ಮುಗಳಖೋಡ (ಬೆಳಗಾವಿ ಜಿಲ್ಲೆ): ಕುಡಚಿ ಶಾಸಕ ಪಿ.ರಾಜೀವ್ ಪಟ್ಟಣದಲ್ಲಿ ಸೋಮವಾರ ನಡೆಸಿದ ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪಟ್ಟಣದ 6ನೇ ವಾರ್ಡ್ನ ಕರಿಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಪಿ.ರಾಜೀವ್ ಸಭೆ ನಡೆಸಿದ್ದರು. ಇದರಲ್ಲಿ ಪಾಲಕರ ಜತೆಗೆ ಹಲವು ಮಕ್ಕಳೂ ಪಾಲ್ಗೊಂಡಿದ್ದರು. ಕೆಲವು ಬಾಲಕರಿಗೆ ಬಿಜೆಪಿ ಚಿಹ್ನೆಯ ಟಿಷರ್ಟ್ ಹಾಕಲಾಗಿತ್ತು. ಮತ್ತೆ ಕೆಲವು ಮಕ್ಕಳ ಕೊರಳಲ್ಲಿ ಬಿಜೆಪಿಯ ಶಾಲು ಹೊದಿಸಲಾಗಿತ್ತು. ಸಭೆಯಲ್ಲಿ ಕುಳಿತಿದ್ದ ಬಾಲಕಿಯನ್ನು ಮಾತನಾಡಿಸಿದ ಶಾಸಕ, ‘ಪಿ.ರಾಜೀವ್ ಅವರಿಗೇ ವೋಟ್ ಹಾಕುವಂತೆ ಹೇಳಬೇಕು ಪುಟ್ಟಿ’ ಎಂದು ಪದೇಪದೇ ಹೇಳಿದ್ದು ಕೂಡ ವಿಡಿಯೊದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.