ಅಫ್ಗಾನಿಸ್ತಾನದ ಯುವ ಸ್ಪಿನ್ನರ್ ಅಲ್ಲಾ ಘಾಜನ್ಫರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು ₹ 4.8 ಕೋಟಿ ನೀಡಿ ಖರೀದಿಸಿದೆ.

ಘಾಜನ್ಫರ್ ಮೂಲ ಬೆಲೆ ₹ 75 ಲಕ್ಷ ಮೂಲ ಬೆಲೆ ಇದೆ.

ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಜಿದ್ದಿಗಿಳಿದ ಮುಂಬೈ ಇಂಡಿಯನ್ಸ್ ₹ 9.25 ಕೋಟಿ ನೀಡಿ ಚಹಾರ್ ಖರೀದಿಸಿದೆ. ಅವರು, ₹2 ಕೋಟಿ ಮೂಲ ಬೆಲೆ ಹೊಂದಿದ್ದಾರೆ.

ಮೂಲ ಬೆಲೆ: ₹ 2 ಕೋಟಿ

ಖರೀದಿಸಿದ ಮೊತ್ತ: ₹ 5.5 ಕೋಟಿ

ಆರ್ಸಿಬಿಯು ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ಖರೀದಿಸಿದೆ.

ಮುಂಬೈ ಇಂಡಿಯನ್ಸ್, ಲಖನೌ ಸೂಪರ್ ಜೈಂಟ್ಸ್ ಜೊತೆ ಪೈಪೋಟಿ ನಡೆಸಿದ್ದ ಆರ್ಸಿಬಿ, ₹ 2 ಕೋಟಿ ಮೂಲ ಬೆಲೆ ಹೊಂದಿರುವ ಭುವಿಗೆ ₹ 10.75 ಕೋಟಿ ನೀಡಿದೆ..

ಗುಜರಾತ್ ಟೈಟ್ಸ್ ತಂಡ ಜೆರಾಲ್ಡ್ ಕೋಜಿ ಅವರನ್ನು ₹ 2.40 ಕೋಟಿ ನೀಡಿ ಖರೀಸಿದಿಸಿದೆ. ಅವರು ₹ 1.25 ಕೋಟಿ ಮೂಲ ಬೆಲೆ ಹೊಂದಿದ್ದರು.

ಮೂಲ ಬೆಲೆ: ₹ 1 ಕೋಟಿ

ಖರೀದಿಸಿದ ಮೊತ್ತ: ₹ 6.5 ಕೋಟಿ

ಮೂಲ ಬೆಲೆ: ₹ 2 ಕೋಟಿ

ಖರೀದಿಸಿದ ಮೊತ್ತ: ₹ 2.6 ಕೋಟಿ

ಮೂಲ ಬೆಲೆ: ₹ 1.50 ಕೋಟಿ

ಖರೀದಿಸಿದ ಮೊತ್ತ: ₹ 4.20 ಕೋಟಿ

ರಾಜಸ್ಥಾನ ರಾಯಲ್ಸ್ ಜೊತೆ ಪೈಪೋಟಿ ನಡೆಸಿದ ಆರ್ಸಿಬಿ ಕೃಣಾಲ್ ಪಾಂಡ್ಯ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.

ಮೂಲ ಬೆಲೆ: ₹ 2 ಕೋಟಿ

ಖರೀದಿಸಿದ ಮೊತ್ತ: ₹ 5.75 ಕೋಟಿ

ಮೂಲ ಬೆಲೆ: ₹ 2 ಕೋಟಿ

ಖರೀದಿಸಿದ ಮೊತ್ತ: ₹ 7 ಕೋಟಿ

ಮೂಲ ಬೆಲೆ: ₹ 2 ಕೋಟಿ

ಖರೀದಿಸಿದ ಮೊತ್ತ: ₹ 2.4 ಕೋಟಿ

ಮೂಲ ಬೆಲೆ: ₹ 2 ಕೋಟಿ

ಖರೀದಿಸಿದ ಮೊತ್ತ: ₹3.2 ಕೋಟಿ

ಕಳೆದ ಆವೃತ್ತಿಯಲ್ಲಿ ಆರ್ಸಿಬಿ ಮುನ್ನಡೆಸಿದ್ದ ಫಾಫ್ ಡು ಪ್ಲೆಸಿ ಅವರನ್ನು ₹ 2 ಕೋಟಿ ನೀಡಿ ಡೆಲ್ಲಿ ಖರೀದಿಸಿದೆ.

