ರಾಯಬಾಗ: ಸಾಲದ ಬಾಧೆ ತಾಳಲಾರದೆ ತಾಲ್ಲೂಕಿನ ಹೊಸ ದಿಗ್ಗೇವಾಡಿ ಗ್ರಾಮದ ರೈತ ಬಸವರಾಜ ಭೀಮಪ್ಪ ಸಗರೆ (45) ರೈತ ಮರಕ್ಕೆ ನೇಣು ಹಾಕಿಕೊಂಡು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರಿಗೆ 1 ಎಕರೆ 10ಗುಂಟೆ ಜಮೀನಿದ್ದು, ಸಾಗುವಳಿ ಹಾಗೂ ಅಭಿವೃದ್ಧಿಯ ಸಲುವಾಗಿ ಗ್ರಾಮದ ಮಹಾಲಿಂಗೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಲ್ಲಿ ₹1.80 ಲಕ್ಷ, ವಿವಿಧ ಉದ್ದೇಶ ಗ್ರಾಮೀಣ ಕೃಷಿ ಪ್ರಾಥಮಿಕ ಸಂಘದಲ್ಲಿ ₹1 ಲಕ್ಷ, ಡಾ.ಪ್ರಭಾಕರ ಕೋರೆ ಸೌಹಾರ್ದ ಸಹಕಾರಿ ಸಂಘದಲ್ಲಿ₹1.50ಲಕ್ಷ, ಬಾವನ ಸೌಂದತ್ತಿ ಕೆನರಾ ಬ್ಯಾಂಕ್ ಶಾಖೆಯಲ್ಲಿ₹50 ಸಾವಿರ, ಚಿಕ್ಕೋಡಿ ಐಡಿಎಫ್ ಸಿ ಬ್ಯಾಂಕ್ನಲ್ಲಿ ₹1.50ಲಕ್ಷ ರೂಪಾಯಿ ಸೇರಿ ಒಟ್ಟು ₹6.30ಸಾವಿರ ಸಾಲ ಮಾಡಿಕೊಂಡಿದ್ದರು.

ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ನಾಶವಾಗಿದ್ದವು. ಸಾಲ ಪಾವತಿಸಲು ಆಗದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಶೋಭಾ ಸಗರೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.