ಬೆಳಗಾವಿ: ರಮೇಶ ಕತ್ತಿ ರಾಜೀನಾಮೆಯಿಂದ ತೆರವಾದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಬಿಡಿಸಿಸಿ) ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನ.13ರಂದು ಚುನಾವಣೆ ನಡೆಯಲಿದೆ. ಉಳಿದ ಒಂದೇ ವರ್ಷದ ಅವಧಿಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.

ಹಲವು ವರ್ಷಗಳಿಂದ ಅಧ್ಯಕ್ಷರಾಗಿದ್ದ ರಮೇಶ ಕತ್ತಿ ಅಕ್ಟೋಬರ್ 5ರಂದು ದಿಢೀರನೇ ರಾಜೀನಾಮೆ ನೀಡಿದರು. ಚಿಕ್ಕೋಡಿ ಭಾಗದಲ್ಲಿ ಹೊಸ ಸದಸ್ಯರ ನೇಮಕಾತಿಗೆ ನಿರ್ದೇಶಕರ ಮಧ್ಯೆ ವಿರಸ ಉಂಟಾಗಿದ್ದು ಇದಕ್ಕೆ ಕಾರಣ ಎಂದು ಅವರು ಕಾರಣ ನೀಡಿದ್ದರು. ಆದರೆ, ಬ್ಯಾಂಕಿನ ವ್ಯವಹಾರಗಳಲ್ಲಿಯೂ ರಾಜಕೀಯ ಮೇಲಾಟ ಶುರುವಾಗಿದೆ ಎಂಬ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಕಳೆದ ಲೋಕಸಭಾ ಚುಣಾವಣೆಯಲ್ಲಿ ಅಣ್ಣಾಸಾಹೇಬ ಜೊಲ್ಲೆ ಪರವಾಗಿ ರಮೇಶ ಕತ್ತಿ ನಿಲ್ಲಲಿಲ್ಲ. ಇದರಿಂದಲೇ ಸೋಲಾಯಿತು ಎಂಬ ಕಾರಣಕ್ಕೆ ಅಣ್ಣಾಸಾಹೇಬ ಅವರು ರಮೇಶ ಕತ್ತಿ ಅವರನ್ನೂ ಕೆಳಗಿಳಿಸಲು ಗಾಳ ಬೀಸಿದರು ಎಂದೂ ಕೆಲ ನಿರ್ದೆಶಕರು ಅಭಿಪ್ರಾಯಪಟ್ಟಿದ್ದಾರೆ.

ಯಾರಿದ್ದಾರೆ ರೇಸ್ನಲ್ಲಿ: ಸದ್ಯಕ್ಕೆ ಒಂದು ವರ್ಷದ ಅವಧಿ ಮಾತ್ರ ಉಳಿದಿದೆ. ಆದರೂ ಸ್ಪರ್ಧೆ ಮಾತ್ರ ಕಡಿಮೆಯೇನಿಲ್ಲ. ಚಿಕ್ಕೋಡಿಯ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬೈಲಹೊಂಗಲದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಅಧ್ಯಕ್ಷ ಸ್ಥಾನದ ಜಿದ್ದಿನಲ್ಲಿ ನಿಂತಿದ್ದಾರೆ.

ಹೊಸ ಅಧ್ಯಕ್ಷರ ಜವಾಬ್ದಾರಿಯನ್ನು ಶಾಸಕರಾದ ಲಕ್ಷ್ಮಣ ಸವದಿ, ಬಾಲಚಂದ್ರ ಜಾರಕಿಹೊಳಿ ಹಾಗೂ ನಿರ್ದೇಶಕ ರಮೇಶ ಕತ್ತಿ ಹೆಗಲಿಗೆ ನೀಡಲಾಗಿದೆ. ಈ ಮೂವರೂ ತೆಗೆದುಕೊಳ್ಳುವ ನಿರ್ಧಾರಕ್ಕೆ ಉಳಿದ ನಿರ್ದೇಶಕರೂ ಒಪ್ಪಿಗೆ ಸೂಚಿಸುವ ಮಾತು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಯಲ್ಲಿ ಅಣ್ಣಾಸಾಹೇಬ ವಿರುದ್ಧವಾಗಿ ನಿಂತಿದ್ದ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರೇ ಈಗ ಅಣ್ಣಾಸಾಹೇಬ ಪರ ನಿಂತಿದ್ದಾರೆ.

