ಬೆಳಗಾವಿ: ಮಳ ಅಬ್ಬರ ಮುಂದುವರಿದಿರುವುದರಿಂದಾಗಿ ಜಿಲ್ಲೆಯ ಜಲಾಶಯಗಳಿಗೆ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ಗುರುವಾರಕ್ಕೆ ಹೋಲಿಸಿದರೆ, ಒಳಹರಿವಿನ ಪ್ರಮಾಣ ಸರಾಸರಿ ಮೂರ್ನಾಲ್ಕು ಪಟ್ಟು ಹೆಚ್ಚಾಗಿದೆ.

ಘಟಪ್ರಭಾ ನದಿಗೆ ಹಿಡಕಲ್ ಬಳಿ ನಿರ್ಮಿಸಿರುವ ರಾಜಾಲಖಮಗೌಡ ಜಲಾಶಯಕ್ಕೆ 53,952 ಕ್ಯುಸೆಕ್ ಒಳಹರಿವಿದೆ. 129 ಕ್ಯುಸೆಕ್ ಹೊರಹರಿವಿದೆ. ಗರಿಷ್ಠ ಮಟ್ಟ 2175 ಅಡಿಗಳಿದ್ದು, ಗುರುವಾರದ ನೀರಿನ ಮಟ್ಟ 2158 ಇತ್ತು. ಮಳೆ ಹೀಗೆಯೇ ಮುಂದುವರಿದರೆ ಇನ್ನೊಂದು ದಿನದಲ್ಲೇ ಭರ್ತಿಯಾಗುವ ಸಾಧ್ಯತೆ ಇದೆ.

ಮಲಪ್ರಭಾ ನದಿಗೆ ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಬಳಿ ನಿರ್ಮಿಸಿರುವ ಜಲಾಶಯಕ್ಕೆ 33,677 ಕ್ಯುಸೆಕ್ ಒಳಹರಿವಿದೆ. 194 ಕ್ಯುಸೆಕ್ ಹೊರಹರಿವಿದೆ. ಗರಿಷ್ಠ ಮಟ್ಟ 2079 ಅಡಿಗಳಾಗಿದ್ದು, ಶುಕ್ರವಾರ ಬೆಳಿಗ್ಗೆ ನೀರಿನ ಮಟ್ಟ 2069 ಅಡಿ ಇತ್ತು. ಜಲಾಶಯ ಭರ್ತಿಯಾಗಲು 10 ಅಡಿಗಳಷ್ಟೆ ಬಾಕಿ ಇದೆ.

ಜಲಾಶಯದಿಂದ ಯಾವುದೇ ಕ್ಷಣದಲ್ಲಾದರೂ ನೀರು ಬಿಡುಗಡೆ ಮಾಡಬಹುದು. ನದಿ ತೀರದ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಜೋರು ಮಳೆ ಶುಕ್ರವಾರವೂ ಮುಂದುವರಿದಿದೆ. ಜನಜೀವನ ಅಸ್ತವ್ಯಸ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.