಥಳೀಯ ಸಂಸ್ಥೆಗಳು, ವಿಧಾನ ಪರಿಷತ್, ವಿಧಾನಸಭೆ ಚುನಾವಣೆ ಚುನಾವಣೆಗಳ ಮತಗಳಿಕೆ ಲೆಕ್ಕ ನೋಡಿದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳು ಎನಿಸಿವೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೆಲೆಯನ್ನು ಉತ್ತಮಗೊಳಿಸಲು ಬಿಜೆಪಿ ಸಹ ದೊಡ್ಡ ಮಟ್ಟದಲ್ಲಿಯೇ ಹೆಜ್ಜೆ ಇಟ್ಟಿದೆ. ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಖಾತೆಯನ್ನೂ ತೆರೆದಿರುವ ಬಿಜೆಪಿ ಎರಡೂ ಜಿಲ್ಲೆಗಳಲ್ಲಿ ಇತರೆ ಪಕ್ಷಗಳ ನಾಯಕರಿಗೆ ಗಾಳ ಹಾಕುತ್ತಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕೆ.ಪಿ.ಬಚ್ಚೇಗೌಡರು, ಗೌರಿಬಿದ
ನೂರು ಕ್ಷೇತ್ರದಲ್ಲಿ ಸಿ.ಆರ್.ನರಸಿಂಹಮೂರ್ತಿ, ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಿ.ಎನ್.ರವಿಕುಮಾರ್ ಮತಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿ ಇದ್ದರು. ಚಿಂತಾಮಣಿ ಯಲ್ಲಿ ಎಂ.ಕೃಷ್ಣಾರೆಡ್ಡಿ ಗೆಲುವು ಸಾಧಿಸಿದ್ದರು. ಬಾಗೇಪಲ್ಲಿ ಕ್ಷೇತ್ರದಲ್ಲಿ ಸಿ.ಆರ್.ಮನೋಹರ್ ಮೂರನೇ ಸ್ಥಾನದಲ್ಲಿ ಇದ್ದರು.

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನ ಶ್ರೀನಿವಾಸಗೌಡ ಗೆಲುವು ಸಾಧಿಸಿದ್ದರೆ, ಶ್ರೀನಿವಾಸಪುರ, ಮುಳಬಾಗಿಲು, ಬಂಗಾರಪೇಟೆ ಮತ್ತು ಮಾಲೂರು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಉತ್ತಮ ಸಾಧನೆ ತೋರಿತ್ತು. 2018ರ ಚುನಾವಣೆಯ ಮತಗಳಿಕೆಯನ್ನು ಅವಲೋಕಿಸಿದರೆ ಅವಳಿ ಜಿಲ್ಲೆಗಳಲ್ಲಿ ಜೆಡಿಎಸ್ಗೆ ತನ್ನದೇ ಆದ ನೆಲೆ ಇದೆ.

ಅವಳಿ ಜಿಲ್ಲೆಗಳಲ್ಲಿ ಬಿಜೆಪಿಯಲ್ಲಿರುವ ಬಹುಪಾಲು ಮುಖಂಡರು, ಕಾರ್ಯಕರ್ತರು ಜೆಡಿಎಸ್ ಹಿನ್ನೆಲೆಯವರಾಗಿದ್ದಾರೆ. ಜಿಲ್ಲೆಯಲ್ಲಿ 2023ರ ವಿಧಾನಸಭಾ ಚುನಾವಣೆಯ ವೇಳೆಗೆ ಇತರೆ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಮೂಲ ಜೆಡಿಎಸ್ ಕಾರ್ಯಕರ್ತರನ್ನು ಮತ್ತೆ ಪಕ್ಷಕ್ಕೆ ಕರೆ ತರುವ ಇಲ್ಲವೆ ಪಕ್ಷದ ಕಾರ್ಯಕರ್ತರು ಚದುರಂತೆ ಸಂಘಟಿಸುವ ಸವಾಲು ಜೆಡಿಎಸ್ಗೆ ಇದೆ.

