ದಿನ ಭವಿಷ್ಯ: ಈ ರಾಶಿಯವರಿಗೆ ನಿಜವಾದ ಗೆಳೆಯ ಯಾರೆಂಬುದು ತಿಳಿಯಲಿದೆ
Published 18 ನವೆಂಬರ್ 2024, 21:09 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕಾರ್ಮಿಕರ ಬೇಡಿಕೆಗಳನ್ನು ಅಲ್ಲಗಳೆಯದೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ಹಿರಿಯರ ಆರೋಗ್ಯ ಸುಧಾರಿಸುವುದರಿಂದ ಸಂತಸವಿರುವುದು. ಆಪ್ತರ ಹಿತಾಸಕ್ತಿಗಳಿಗೆ ಒತ್ತಾಸೆಯೂ ಇರಲಿ.
ವೃಷಭ
ಸಂಬಂಧಿಕರು ಹಳೆ ವ್ಯಾಜ್ಯಗಳನ್ನು ಮರೆತು ನಿಮ್ಮೊಂದಿಗೆ ಸಂಬಂಧ ಉಳಿಸಿಕೊಳ್ಳುವ ದೃಷ್ಟಿಯಿಂದ ಬಂದಾರು. ಜಾಗರೂಕತೆಯಿಂದ ಅವರಲ್ಲಿ ವ್ಯವಹರಿಸುವುದು ಭವಿಷ್ಯಕ್ಕೆ ಹಿತವಾದುದು.
ಮಿಥುನ
ದೀರ್ಘಕಾಲೀನ ಅನಾರೋಗ್ಯಗಳನ್ನು ಆಪ್ತರ ಸಲಹೆಯ ಮೇರೆಗೆ ವೈದ್ಯರೊಬ್ಬರನ್ನು ಕಂಡು ಬಗೆಹರಿಸಿಕೊಳ್ಳುವಿರಿ. ಸ್ಥಗಿತಗೊಂಡ ಕಟ್ಟಡದ ಕೆಲಸಗಳು ಪೂರ್ತಿಗೊಂಡು ಮನಸ್ಸಿಗೆ ಸಮಾಧಾನ ಆಗುವುದು.
ಕರ್ಕಾಟಕ
ನಿಜವಾದ ಗೆಳೆಯ ಯಾರೆಂಬುದು ತಿಳಿಯಲಿದೆ. ನಿಮ್ಮ ತಪ್ಪುಗಳ ಬಗ್ಗೆ ಬೇರೆಯವರು ಹೇಳುವ ಮೊದಲು ಸರಿಪಡಿಸಿಕೊಳ್ಳಿರಿ. ಸಹಚರರ, ಕುಟುಂಬದ ಸದಸ್ಯರ ಹಿತಾಸಕ್ತಿಗೆ ಆದ್ಯತೆ ಇರಲಿ.
ಸಿಂಹ
ವೃತ್ತಿಯಲ್ಲಿ ಈಗಾಗಲೇ ಯಶಸ್ಸನ್ನು ಗಳಿಸಿರುವವರೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನ ಯಶಸ್ವಿಯಾಗುತ್ತದೆ. ವಿನೋದ ಸ್ವಭಾವ ಹಾಗೂ ಬುದ್ಧಿವಂತಿಕೆ ಇತರರನ್ನು ಆಕರ್ಷಿಸುವುದು.
ಕನ್ಯಾ
ಶ್ರೇಯೋಭಿವೃದ್ಧಿಗಾಗಿ ದುರ್ಗಾಪರಮೇಶ್ವರಿಯಲ್ಲಿ ವಿಶೇಷ ಪ್ರಾರ್ಥನೆಯನ್ನು ಮಾಡಿಕೊಳ್ಳಿರಿ. ಬಹುದಿನದ ನಂತರ ಆರೋಗ್ಯ ಸುಧಾರಿಸಿ ಮನಸ್ಸಿಗೆ ನೆಮ್ಮದಿ ಸಿಗುವುದು. ಸಾಮಾಜಿಕವಾದ ಕಳಕಳಿ ಹೆಚ್ಚಲಿದೆ.
