ಬೆಳಗಾವಿ: ತಾಲ್ಲೂಕಿನ ನಾವಗೆ ಗ್ರಾಮದ ಕಾರ್ಖಾನೆಯ ಅಗ್ನಿ ಅವಘಡದಲ್ಲಿ ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ (20) ಅವರ ದೇಹದ ಅವಶೇಷಗಳನ್ನು, ಅಧಿಕಾರಿಗಳು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ತಂದೆಯ ಕೈಗೆ ಕೊಟ್ಟು ಕಳುಹಿಸಿದರು.

ಸುಟ್ಟುಹೋದ ಮಗನ ದೇಹದ ಅಲ್ಪಸ್ವಲ್ಪ ಅಂಗಾಂಗಗಳನ್ನು ತಂದೆ ಸಣ್ಣಗೌಡ ಅವರು, ಸಂತೆಗೆ ಬಳಸುತ್ತಿದ್ದ ಕೈಚೀಲದಲ್ಲಿ ಹಾಕಿಕೊಂಡು ಮನೆ ಕಡೆಗೆ ಹೊರಟರು. ದಾರಿಯುದ್ದಕ್ಕೂ ಇನ್ನಿಲ್ಲದಂತೆ ದುಃಖಿಸುತ್ತಿದ್ದ ಅವರ ಪರಿಸ್ಥಿತಿಗೆ ಮರುಗದವರೇ ಇಲ್ಲ.

ಕಾರ್ಖಾನೆಯ ಲಿಫ್ಟ್‌ನಲ್ಲೇ ಸಿಕ್ಕಿ ಸತ್ತುಹೋದ ಯುವಕನ ಶವಕ್ಕೂ ಜಿಲ್ಲಾಡಳಿತ ಕನಿಷ್ಠ ಗೌರವ ನೀಡಲಿಲ್ಲ. ಸ್ಥಳದಲ್ಲಿ ಆಂಬುಲೆನ್ಸ್‌ಗಳಿದ್ದರೂ ಕೈಚೀಲದಲ್ಲಿ ದೇಹದ ಅವಶೇಷಗಳನ್ನು ಹಾಕಿ ಕೊಟ್ಟಿತು.

ಸಣ್ಣಗೌಡ ಅವರ ನಾಲ್ವರು ಮಕ್ಕಳಲ್ಲಿ ಯಲ್ಲಪ್ಪ ಒಬ್ಬನೇ ಗಂಡುಮಗ. ಉಳಿದ ಮೂವರು ಹೆಣ್ಣುಮಕ್ಕಳಿದ್ದಾರೆ. ಪಿಯುಸಿ ಮುಗಿದ ಯಲ್ಲಪ್ಪ ತಂದೆಯ ಕಷ್ಟಕ್ಕೆ ನೆರವಾಗಲು ಓದನ್ನು ಅರ್ಧಕ್ಕೆ ನಿಲ್ಲಿಸಿ, ಕಾರ್ಖಾನೆಗೆ ಕೆಲಸಕ್ಕೆ ಸೇರಿದ್ದ. ಕೆಲಸಕ್ಕೆ ಸೇರಿ ಕೇವಲ ಮೂರು ತಿಂಗಳಾಗಿತ್ತು. ತಿಂಗಳಿಗೆ ₹12 ಸಾವಿರದಂತೆ ಎರಡು ಸಂಬಳ ಮಾತ್ರ ತೆಗೆದುಕೊಂಡಿದ್ದ. ಬಿಡಿಗಾಸಿಗೆ ದುಡಿಯಲು ಹೋಗಿ ಮಗ ಜೀವವನ್ನೇ ಕಳೆದುಕೊಂಡ ಎಂದು ತಂದೆ– ತಾಯಿ ಗೋಳಾಡುತ್ತಿದ್ದ ದೃಶ್ಯ ಮನ ಕಲುಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.