ಶಾಸಕ ಲಕ್ಷ್ಮಣ ಸವದಿ ಹಾಗೂ ರಮೇಶ ಕತ್ತಿ ಇಬ್ಬರೂ ಮಹಾಂತೇಶ ದೊಡ್ಡಗೌಡರ ಪರ ಒಲವು ತೋರಿದ್ದಾರೆ. ಮಹಾಂತೇಶ ಅವರು ಸವದಿ ಅವರ ರಾಜಕೀಯ ಶಿಷ್ಯನಾದ್ದರಿಂದ ಈ ಬೆಳವಣಿಗೆ ಸಹಜವಾಗಿದೆ.

ಈ ಬಾರಿ ಅವಿರೋಧ ಆಯ್ಕೆಯ ಸಾಧ್ಯತೆ ತೀರ ವಿರಳ ಎಂಬುದು ನಿರ್ದೇಶಕರ ಮಾತು.

ಅಧ್ಯಕ್ಷ ಗಾದಿಗೆ ಮಹೂರ್ತ

ಬ್ಯಾಂಕಿನ ಆಡಳಿತ ಮಂಡಳಿಯ ಬಾಕಿ ಉಳಿದಿರುವ ಅವಧಿಗೆ ನೂತನ ಅಧ್ಯಕ್ಷರ ಆಯ್ಕೆಯು ಆಡಳಿತ ಮಂಡಳಿಯ ಸಭಾಭವನದಲ್ಲಿ ನಡೆಯಲಿದೆ. ನ.13ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ನಾಮಪತ್ರ ಸಲ್ಲಿಕೆ ಮಧ್ಯಾಹ್ನ 3ರಿಂದ ನಾಮಪತ್ರ ಪರಿಶೀಲನೆ ಬಳಿಕ ಕ್ರಮಬದ್ಧ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಿದೆ. ಹಿಂಪಡೆಯಲು ಅವಕಾಶ ನೀಡಿದ ಬಳಿಕ ಕಣದಲ್ಲಿ ಸ್ಪರ್ಧಿಗಳಿದ್ದರೇ ಚುನಾವಣೆ ಇಲ್ಲವಾದರೇ ರಿಟರ್ನಿಂಗ್ ಅಧಿಕಾರಿ ನೂತನ ಅಧ್ಯಕ್ಷರ ಘೋಷಣೆ ನಡೆಯಲಿದೆ.

ಮಂತ್ರಿ ಸ್ಥಾನಕ್ಕೆ ಸಮನಾದ ಹುದ್ದೆ

ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ಅತಿ ದೊಡ್ಡದು ಎಂಬ ಹಿರಿಮೆ ಹೊಂದಿದೆ. ಈ ಬ್ಯಾಂಕ್ ಚುಕ್ಕಾಣಿ ಹಿಡಿಯುವವರು ಮಂತ್ರಿ ಸ್ಥಾನಕ್ಕೆ ಸಮನಾದ ಅಧಿಕಾರ ಹೊಂದಿರುತ್ತಾರೆ ಎಂಬುದು ವಿಧಿತ. ಒಟ್ಟು ₹5791 ಕೋಟಿ ಠೇವಣಿ ₹5200 ಕೋಟಿ ಸಾಲ ನೀಡಿಕೆ ಈ ಬ್ಯಾಂಕಿನ ಸದ್ಯದ ದಾಖೆಲೆ. ಒಟ್ಟು 1155 ಪಿಕೆಪಿಎಸ್ಗಳನ್ನು ಹೊಂದಿದೆ. ಜಿಲ್ಲೆಯ 40 ಲಕ್ಷಕ್ಕೂ ಹೆಚ್ಚು ರೈತರ ಆರ್ಥಿಕತೆ ಮೇಲೆ ಈ ಬ್ಯಾಂಕ್ ನೇರ ಪರಿಣಾಮ ಬೀರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.