ಮಾರಾಟವಾಗದ ಕೇನ್ ವಿಲಿಯಮ್ಸನ್

ರಿಷಭ್ ಪಂತ್: ಲಖನೌ ಸೂಪರ್ ಜೈಂಟ್ಸ್ – ₹ 27 ಕೋಟಿ

ಶ್ರೇಯಸ್ ಅಯ್ಯರ್: ಪಂಜಾಬ್ ಕಿಂಗ್ಸ್ – ₹ 26.75 ಕೋಟಿ

ವೆಂಕಟೇಶ್ ಅಯ್ಯರ್: ಕೋಲ್ಕತ್ತ ನೈಟ್ರೈಡರ್ಸ್ – ₹ 23.75 ಕೋಟಿ

ಅರ್ಶದೀಪ್ ಸಿಂಗ್: ಪಂಜಾಬ್ ಕಿಂಗ್ಸ್ – ₹ 18 ಕೋಟಿ

ಯುಜವೇಂದ್ರ ಚಾಹಲ್: ಪಂಜಾಬ್ ಕಿಂಗ್ಸ್ – ₹ 18 ಕೋಟಿ

ಜಾಸ್ ಬಟ್ಲರ್: ಗುಜರಾತ್ ಟೈಟನ್ಸ್ – ₹ 15.75 ಕೋಟಿ

ಕೆ.ಎಲ್.ರಾಹುಲ್: ಡೆಲ್ಲಿ ಕ್ಯಾಪಿಟಲ್ಸ್ – ₹ 14 ಕೋಟಿ

ಟ್ರೆಂಟ್ ಬೌಲ್ಟ್: ಮುಂಬೈ ಇಂಡಿಯನ್ಸ್ – ₹ 12.50 ಕೋಟಿ

ಜೋಫ್ರಾ ಆರ್ಚರ್: ರಾಜಸ್ಥಾನ ರಾಯಲ್ಸ್ – ₹ 12.50 ಕೋಟಿ

ಜೋಶ್ ಹ್ಯಾಜಲ್ವುಡ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – ₹ 12.50 ಕೋಟಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಬಿಡ್ನಲ್ಲಿ ಖರೀದಿಸಲಿಲ್ಲ.

ಲಖನೌ ತಂಡದಿಂದ ರಾಹುಲ್ ಅವರು ಬಿಡುಗಡೆಯಾದ ನಂತರ ಆರ್ಸಿಬಿಗೆ ಬರಲಿದ್ದಾರೆಂಬ ಮಾತುಗಳು ಕೇಳಿಬಂದಿದ್ದವು. ಮೆಗಾ ಹರಾಜಿನಲ್ಲಿ ಅವರನ್ನು ಆರ್ಸಿಬಿ ಖರೀದಿಸಲಿ ಎಂದು ಹಲವು ಅಭಿಮಾನಿಗಳೂ ಒತ್ತಾಯಿಸಿದ್ದರು. ಆದರೆ ರಾಹುಲ್ ಡೆಲ್ಲಿ ತಂಡದ ಪಾಲಾದರು.

