ಬೆಳಗಾವಿ: ನಗರದ ಕ್ಯಾಂಟೋನ್ಮೆಂಟ್ನ ವಸತಿ ಪ್ರದೇಶವನ್ನು ಮಹಾನಗರ ಪಾಲಿಕೆಯಲ್ಲಿ ಸೇರಿಸುವುದಕ್ಕೆ ಸಂಬಂಧಿಸಿದಂತೆ ಕ್ಯಾಂಟೋನ್ಮೆಂಟ್ ಬೋರ್ಡ್ನ ಒಟ್ಟು 1763.78 ಎಕರೆ ಜಾಗೆಯ ಸಮೀಕ್ಷೆ ಕೈಗೊಂಡು 15 ದಿನಗಳೊಳಗಾಗಿ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ನೀಡಿದ್ದಾರೆ.

ರಕ್ಷಣಾ ಸಚಿವಾಲಯದ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ವಿಡಿಯೊ ಸಂವಾದ ಸಭೆಯ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕ್ಯಾಂಟೋನ್ಮೆಂಟ್ ಪ್ರದೇಶಗಳನ್ನು ಪಾಲಿಕೆಯ ವ್ಯಾಪ್ತಿಗೆ ವರ್ಗಾಯಿಸುವ ಜಿಲ್ಲಾ ಮಟ್ಟದ ಜಂಟಿ ಸಲಹಾ ಸಮಿತಿ ರಚಿಸುವಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಕೋರಲಾಗಿದೆ. ಸಲಹಾ ಸಮಿತಿಯು ವರದಿ ಸಲ್ಲಿಸಬೇಕು. ಎ-1 ವರ್ಗದ ಜಾಗ 929.19 ಎಕರೆ ಜಾಗ, ಎಲ್.ಎಂ.ಎ. ಲೋಕಲ್ ಮಿಲಿಟರಿ ಅಥಾರಿಟಿ (ಐಒಂ) ಅವರ ನಿರ್ವಹಣೆಗೆ ಒಳಪಟ್ಟಿದೆ. ಎ-2 ವರ್ಗದ ಜಾಗ 37.94 ಎಕರೆ ಮಿಲಿಟರಿ ಮೀಸಲು ಪ್ರದೇಶ ಡಿಇಒ ಡಿಫೆನ್ಸ್ ಎಸ್ಟೇಟ್ ಆಫೀಸರ್ ನಿರ್ವಹಣೆಗೆ ಒಳಪಟ್ಟಿದೆ. ಸದರಿ ಜಾಗೆಯ ಪೈಕಿ 0.83 ಎಕರೆ ಜಾಗೆಯನ್ನು ಪಾಲಿಕೆಗೆ ಹಸ್ತಾಂತರಿಸಲು ಕರಡು ಪ್ರಸ್ತಾವ ತಯಾರಿಸಲಾಗಿದೆ. ಉಳಿದ ಜಾಗೆಯ ಸರ್ವೆ ನಂಬರ್ವಾರು ವಿಸ್ತೀರ್ಣ ನಮೂದಿಸಿ ಭೌತಿಕ ವಸ್ತುಸ್ಥಿತಿ ಹಾಗೂ ಯಾವ ಉದ್ದೇಶಕ್ಕಾಗಿ ಬಳಕೆಯಾಗುತ್ತಿರುವ ಬಗ್ಗೆ ವರದಿ ನೀಡುವಂತೆ’ ತಿಳಿಸಿದರು.

‘ಇದರ ಹೊರತಾಗಿ ಉಳಿದ ಜಾಗೆಯ ಸರ್ವೆ ನಂಬರ್ವಾರು ವಿಸ್ತೀರ್ಣ ನಮೂದಿಸಿ ಭೌತಿಕ ವಸ್ತುಸ್ಥಿತಿ ಹಾಗೂ ಯಾವ ಉದ್ದೇಶಕ್ಕಾಗಿ ಬಳಕೆಯಾಗುತ್ತಿದೆ ಎಂಬ ಬಗ್ಗೆ ವರದಿ ನೀಡಿಬೇಕು’ ಎಂದೂ ಮೊಹಮ್ಮದ್ ರೋಷನ್ ತಿಳಿಸಿದರು.

‘ಬಿ-1 ವರ್ಗದ 43.78 ಎಕರೆ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದೆ. ಬಿ-2 ವರ್ಗದ 84.60 ಎಕರೆ ರಾಜ್ಯ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದೆ. ಬಿ-3 ವರ್ಗದ 319.97 ಎಕರೆ ಸದರಿ ಜಾಗೆಯು ಡಿಇಒ ಡಿಫೆನ್ಸ್ ಎಸ್ಟೇಟ್ ಆಫೀಸರ್ ನಿರ್ವಹಣೆಗೆ ಒಳಪಟ್ಟಿದೆ. ಅದೇ ರೀತಿ ಬಿ-4 ವರ್ಗದ 169.52 ಎಕರೆಯ ಭೌತಿಕ ವಸ್ತುಸ್ಥಿತಿ ಮತ್ತು ಜಾಗೆಯನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಮತ್ತು ಕ್ಯಾಂಟೋನ್ಮೆಂಟ್ ಬೋರ್ಡಿನ ಆಡಳಿತ ನಿರ್ವಹಣೆಗೆ ಒಳಪಟ್ಟಿರುವ 98.28 ಎಕರೆ ಸಿ-ಲ್ಯಾಂಡ್ ಬಳಕೆಯ ಕುರಿತೂ ವರದಿ ನೀಡಿ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ನಗರ ಯೋಜನಾ ನಿರ್ದೇಶಕರು, ಪಾಲಿಕೆಯ ಉಪ ಆಯುಕ್ತರು, ಕಾನೂನು ಅಧಿಕಾರಿಗಳು ಮತ್ತು ಸಹಾಯಕ ಕಂದಾಯ ಅಧಿಕಾರಿಗಳು ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.