ಬೆಳಗಾವಿ: ಜೂನ್ ಮೊದಲನೇ ವಾರದಲ್ಲಿ ಇಲ್ಲಿಂದ ಹುಬ್ಬಳ್ಳಿಗೆ ಸ್ಥಳಾಂತರವಾಗುತ್ತಿರುವ ಏರ್ ಇಂಡಿಯಾ ವಿಮಾನದ (ಏರ್ ಬಸ್) ಬದಲಿಗೆ, ಪರ್ಯಾಯ ವ್ಯವಸ್ಥೆಗೆ ಹಾಗೂ ಹೆಚ್ಚಿನ ವಿಮಾನಗಳು ಹಾರಾಡುವಂತೆ ಮಾಡುವ ನಿಟ್ಟಿನಲ್ಲಿ ಸಂಸದ ಸುರೇಶ ಅಂಗಡಿ ಪ್ರಯತ್ನ ಆರಂಭಿಸಿದ್ದಾರೆ.

ಏರ್ ಇಂಡಿಯಾ ಅಧ್ಯಕ್ಷ ಅಶ್ವಿನ್ ಲೋಹಾನಿ ಅವರನ್ನು ನವದೆಹಲಿಯಲ್ಲಿ ಸೋಮವಾರ ಭೇಟಿಯಾದ ಅವರು, ಏರ್ ಅಲಯನ್ಸ್ನ ಮತ್ತೊಂದು ವಿಮಾನದ ಕಾರ್ಯಾಚರಣೆ ಆರಂಭಿಸುವಂತೆ ಕೋರಿದ್ದಾರೆ. ‘ಮನವಿಗೆ ಅವರಿಂದ ಸಕಾರಾತ್ಮಕ ಸ್ಪಂದನೆ ಬಂದಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಸಂಜೆ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ಅವರನ್ನೂ ಭೇಟಿಯಾದ ಅವರು, ‘ಸಾಂಬ್ರಾದಿಂದ ಹೆಚ್ಚಿನ ವಿಮಾನಗಳ ಕಾರ್ಯಾಚರಣೆ ನಡೆಸಬೇಕು’ ಎಂದು ಕೋರಿದ್ದಾರೆ. ‘ಸ್ಪೈಸ್ ಜೆಟ್ ಕಂಪನಿಯು ಜೂನ್ 20ರಿಂದ ಬೆಳಗಾವಿ–ಮುಂಬೈ–ಬೆಂಗಳೂರು, ಮುಂಬೈ–ಬೆಳಗಾವಿ–ಬೆಂಗಳೂರು ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸಲಾಗುವುದು. ಅಲ್ಲಿವರೆಗೆ ಸಹಕರಿಸುವಂತೆ ಕೋರಿದ್ದಾರೆ’ ಎಂದು ಸಂಸದರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.