ಬೆಳಗಾವಿ: ಖಾನಾಪುರ ಸಮೀಪದ ನೇರಸಾ ಗೌಳಿವಾಡದಲ್ಲಿ ಗುರುವಾರ ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟು ಮರಕ್ಕೆ ನೇತುಹಾಕಿದ ನವಜಾತ ಗಂಡು ಶಿಶು ಪತ್ತೆಯಾಗಿದೆ.

ಮಗು ಅಳುವ ಶಬ್ದ ಕೇಳಿದ ಗ್ರಾಮದ ಆಶಾ ಕಾರ್ಯಕರ್ತೆ ಸತ್ಯವತಿ ದೇಸಾಯಿ ಅವರು ಮಗುವನ್ನು ರಕ್ಷಿಸಿದರು. 108 ಆಂಬುಲೆನ್ಸ್ ಕರೆಸಿ ಶಿಶುವನ್ನು ಖಾನಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದರು.

ಚಿಕ್ಕ ಮಕ್ಕಳ ತಜ್ಞ ಡಾ.ಪವನ ಪೂಜಾರಿ ಶಿಶುವಿಗೆ ಚಿಕಿತ್ಸೆ ನೀಡಿದರು. ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು.

ಶಿಶು 2.5 ಕೆ.ಜಿ ತೂಕವಿದೆ. ಬುಧವಾರ ರಾತ್ರಿ ಇಡೀ ಮರದಲ್ಲೇ ಬಿಟ್ಟಿದ್ದರಿಂದ ನಿತ್ರಾಣಗೊಂಡಿದೆ. ಹಾಗಾಗಿ, ಜಿಲ್ಲಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿದೆ. ಹಸುಳೆಯನ್ನು ಯಾರು ಬಿಟ್ಟುಹೋಗಿದ್ದಾರೆ ಎಂಬ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.