ಈ ಎಲ್ಲ ದೃಷ್ಟಿಯಿಂದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕೈಗೊಂಡಿರುವ ‘ಪಂಚರತ್ನ’ ರಥಯಾತ್ರೆ ಪಕ್ಷದ ಬೆಳವಣಿಗೆಗೆ ಪೂರಕವಾಗಲಿದೆ ಎನ್ನುವ ವಿಶ್ವಾಸವನ್ನು ಮುಖಂಡರು ವ್ಯಕ್ತಪಡಿಸುವರು. ಕುಮಾರಸ್ವಾಮಿಯವರೇ ಎರಡೂ ಜಿಲ್ಲೆಗಳಲ್ಲಿ 10 ದಿನಗಳ ಕಾಲ ಯಾತ್ರೆ ಕೈಗೊಳ್ಳಲಿರುವುದು ಪಕ್ಷದ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಮೂಡಿಸಲಿದೆ ಎನ್ನುತ್ತಾರೆ ಮುಖಂಡರು.

ಪಂಚರತ್ನ ಯಾತ್ರೆ ಹಿನ್ನೆಲೆಯಲ್ಲಿಈಗಾಗಲೇ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಪಕ್ಷದಿಂದ ಪೂರ್ವಭಾವಿ ಸಭೆಗಳು ನಡೆದಿವೆ. ಪಕ್ಷ ಸಂಘಟನೆ ಮತ್ತು ಯಾತ್ರೆಯ ಸ್ವಾಗತಕ್ಕೆ ಸಂಬಂಧಿಸಿದ ರೂಪುರೇಷೆಗಳು ಸಿದ್ಧವಾಗಿವೆ.

ಮರಳಿ ಪಕ್ಷಕ್ಕೆ ಬರುವರು

‘ಪಂಚರತ್ನ ರಥ ಯಾತ್ರೆಯು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಈಗಾಗಲೇ ಪಕ್ಷ ತೊರೆದವರು ಮತ್ತೆ ಜೆಡಿಎಸ್ ಸೇರುವ ಸಾಧ್ಯತೆ ಇದೆ‘ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಮುನೇಗೌಡ ತಿಳಿಸಿದರು.

ಯಾವ ಮಾರ್ಗದಲ್ಲಿ ರಥಯಾತ್ರೆ ಸಂಚರಿಸುತ್ತದೆ. ಎಲ್ಲಿ ಕುಮಾರಸ್ವಾಮಿ ಅವರ ವಾಸ್ತವ್ಯ ಎನ್ನುವ ರೂಪುರೇಷೆಗಳುವಿಧಾನಸಭಾ ಕ್ಷೇತ್ರವಾರು ಸಿದ್ಧವಾಗಿವೆ ಎಂದು ಹೇಳಿದರು.

ಎರಡು ಜಿಲ್ಲೆಯಲ್ಲಿ 10 ದಿನ ಯಾತ್ರೆ

ನ.1ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆಯ ವಿನಾಯಕ ದೇಗುಲದಿಂದ ಯಾತ್ರೆಗೆ ಚಾಲನೆ ದೊರೆಯಲಿದೆ. ನ.2ರಂದು ಬಂಗಾರಪೇಟೆ, 3ರಂದು ಮಾಲೂರು, 4ರಂದು ಕೋಲಾರ, 5ರಂದು ಶ್ರೀನಿವಾಸಪುರ ನ.6ರಂದು ಚಿಂತಾಮಣಿ, 7ರಂದು ಶಿಡ್ಲಘಟ್ಟ, 8ರಂದು ಬಾಗೇಪಲ್ಲಿ, 9ರಂದು ಗೌರಿಬಿದನೂರು ಮತ್ತು 10ರಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ರಥಯಾತ್ರೆ ಸಂಚರಿಸಲಿದೆ. ಚಿಕ್ಕಬಳ್ಳಾಪುರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಗೆ ಸಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.