ಬೆಳಗಾವಿ: ‘ಬೆಳಗಾವಿ ಜಿಲ್ಲೆ ಅತ್ಯಂತ ದೊಡ್ಡದು. ಕನಿಷ್ಠ ಇನ್ನೊಂದು ಸಚಿವ ಸ್ಥಾನ ಕೊಡಬೇಕು. ಇಲ್ಲದಿದ್ದರೆ, ಜಿಲ್ಲೆಗೆ ಅನ್ಯಾಯ ಮಾಡಿದಂತಾಗುತ್ತದೆ’ ಎಂದು ಶಾಸಕ ಆಸಿಫ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದರು.

‘ಬೆಂಗಳೂರು ಮೊದಲನೇ ಮತ್ತು ಬೆಳಗಾವಿ ಎರಡನೇ ಅತಿ ದೊಡ್ಡ ಜಿಲ್ಲೆ. ಬೆಂಗಳೂರಿಗೆ ಎಷ್ಟು ಸಚಿವ ಸ್ಥಾನ ನೀಡಿದ್ದೀರಿ, ಬೆಳಗಾವಿಗೆ ಎಷ್ಟು ನೀಡಿದ್ದೀರಿ ಯೋಚಿಸಿ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ನನ್ನ ಸಮುದಾಯ ನನ್ನನ್ನೂ ಪ್ರಶ್ನಿಸುತ್ತಿದೆ. ಉತ್ತರ ಕರ್ನಾಟಕದಲ್ಲಿ ಏಕೆ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ನೀಡಿಲ್ಲ. ಏಕೆ ಅನ್ಯಾಯ ಮಾಡಲಾಗಿದೆ ಎಂದು ಪ್ರಶ್ನೆ ಮಾಡುತ್ತೇನೆ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಕಾಂಗ್ರೆಸ್ನ ಕೆಲ ಶಾಸಕರಿಗೆ ಬಿಜೆಪಿ ಮುಖಂಡರು ₹100 ಕೋಟಿ ಆಮಿಷ ಒಡ್ಡಿದ್ದಾರೆ. ನನ್ನನ್ನು ಯಾರೂ ಸಂಪರ್ಕಿಸಿಲ್ಲ. 135 ಶಾಸಕರೆಲ್ಲ ಒಟ್ಟಾಗಿದ್ದೇವೆ. ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ. ನಾನಂತೂ ಸಾವಿರ ಕೋಟಿ ಕೊಟ್ಟರೂ ಬಿಜೆಪಿಗೆ ಹೋಗುವುದಿಲ್ಲ’ ಎಂದರು.

‘50 ಜನರಿಗೆ ತಲಾ ₹100 ಕೋಟಿ ಕೊಡುವ ವಿಚಾರ ಬಿಜೆಪಿಯವರು ಮಾಡಿರಬಹುದು. ಅದಕ್ಕೆ ₹5,000 ಕೋಟಿ ಬೇಕು. ಇಷ್ಟೊಂದು ಹಣ ಎಲ್ಲಿಂದ ತಂದರು ಎಂಬುದು ತನಿಖೆಯಾಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.