ಬೆಂಗಳೂರು: ಹೊನ್ನಾವರದ ಸಮರ್ಥ ಜಗದೀಶ್ ರಾವ್ ಅವರು ಕಿರ್ಗಿಸ್ಥಾನದ ಬಿಷ್ಕೆಕ್ನಲ್ಲಿ ಭಾನುವಾರ ಮುಕ್ತಾಯಗೊಂಡ ದೈಹಿಕ ನ್ಯೂನತೆಯಳ್ಳವರ ಎರಡನೇ ಏಷ್ಯನ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದಾರೆ.

ಭಾರತ ಕ್ರೀಡಾ ಪ್ರಾಧಿಕಾರದ ಆರ್ಥಿಕ ನೆರವಿನಿಂದ ಅಖಿಲ ಭಾರತ ಚೆಸ್ ಫೆಡರೇಷನ್ ಮತ್ತು ಪಿಸಿಐ ಸಹಕಾರದಿಂದ ಎಂಟು ವಿಕಲಾಂಗ ಆಟಗಾರರು, ಎಂಟು ಸಹಾಯಕರು, ತರಬೇತುದಾರರನ್ನು ಏಳು ದಿನಗಳ ಈ ಚಾಂಪಿಯನ್ಷಿಪ್ಗೆ ಕಳುಹಿಸಲಾಗಿತ್ತು.

ಓಪನ್ ವರ್ಗದಲ್ಲಿ ವಿಜಯವಾಡದ ವೆಂಕಟಕೃಷ್ಣ ಕೌಶಿಕ್ ಮತ್ತು ಸಮರ್ಥ್ 9 ಸುತ್ತುಗಳಿಂದ ತಲಾ 6 ಪಾಯಿಂಟ್ಸ್ ಗಳಿಸಿದರೂ, ಟೈಬ್ರೇಕ್ ಆಧಾರದಲ್ಲಿ ಕೌಶಿಕ್ ಚಿನ್ನ ಗೆದ್ದರು. ಮಹಿಳೆಯರ ವಿಭಾಗದಲ್ಲಿ ಕರ್ನಾಟಕದ ಎಜಿಲರಸಿ ಗೋಪಾಲಕೃಷ್ಣ (9 ಸುತ್ತುಗಳಿಂದ 6) ಅತ್ಯುತ್ತಮ ಅನ್ರೇಟೆಡ್ ಆಟಗಾರ್ತಿ ಎನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.