ರಾಮದುರ್ಗ (ಬೆಳಗಾವಿ): ತಮ್ಮ ಇಬ್ಬರು ಮಕ್ಕಳಿಗೆ ವಿಷವುಣ್ಣಿಸಿ, ತಾವೂ ವಿಷ ಸೇವಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಪಟ್ಟಣದ ನವೀಪೇಟೆಯಲ್ಲಿ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಗೊಬ್ಬರದ ವರ್ತಕರಾಗಿದ್ದ ಪ್ರವೀಣ ರಮೇಶ ಶೆಟ್ಟರ (37), ಅವರ ಪತ್ನಿ ರಾಜೇಶ್ವರಿ (30), ಮಕ್ಕಳಾದ ಅಮೃತಾ (8) ಮತ್ತು ಅದ್ವಿಕ್ (5) ಮೃತರು.

ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ‘ವ್ಯಾಪಾರ ಚೆನ್ನಾಗಿತ್ತು. ಹೆಂಡತಿ ಮಕ್ಕಳೊಂದಿಗೆ ಅನ್ಯೋನ್ಯವಾಗಿದ್ದರು’ ಎಂದು ನೆರೆಹೊರೆಯವರು ತಿಳಿಸಿದರು.

ಘಟನಾ ಸ್ಥಳಕ್ಕೆ ಶಾಸಕ ಮಹಾದೇವಪ್ಪ ಯಾದವಾಡ, ಡಿಎಸ್‌ಪಿ ಶಂಕರಗೌಡ ಪಾಟೀಲ, ಸಿಪಿಐ ಶಶಿಕಾಂತ ವರ್ಮಾ, ಪಿಎಸ್‌ಐ ನಾಗನಗೌಡ ಕಟ್ಟಿಮನಿಗೌಡ್ರು, ಮುಖಂಡ ಮಲ್ಲಣ್ಣ ಯಾದವಾಡ ಭೇಟಿ ನೀಡಿದ್ದರು. ರಾಮದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.