ಚಿಕ್ಕೋಡಿ: ದೇವರ ಆಯುಧಗಳು ಎಂದರೆ, ಗದೆ, ಬಿಲ್ಲು, ಖಡ್ಗ, ತ್ರಿಶೂಲ, ಶಂಖ, ಚಕ್ರ ನೋಡಿರುತ್ತೀರಿ. ಆದರೆ, ಪಿಸ್ತೂಲ್ ಅನ್ನೇ ಆಯುಧವಾಗಿಸಿಕೊಂಡ ದೇವರನ್ನು ನೋಡಬೇಕಾದರೆ ತಾಲ್ಲೂಕಿನ ಜಾಗನೂರಿಗೆ ಬರಬೇಕು.

ಇಲ್ಲಿನ ಆಂಜನೇಯ ತನ್ನ ಸೊಂಟಕ್ಕೆ ಪಿಸ್ತೂಲ್ ಇಟ್ಟುಕೊಂಡಿರುವುದು ಕಂಡುಬರುತ್ತದೆ. ಜಾತ್ರೆ, ಉತ್ಸವ, ಹನುಮ ಜಯಂತಿ, ರಾಮನವಮಿ ಸೇರಿ ವಿಶೇಷ ಸಂದರ್ಭ ಹನುಮಾನ ದೇವರ ಮೂರ್ತಿ ಅಲಂಕರಿಸುವಾಗ, ಪಿಸ್ತೂಲ್ ಇರಿಸುವ ಪರಿಪಾಠ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.

ದೀಪಾವಳಿ ಪ್ರಯುಕ್ತ ನ.1, 2ರಂದು ವೈಭವದಿಂದ ನೆರವೇರಲಿರುವ ಹನುಮಾನ ದೇವರ ಜಾತ್ರೆಗೆ ಜಾಗನೂರ ಗ್ರಾಮ ಸಜ್ಜಾಗಿದೆ. ಆಂಜನೇಯನ ಸೊಂಟದಲ್ಲಿ ಪಿಸ್ತೂಲ್ ರಾರಾಜಿಸುತ್ತಿದೆ. ಜಾಗನೂರ ಹಾಗೂ ಸುತ್ತಲಿನ ಗ್ರಾಮಗಳಿಗೆ ‘ಜಾಗೃತ ದೇವಸ್ಥಾನ’ ಎಂದೇ ಇದು ಖ್ಯಾತಿ ಗಳಿಸಿದೆ.

ಜಾಗನೂರ ಪಕ್ಕದ ಗ್ರಾಮಗಳಾದ ಕಬ್ಬೂರಿನ ಸಿದ್ದರಾಯಪ್ಪ ಹಾಗೂ ನಾಗರಮುನ್ನೋಳಿಯ ಸಿದ್ದರಾಯಪ್ಪ ದೇವರ ಪಲ್ಲಕ್ಕಿಗಳು ಅಮವಾಸ್ಯೆ ದಿನ ಹಿರೇಹಳ್ಳದಲ್ಲಿ ಭೇಟಿಯಾಗುತ್ತವೆ. ಹಳ್ಳದಲ್ಲಿ ಎರಡೂ ದೇವರು ಸೇರಿಕೊಂಡು, ಜಾಗನೂರಿನ ಆಂಜನೇಯನನ್ನು ಭೇಟಿಯಾಗುವ ದೃಶ್ಯ ಭಕ್ತರನ್ನು ಸೆಳೆಯುತ್ತದೆ. ಮೂರೂ ದೇವರ ಪಲ್ಲಕ್ಕಿಗಳು ಕೂಡಿಕೊಂಡು ದೇವಸ್ಥಾನಕ್ಕೆ ಹೊರಡುವಾಗ, ಹೂವು, ಹಣ್ಣು, ಕಾಯಿ ಸಮರ್ಪಿಸಲಾಗುತ್ತದೆ.

ಬಹುತೇಕ ಕಡೆ ಆಂಜನೇಯ ದೇವರಿಗೆ ಭಂಡಾರ ತೂರುವುದಿಲ್ಲ. ಆದರೆ, ಜಾಗನೂರಿನ ಹನುಮಾನ ದೇವರಿಗೆ ಭಂಡಾರ ಹಾರಿಸಲಾಗುತ್ತದೆ. ಅದೂ ದೀಪಾವಳಿಯ ಅಮವಾಸ್ಯೆಯಂದು ಮಾತ್ರ. ಇನ್ನೂಳಿದ ದಿನಗಳಲ್ಲಿ ಜಾಗನೂರಿನ ಆಂಜನೇಯನಿಗೆ ಭಂಡಾರ ನಿಷಿದ್ದ.

ವಿವಿಧ ಕಾರ್ಯಕ್ರಮ: 1ರಂದು ಸಂಜೆ 4ಕ್ಕೆ ಕಬ್ಬೂರಿನ ಸಿದ್ದರಾಯಪ್ಪ ಹಾಗೂ ನಾಗರಮುನ್ನೋಳಿಯ ಸಿದ್ದರಾಯಪ್ಪ ದೇವರ ಪಲ್ಲಕ್ಕಿಗಳನ್ನು ಭಕ್ತರು ಆಯಾ ಗ್ರಾಮಗಳಿಗೆ ಬೀಳ್ಕೊಡುತ್ತಾರೆ. ಅಂದು ರಾತ್ರಿ 9.30ಕ್ಕೆ ಜೈ ಹನುಮಾನ ನಾಟ್ಯ ಸಂಘದವರು ಸಾಮಾಜಿಕ ನಾಟಕ ಪ್ರದರ್ಶಿಸಲಿಸದ್ದಾರೆ.

ದೀಪಾವಳಿ ಪಾಡ್ಯದ ದಿನವಾದ 2ರಂದು ಕಿನಾಲಕೋಡಿ ತೋಟದ ಗೆಳೆಯರ ಬಳಗದವರು ರಸಮಂಜರಿ, ಮೂಡಲಗಿಯ ಶಬ್ಬೀರ್ ಢಾಂಗೆ ಮತ್ತು ಸಂಗಡಿಗರು ಚಿಲಿಪಿಲಿ ಜಾನಪದ ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಜಾಗನೂರಿನ ಆಂಜನೇಯನ ದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ವರ್ಷವಿಡೀ ಆಗಮಿಸುತ್ತಾರೆ. ವೈಭವದಿಂದ ಜಾತ್ರೆ ಮಾಡಿ ಸಂಭ್ರಮಿಸುತ್ತಾರೆ
ಹನುಮಂತ ಪೂಜಾರಿ ಗ್ರಾಮಸ್ಥ

ಜಾಗನೂರಿನ ಆಂಜನೇಯನ ಮೂರ್ತಿ ಸೊಗಸಾಗಿದೆ. ದೇವರ ಸೊಂಟದಲ್ಲಿ ಪಿಸ್ತೂಲ್ ಇಟ್ಟು ಅಲಂಕರಿಸುವ ಪರಂಪರೆ ಬಹಳ ದಿನಗಳಿಂದ ನಡೆದುಕೊಂಡು ಬಂದಿದೆ. ಇದಕ್ಕೆ ಕಾರಣ ಏನೆಂದು ಗೊತ್ತಾಗಿಲ್ಲ
ಪಾಂಡುರಂಗ ಹನುಮನ್ನವರ ದೇವಸ್ಥಾನ ಸಮಿತಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.