ಬೈಲಹೊಂಗಲ: ‘ಸ್ವಾಭಿಮಾನಕ್ಕೆ ಹೆಸರಾಗಿರುವ ಬೈಲಹೊಂಗಲ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಅನ್ಯಾಯ ಪ್ರಶ್ನಿಸುವುದು ಈ ಮಣ್ಣಿನ ಗುಣ’ ಎಂದು ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ ಹೇಳಿದರು.

ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಡೆದ 44ನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವನ್ನೂ ಹೋರಾಟ ಮಾಡಿಯೇ ಪಡೆದುಕೊಳ್ಳುವ ಸ್ಥಿತಿ ಹೆಚ್ಚಾಗುತ್ತಿದೆ. ಪ್ರತಿಭೆ ಒಳ್ಳೆಯ ಕಾರ್ಯಕ್ಕೆ ಬಳಕೆ ಆಗಬೇಕು.

‘ಅಣ್ಣ-ತಮ್ಮ, ತಂದೆ-ತಾಯಿ, ಅಕ್ಕ-ತಂಗಿಯರ ಜತೆಗೆ ಉತ್ತಮ ಸಂಬಂಧ ಹೊಂದಬೇಕು. ಇವುಗಳನ್ನು ಕಳೆದುಕೊಂಡ ಬದುಕು ಶೂನ್ಯ. ನೊಂದವರ ಕಣ್ಣೀರು ಒರೆಸುವುದೇ ಜೀವನದ ಧ್ಯೇಯ ಆಗಬೇಕು’ ಎಂದರು.

ಬೆಂಗಳೂರು ಅಗ್ನಿ ಅವಿಶನ್ ಚೀಫ್ ಪೈಲಟ್ ಅರವಿಂದ ಶರ್ಮಾ ಮಾತನಾಡಿ, ‘ಜಗತ್ತು ವಿಶಾಲವಾಗಿದೆ. ಓದು ಜೀವನದ ಆದ್ಯತೆಯಾಗಲಿ’ ಎಂದರು.

ಮಾಜಿ ಶಾಸಕ ವಿಶ್ವನಾಥ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಆದರ್ಶ ವಿದ್ಯಾರ್ಥಿಯಾಗಿ ಪರ್ವತಗೌಡ ಪಾಟೀಲ, ಆದರ್ಶ ವಿದ್ಯಾರ್ಥಿನಿಯಾಗಿ ಮಾನಸಾ ಬಾಳೇಕುಂದರಗಿ ಆಯ್ಕೆಯಾದರು.

ಕಾರ್ಯದರ್ಶಿ ಆರ್.ಪಿ.ಬಡಸ, ಖಜಾಂಚಿ ಎಂ.ವಿ.ವಾಲಿ, ಸ್ಥಾಯಿ ಸಮಿತಿ ಚೇರಮನ್ ಸಂಜೀವಗೌಡ ಪಾಟೀಲ, ಸಾವಯವ ಕೃಷಿಕ ಬಾಬುರಾವ್ ಪಾಟೀಲ, ಬೆಂಗಳೂರು ಇಂಡಿಯನ್ ಏರ್ಲೈನ್ಸ್ ಪೈಲಟ್ ಅಕ್ಷಯ ಪಾಟೀಲ, ಪ್ರೀಯಾ ಪಾಟೀಲ, ಬಿ.ಎ.ಪಾಟೀಲ, ಬಿ.ಜಿ.ಹರಕುಣಿ, ವಿ.ಎಸ್.ಬೆಲ್ಲದ, ಆರ್.ಎಸ್.ಗಡತರನವರ, ಪ್ರಾಚಾರ್ಯ ಎಂ.ಸಿ.ಬಿರಾದಾರ, ಮುಕುಂದ ಕುಲಕರ್ಣಿ, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಇದ್ದರು.

ಇದೇ ವೇಳೆ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಸಂಸ್ಥೆ ಕಾರ್ಯದರ್ಶಿ, ಶಾಸಕ ಮಹಾಂತೇಶ ಕೌಜಲಗಿ ಅವರು ಬೆಳಿಗ್ಗೆ ಶಾಲೆಗೆ ಭೇಟಿ ನೀಡಿ ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.