ತುಲಾ
ಅಧಿಕಾರಿ ಹಾಗೂ ಹಿರಿಯರಿಂದ ಸಹಕಾರಗಳನ್ನು ಅಪೇಕ್ಷಿಸುವಂತಹ ದಿನ ಆಗಲಿದೆ. ಏಕಾಂಗಿ ಹೋರಾಟ ಸರಿಯಲ್ಲ. ನಂಬಿಕಸ್ಥರಿಂದ ವ್ಯಾಪಾರದಲ್ಲಿ ಮೋಸಹೋಗುವುದರಿಂದ ಎಚ್ಚರವಿರಲಿ.
ವೃಶ್ಚಿಕ
ಮನೆಯ ಪರಿಸ್ಥಿತಿಗಳನ್ನು ಸುಧಾರಣೆಗೆ ತರುವ ಪ್ರಯತ್ನದಿಂದ ಕೆಲಸದ ಕಡೆಗೆ ಗಮನ ಕೊಡಲು ಸಾಧ್ಯವಾಗದಂತಾಗಲಿದೆ. ಪ್ರಾಮಾಣಿಕತೆ ಇರಲಿ. ಸಂತೋಷದ ಘಟನೆಗಳು ನಡೆಯುವುದು.
ಧನು
ಅಧಿಕ ಕೌಟುಂಬಿಕ ಒತ್ತಡಗಳ ಮಧ್ಯೆಯೂ ವ್ಯಾಪಾರ ವ್ಯವಹಾರಗಳ ಬಗ್ಗೆ ಸ್ವಲ್ಪ ಹೆಚ್ಚಿನ ಗಮನವನ್ನೇ ನೀಡಬೇಕಾದ ಬಿಗಿಯಾದ ಪರಿಸ್ಥಿತಿಯು ಬರುವುದು. ಕನಸುಗಳು ಈ ದಿನ ಕನಸಾಗಿಯೇ ಉಳಿಯಲಿದೆ.
ಮಕರ
ಬಂಧುಮಿತ್ರರ ಉತ್ತಮ ನಡವಳಿಕೆಗಳಿಂದ ಸಂಕಷ್ಟಕರ ಸಂದರ್ಭದಲ್ಲಿ ಸಹಾಯಕ್ಕೆ ಬಂದಾರು ಎಂಬ ಆಶಾಭಾವನೆ ಬರುವುದು. ಮೇಲಧಿಕಾರಿಗಳಿಂದ ಕುತೂಹಲಕಾರಿ ವಿಷಯ ತಿಳಿದು ಅಚ್ಚರಿಗೊಳ್ಳುವಿರಿ.
ಕುಂಭ
ಕೆಲಸದ ಒತ್ತಡದಿಂದ ಉಂಟಾಗುತ್ತಿರುವ ಶರೀರ ಬಾಧೆಗಳನ್ನು ನಿವಾರಿಸಿಕೊಳ್ಳಲೆಂದು ತೆಗೆದುಕೊಳ್ಳುವ ಔಷಧಗಳು ನಿಧಾನವಾಗಿ ವಿಷವಾಗಿ ಪರಿಣಮಿಸಬಹುದು. ಕೌಟುಂಬಿಕ ವಿಷಯದಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ.
ಮೀನ
ಎಲ್ಲಾ ವಿಷಯದಲ್ಲಿಯೂ ಹೊಂದಾಣಿಕೆ ಅಗತ್ಯವೆನಿಸಲಿದೆ. ಹಾಲು ಉತ್ಪನ್ನ ವಸ್ತುಗಳ ಮಾರಾಟಗಾರರಿಗೆ ಲಾಭ ಆಗಲಿದೆ. ಶ್ರಮಕ್ಕೆ ಸರಿಸಮಾನವಾದ ಧನಾಗಮನಕ್ಕೆ ಯಾವುದೇ ತೊಂದರೆಯಿಲ್ಲ.