ಈಚೆಗೆ ಆರ್ಸಿಬಿಯು ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಮತ್ತು ಯಶ್ ದಯಾಳ್ ಅವರನ್ನು ಬಿಟ್ಟು ಉಳಿದೆಲ್ಲ ಆಟಗಾರರನ್ನು ಬಿಡುಗಡೆ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾನುವಾರ ಬಿಡ್ನಲ್ಲಿ ತರಾತುರಿ ತೋರಲಿಲ್ಲ. ಬಹಳ ಎಚ್ಚರಿಕೆಯ ನಡೆಯನ್ನು ಇಟ್ಟಿತು. ತನ್ನ ಪರ್ಸ್ನಲ್ಲಿ ₹ 83 ಕೋಟಿ ಇಟ್ಟುಕೊಂಡಿದ್ದ ಆರ್ಸಿಬಿಯು ಅಳೆದು, ಸುರಿದು ಹೆಜ್ಜೆಯಿಟ್ಟಿತು. ಶ್ರೇಯಸ್ ಅಯ್ಯರ್ ಮತ್ತು ವೆಂಕಟೇಶ್ ಅಯ್ಯರ್ ಅವರ ಬಿಡ್ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. ಆದರೆ ಒಂದು ಹಂತದ ನಂತರ ಹಿಂದೆ ಸರಿಯಿತು.

ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ ಮತ್ತು ಫಿಲ್ ಸಾಲ್ಟ್ ಅವರನ್ನು ಖರೀದಿಸಿತು. ಆಸ್ಟ್ರೇಲಿಯಾದ ಜೋಷ್ ಹ್ಯಾಜಲ್ವುಡ್ ಅವರನ್ನು ಖರೀದಿಸುವ ಮೂಲಕ ಬೌಲಿಂಗ್ ವಿಭಾಗವನ್ನು ಬಲಪಡಿಸಿಕೊಳ್ಳುವತ್ತ ಚಿತ್ತ ನೆಟ್ಟಿತು.

ಆದರೆ ಈ ಬಿಡ್ನಲ್ಲಿ ಅಚ್ಚರಿಯ ಸಂಗತಿಯೆಂದರೆ ವೆಂಕಟೇಶ್ ಅಯ್ಯರ್ ಅವರು ₹ 23.75 ಕೋಟಿ ಗಳಿಸಿದ್ದು ಕಳೆದ ಋತುಗಳಲ್ಲಿ ಕೆಕೆಆರ್ ತಂಡದ ಆಲ್ರೌಂಡರ್ ಆಗಿ ಮಿಂಚಿದ್ದರು. ಈಚೆಗೆ ಅವರನ್ನು ಬಿಡುಗಡೆ ಮಾಡಿದ್ದ ಕೆಕೆಆರ್ ತಂಡವೇ ಅವರನ್ನು ಖರೀದಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವೆಂಕಟೇಶ್ ಅವರನ್ನು ಖರೀದಿಸಲು ಕೆಕೆಆರ್ಗೆ ತೀವ್ರ ಪೈಪೋಟಿಯೊಡ್ಡಿತು.

ಜೋಶ್ ಹ್ಯಾಜಲ್ವುಡ್: ₹ 12.50 ಕೋಟಿ

ಫಿಲ್ ಸಾಲ್ಟ್:  ₹ 11.50 ಕೋಟಿ

ಜಿತೇಶ್ ಶರ್ಮಾ: ₹ 11 ಕೋಟಿ

ಲಿಯಾಮ್ ಲಿವಿಂಗ್ಸ್ಟೋನ್: ₹ 8.75 ಕೋಟಿ

ರಸಿಕ್ ಧರ್: ₹ 6 ಕೋಟಿ

ಸುಯಾಷ್ ಶರ್ಮಾ: ₹ 2.60 ಕೋಟಿ

.IPL Mega Auction Highlights: ಪಂತ್, ಶ್ರೇಯಸ್, ವೆಂಕಟೇಶ್ಗೆ ಜಾಕ್ಪಾಟ್!.
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾದ ಜೆದ್ದಾದಲ್ಲಿ ಭಾನುವಾರ ಆರಂಭವಾಗಿದೆ. ಮೊದಲ ದಿನದ ಹರಾಜಿನಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಭಾರಿ ಮೊತ್ತ ಜೇಬಿಗಿಳಿಸಿದ್ದಾರೆ. ಎಚ್ಚರಿಕೆಯ ನಡೆ ಪ್ರದರ್ಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪರ್ಸ್ನಲ್ಲಿ ₹ 83 ಕೋಟಿ ಇಟ್ಟುಕೊಂಡು ಇಂದು ಬಿಡ್ಗೆ ಇಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.