ಹುಕ್ಕೇರಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನೊಗನಿಹಾಳ ಗ್ರಾಮದ ಬಳಿ ಗುರುವಾರ ಘಟಪ್ರಭಾ ನದಿಯ ಸೇತುವೆ ಮೇಲೆ ಹೊರಟಿದ್ದ ಬೈಕ್ ನದಿಗೆ ಬಿದ್ದು ದಂಪತಿ ನೀರುಪಾಲಾಗಿದ್ದಾರೆ. ಪತ್ನಿಯ ಶವ ಪತ್ತೆಯಾಗಿದ್ದು, ಪತಿಗೆ ಹುಡುಕಾಟ ನಡೆದಿದೆ.

ಚಿಕ್ಕೋಡಿ ತಾಲ್ಲೂಕಿನ ಪೊಗತ್ಯಾನಟ್ಟಿ ಗ್ರಾಮದ ಜಯಶ್ರೀ ಸುರೇಶ ಬಡಿಗೇರ (45) ಶವ ಪತ್ತೆಯಾಗಿದೆ. ಇವರ ಪತಿ ಸುರೇಶ ಗುಂಡಪ್ಪ ಬಡಿಗೇರ (54) ನೀರುಪಾಲಾಗಿದ್ದಾರೆ.

ಘೋಡಗೇರಿ ಗ್ರಾಮದಿಂದ ಚಿಕ್ಕೋಡಿ ತಾಲ್ಲೂಕಿನ ಪೊಗತ್ಯಾನಟ್ಟಿ ಗ್ರಾಮಕ್ಕೆ ದಂಪತಿ ಬೈಕ್ ಮೇಲೆ ತೆರಳುತ್ತಿದ್ದರು. ಸೇತುವೆ ಮೇಲೆ ಎದುರಿಗೆ ಬಂದ ವಾಹನಕ್ಕೆ ದಾರಿ ಬಿಡುವ ಸಂದರ್ಭದಲ್ಲಿ ಬೈಕ್ ಜಾರಿ ನದಿಗೆ ಬಿದ್ದಿತು. ಧಾರಾಕಾರ ಮಳೆಯ ಕಾರಣ ನದಿ ನೀರು ರಭಸವಾಗಿ ಹರಿಯುತ್ತಿದೆ. ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕ ನಾಪತ್ತೆ:

ಬೈಲಹೊಂಗಲ ತಾಲ್ಲೂಕಿನ ನೇಸರಗಿ ಗ್ರಾಮದ ಬಳಿ ಬುಧವಾರ ಸಂಜೆ ಹಳ್ಳಕ್ಕೆ ಸಿಲುಕಿದ ಯುವಕ ಕಾಣೆಯಾಗಿದ್ದಾನೆ. ಕರಡಿಗುದ್ದಿ ಗ್ರಾಮದ ಯಲ್ಲಮ್ಮ ಡಿ. ಬೋರಣ್ಣವರ ನೀರಿನಲ್ಲಿ ತೇಲಿಹೋದ ಯುವಕ.

ಮೋರೆ ಗ್ರಾಮದಿಂದ ಕರಡಿಗುದ್ದಿಗೆ ಮರಳುತ್ತಿದ್ದ. ಬೈಕ್ ಮೇಲೆ ನೇಸರಗಿ ಹಳ್ಳ ದಾಟುವಾಗ ನೀರಿನ ರಭಸಕ್ಕೆ ಬೈಕ್ ಸಮೇತ ತೇಲಿಕೊಂಡು ಹೋದ. ತುಸು ದೂರದಲ್ಲಿ ಬೈಕ್ ಪತ್ತೆಯಾಗಿದೆ. ಯುವಕನ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗಾವಿ ನಗರ, ತಾಲ್ಲೂಕು, ಸವದತ್ತಿ, ಚಿಕ್ಕೋಡಿ, ಬೈಲಹೊಂಗಲ ಮುಂತಾದ ಕಡೆ ಗುರುವಾರ ಕೂಡ ಧಾರಾಕಾರ ಮಳೆ ಮುಂದುವರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.