ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಹೊಸ ವರ್ಷ 2024 ಅನ್ನು ಭಾನುವಾರ ಮಧ್ಯರಾತ್ರಿ ಸಂಭ್ರಮದಿಂದ ಸ್ವಾಗತಿಸಲಾಯಿತು.

ನಿರುಪಯುಕ್ತ ವಸ್ತುಗಳಿಂದ ಸಿದ್ಧಪಡಿಸಿದ್ದ ‘ಓಲ್ಡ್ ಮ್ಯಾನ್’ ಪ್ರತಿಕೃತಿಗಳನ್ನು ವಿವಿಧ ಬಡಾವಣೆಗಳಲ್ಲಿ ದಹಿಸಿ, 2023ಕ್ಕೆ ವಿದಾಯ ಹೇಳಲಾಯಿತು.

ಮಕ್ಕಳು, ಯುವಕ–ಯುವತಿಯರು, ಮಹಿಳೆಯರು ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ನಗರದ ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಅದ್ಧೂರಿ ಪಾರ್ಟಿಗಳನ್ನು ಆಯೋಜಿಸಲಾಗಿತ್ತು. ರಷ್ಯನ್ ಬೆಡಗಿಯರ ನೃತ್ಯ ಜನರನ್ನು ರಂಜಿಸಿತು. ಸಂಗೀತಕ್ಕೆ ತಕ್ಕಂತೆ ಜನರು ಕುಣಿದು ಕುಪ್ಪಳಿಸಿದರು. ಪರಸ್ಪರರು ಶುಭಾಶಯ ವಿನಿಮಯ ಮಾಡಿಕೊಂಡರು. ಕೆಲವರು ಕೇಕ್ ಕತ್ತರಿಸಿದರೆ, ಇನ್ನೂ ಕೆಲವರು ಪಟಾಕಿ, ಸಿಡಿಮದ್ದು ಸಿಡಿಸಿ ಖುಷಿಪಟ್ಟರು.

‘ವೀಕೆಂಡ್’ ಸಹ ಆಗಿದ್ದರಿಂದ ಜಿಲ್ಲೆಯ ವಿವಿಧ ಪ್ರವಾಸಿತಾಣಗಳಿಗೆ ಜನರ ದಂಡೇ ಹರಿದುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.